More

    ಗೃಹ ಸಾಲಗಳ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿದ ಎಸ್​ಬಿಐ

    ನವದೆಹಲಿ: ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್​ ಆಗಿರುವ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ತನ್ನ ಗೃಹ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿದೆ.

    30 ಲಕ್ಷ ರೂಪಾಯಿ ಗೃಹ ಸಾಲದ ಮೇಲೆ ವಾರ್ಷಿಕ ಶೇ 6.7 ರಷ್ಟು ಬಡ್ಡಿದರ ಇರಲಿದೆ. 30 ಲಕ್ಷದಿಂದ 75 ಲಕ್ಷದವರೆಗೆ ವಾರ್ಷಿಕ ಶೇ 6.95 ರಷ್ಟು ಬಡ್ಡಿ ಇರಲಿದೆ. 75 ಲಕ್ಷ ರೂ ಮೇಲೆ ಸಾಲ ಬೇಕಾದರೆ ವಾರ್ಷಿಕ ಶೇ 7.05 ರಷ್ಟು ಬಡ್ಡಿ ಅನ್ವಯ ಆಗಲಿದೆ. ಮೇ 1 ರಿಂದಲೇ ಇದು ಜಾರಿಗೆ ಬಂದಿದೆ ಎಂದು ಎಸ್​ಬಿಐ ಶನಿವಾರ ಹೇಳಿದೆ.

    ಇನ್ನು ವಿಶೇಷವಾಗಿ ಮಹಿಳೆಯರು ಎಸ್​ಬಿಐ ನಲ್ಲಿ ಸಾಲ ಪಡೆದರೆ ಬಡ್ಡಿ ದರದ ಮೇಲೆ ಅವರಿಗೆ 5 ಬಿಪಿಎಸ್​ ಪಾಯಿಂಟ್​ಗಳ ವಿಶೇಷ ರಿಯಾಯಿತಿ ಇರಲಿದೆ ಎಂದು ಬ್ಯಾಂಕ್ ಹೇಳಿದೆ.

    ಗ್ರಾಹಕರಿಗೆ ಗೃಹ ಸಾಲ ಸುಲಭವಾಗಿ ನಿರೀಕ್ಷಿತ ಮಟ್ಟದಲ್ಲಿ ಸಿಗಲಿ ಎಂಬ ಉದ್ದೇಶದಿಂದ ಬಡ್ಡಿದರವನ್ನು ಗಮನಾರ್ಹವಾಗಿ ಇಳಿಸಲಾಗಿದೆ ಎಂದು ಎಸ್​ಬಿಐ ಹೇಳಿದೆ.

    ಪರಪುರುಷನೊಂದಿಗೆ ವಿವಾಹಿತೆಯ ಸಲ್ಲಾಪ! ದೇವಸ್ಥಾನ ಸಮೀಪದಲ್ಲೇ ಆ ರಾತ್ರಿ ನಡೆಯಿತು ಭೀಕರ ದುರಂತ

    ಕೋವಿಡ್ ಕೆಲಸ ಮಾಡಲು ವೈದ್ಯ ಸಮೂಹ ಹಿಂದೇಟು: 18 ಹುದ್ದೆಗಳ ಸಂದರ್ಶನಕ್ಕೆ ಬಂದವರು ಇಬ್ಬರೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts