More

    ಕೋವಿಡ್ ಕೆಲಸ ಮಾಡಲು ವೈದ್ಯ ಸಮೂಹ ಹಿಂದೇಟು: 18 ಹುದ್ದೆಗಳ ಸಂದರ್ಶನಕ್ಕೆ ಬಂದವರು ಇಬ್ಬರೇ!

    ಮೈಸೂರು: ಕೋವಿಡ್ ಕೆಲಸ ಮಾಡಲು ವೈದ್ಯ ಸಮೂಹ ಹಿಂದೇಟು ಹಾಕುತ್ತಿರುವುದು ಮೈಸೂರಿನಲ್ಲಿ ನಡೆದಿದೆ. ಕೋವಿಡ್ ಸಂಬಂಧಿ ಕೆಲಸ ಮಾಡಲು ಮೈಸೂರು ಜಿಲ್ಲಾಡಳಿತ 18 ವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿತ್ತು. ಆದರೆ, ನೇರ ಸಂದರ್ಶನಕ್ಕೆ ಬಂದವರು ಇಬ್ಬರು, ಅದರಲ್ಲಿ ಕೆಲಸಕ್ಕೆ ಹಾಜಾರಾಗಲು ಒಪ್ಪಿದ್ದು ಒಬ್ಬರು ಎಂಬುದು ತಿಳಿದು ಬಂದಿದೆ.

    ಇದರಿಂದ ಮೈಸೂರು ಜಿಲ್ಲಾಡಳಿತಕ್ಕೆ ಕೋವಿಡ್ ನಿರ್ವಹಣೆಯಲ್ಲಿ ತಲೆಬಿಸಿ ಹೆಚ್ಚಾಗಿದೆ. ಏ.28 ರಂದು 54 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮುಂದಾಗಿದ್ದ ಡಿಎಚ್ಒ ಕಚೇರಿ, ಎಂಬಿಬಿಎಸ್ ವೈದ್ಯರು, ನರ್ಸಿಂಗ್, ಡಿ ಗ್ರೂಪ್ ನೌಕರರು ಸೇರಿದಂತೆ ತಲಾ 18 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ವೈದ್ಯರಿಗೆ 60 ಸಾವಿರ ಸಂಬಳ ನಿಗದಿ ಮಾಡಲಾಗಿತ್ತು.

    ಆದರೂ ಕೆಲಸ ಮಾಡಲು ವೈದಕೀಯ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಶಾಸಕ ಸಾ.ರಾ.ಮಹೇಶ್ ಕಳವಳ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎರಡು ತಿಂಗಳ ಮುಂಚೆ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಎಂಬಿಬಿಎಸ್ ಮಾಡಿದವರೆಲ್ಲ ಹೊರ ರಾಜ್ಯಗಳಿಗೆ ಹೋದ ಮೇಲೆ ಅರ್ಜಿ ಅಹ್ವಾನಿಸಿದರೆ ಯಾರು ಬರ್ತಾರೆ?. ಕೆ.ಆರ್.ನಗರ ತಾಲೂಕಿಗಾಗಿ ತಲಾ ಒಂದು ಲಕ್ಷ ರೂ‌. ಸಂಬಳ ಕೊಟ್ಟು 3 ವೈದ್ಯರನ್ನು ನೇಮಕ ಮಾಡಿದ್ದೇನೆ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.

    ಭಾರತಕ್ಕೆ ಹೀಗೊಂದು ಸ್ಥೈರ್ಯ- ಜಗತ್ಪ್ರಸಿದ್ಧ ನಯಾಗರ ಫಾಲ್ಸ್‌ನಲ್ಲಿ ಬೆಳಗಲಿದೆ ತ್ರಿವರ್ಣ ಧ್ವಜ…

    ಪ್ರತಿದಿನ 1 ಲಕ್ಷ ರೋಗಿಗಳಿಗೆ ಉಚಿತವಾಗಿ ಪ್ರಾಣವಾಯು ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts