More

    ಸಾವಿತ್ರಿ ಬಾಯಿ ಪುಲೆ ಅಕ್ಷರ ಕ್ರಾಂತಿಯ ಸಾಧಕಿ

    ಸೊರಬ: ಸಮಾಜದಲ್ಲಿ ಜಾತೀಯತೆ, ಮೂಢನಂಬಿಕೆ, ಅಂಧಾನುಕರಣೆಗಳ ಪ್ರಭಾವದಿಂದ ಅಕ್ಷರ ಜ್ಞಾನವೇ ದೂರವಾಗಿತ್ತು. ಅ ಸಂದರ್ಭದಲ್ಲಿ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಜಾಗೃತಿ ಮೂಡಿಸಿದ ಮಹಾನ್ ಚೇತನ ಸಾವಿತ್ರಿ ಬಾಯಿ ಪುಲೆ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.

    ಪಟ್ಟಣದ ರಂಗ ಮಂದಿರದಲ್ಲಿ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಪುಲೆ ಅವರ ಜನ್ಮ ದಿನಾಚರಣೆ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸಮಾಜದಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬಾರದು ಎಂಬ ಕಾಲದಲ್ಲಿ ಫಾತೀಮಾ ಶೇಖ್ ಮತ್ತು ಸಾವಿತ್ರಿ ಬಾಯಿ ಪುಲೆ ಅವರು ಜತೆಯಾಗಿ ಸ್ತ್ರೀ ಶಿಕ್ಷಣಕ್ಕಾಗಿ ಹೋರಾಡಿ ಅಕ್ಷರ ಕ್ರಾಂತಿಗೆ ಅಡಿಪಾಯ ಹಾಕಿದ್ದರು. ಇಂದು ನಿರಂತರವಾಗಿ ಹೆಣ್ಣಿನ ಮೇಲೆ ಶೋಷಣೆ, ಅತ್ಯಾಚಾರ, ಸ್ತ್ರೀ ಭ್ರೂಣ ಹತ್ಯೆಗಳು ನಡೆಯುತ್ತಿವೆ. ಇಂತಹ ದೌರ್ಜನ್ಯಗನ್ನು ತಡೆಗಟ್ಟಲು ಬುದ್ಧ, ಬಸವ, ಅಂಬೇಡ್ಕರ್ ಅವರ ಹೋರಾಟದ ಮಾರ್ಗದರ್ಶನ ಅಗತ್ಯವಿದೆ. ಅವರ ಆದರ್ಶಗಳನ್ನು ಎಲ್ಲರು ಪಾಲಿಸುವ ಅಗತ್ಯವಿದೆ ಎಂದರು.
    ಬಿಇಒ ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು. ಘಟಕದ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದಯಾನಂದ ಕಲ್ಲೇರ, ಲಿಂಗರಾಜ್ ಒಡೆಯರ, ಹಾಲೇಶ್ ನವುಲೆ, ರಾಘವೇಂದ್ರ, ಶಿವಕುಮಾರ್, ಸತ್ಯನಾರಾಯಣ, ಸವಿತಾ, ಪ್ರವೀಣ್, ಸುನಂದಾ, ರತ್ನಮ್ಮ, ಗಾಯತ್ರಿ, ಸುಮಿತ್ರಾ, ಅನ್ನಪೂರ್ಣಾ, ಸುಧಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts