More

    ಸಮಾನತೆ ಹೋರಾಟ ನಡೆಸಿದ್ದ ಸಾವಿತ್ರಿಬಾಯಿ ಫುಲೆ

    ಬೇಲೂರು: ಸಮಾಜದಲ್ಲಿ ಶೋಷಿತಕ್ಕೊಳಗಾದ ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿಯೂ ಸಮಾನತೆ ಹಾಗೂ ಮೂಲ ಹಕ್ಕು ದೊರಕಿಸಿ ಕೊಟ್ಟ ಕೀರ್ರಿ ಆಧುನಿಕ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ವಿದ್ಯಾವಿಕಾಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್ ಅಭಿಪ್ರಾಯಪಟ್ಟರು.

    ಪಟ್ಟಣದ ಡಾ.ಅಂಬೇಡ್ಕರ್ ವಿವಿದೋದ್ಧೇಶ ಸಹಕಾರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಅವರ 194 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶತಶತಮಾನಗಳಿಂದ ಶಿಕ್ಷಣ ಸಮಾನತೆ ಇಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಶೋಷಿತ ಸಮುದಾಯಗಳ ನಾಲಿಗೆ ಮೇಲೆ ಮೊಟ್ಟ ಮೊದಲ ಬಾರಿಗೆ ಅಕ್ಷರ ಬರೆದವರು ಸಾವಿತ್ರಿ ಬಾಯಿ ಫುಲೆ ಎಂದು ಸ್ಮರಿಸಿದರು.

    ಅಂದು ಹೆಣ್ಣುಮಕ್ಕಳಿಗೆ ವಿದ್ಯೆ ನಿರಾಕರಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ನೋವು ಮತ್ತು ಅಪಮಾನಗಳನ್ನು ಮೆಟ್ಟಿನಿಂತು ಎಲ್ಲ ವರ್ಗದ ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣ ಕೊಡಲು 14 ಶಾಲೆ ತೆರೆದು ಅಕ್ಷರ ಕಲಿಸಿದರು. ಇವರಿಗೆ ಬ್ರಿಟಿಷ್ ಸರ್ಕಾರ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಎಂದು ಬಿರುದು ನೀಡಲಾಗಿತ್ತು. ಇವರ ತತ್ವ-ಸಿದ್ಧಾಂತ, ಆದರ್ಶ ಜೀವನ ಮನುಕುಲಕ್ಕೆ ಮಾದರಿ. ಇಂದಿನ ಯುವ ಪೀಳಿಗೆ ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

    ಸಹಕಾರ ಸಂಘದ ಸದಸ್ಯರಾದ ದೇವರಾಜ್ ಹೊಸಳ್ಳಿ, ಮಂಜುನಾಥ್. ಉಮೇಶ್. ಎಚ್.ಡಿ.ರಮೇಶ್. ಚಂದ್ರು. ಕುಮಾರ್‌ಗುಪ್ತ. ರಘು. ವಿರೂಪಾಕ್ಷ ರಾವಣ್. ರಂಗಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts