More

    ಕುಡಿಯುವ ನೀರಿಗೆ ರೂ. 60.83 ಲಕ್ಷ

    ಸೊರಬ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಸಾಗರ ಉಪವಿಭಾಗಾಧಿಕಾರಿ, ಪುರಸಭೆ ಆಡಳಿತಾಧಿಕಾರಿ ಆರ್.ಯತೀಶ್ ಅಧ್ಯಕ್ಷತೆಯಲ್ಲಿ 68.59 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.

    31.15 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಯಿತು. ಇದರಲ್ಲಿ ಕುಡಿಯುವ ನೀರಿಗೆ 60.83 ಲಕ್ಷ, ಪುರಸಭೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ 57.50 ಲಕ್ಷ, ಮುಖ್ಯರಸ್ತೆ ಡಿವೈಡರ್‌ಗಳಿಗೆ ಬೀದಿ ದೀಪಗಳ ಅಳವಡಿಕೆಗೆ 53.23 ಲಕ್ಷ, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ 19.83 ಲಕ್ಷ, ಪ್ರಕೃತಿ ವಿಕೋಪ ನಿರ್ವಹಣೆಗೆ 28.75 ಲಕ್ಷ, ಮುಕ್ತಿವಾಹನ ಖರೀದಿಗೆ 20 ಲಕ್ಷ, ಸಂಚಾರ ಶೌಚಗೃಹಕ್ಕಾಗಿ 12.34 ಲಕ್ಷ, ಪಟ್ಟಣದಲ್ಲಿ ಸಿಸಿ ಟಿವಿ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಲು 45.62 ಲಕ್ಷ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
    ಸದಸ್ಯ ಎಂ.ಡಿ.ಉಮೇಶ್ ಮಾತನಾಡಿ, ಪಟ್ಟಣದಲ್ಲಿ ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗೆ ನಿರ್ಮಿಸಿದ ರಸ್ತೆಯನ್ನು ಅಗೆದು ನಾಶ ಮಾಡಲಾಗುತ್ತಿದೆ. ಯಾವ ಸದಸ್ಯರ ಗಮನಕ್ಕೂ ತಾರದೆ ಜೆಸಿಬಿ ಬಳಸಿ ಅವೈಜ್ಞಾನಿಕವಾಗಿ ರಸ್ತೆ ಅಗೆಯಲಾಗುತ್ತಿದೆ. ಜೆಸಿಬಿ ಬಳಸದೆ ಕಾಮಗಾರಿ ನಡೆಸಬೇಕು. ನಾಶಪಡಿಸಿದ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಎಸಿ ಆರ್.ಯತೀಶ್, ಸದಸ್ಯರ ವಿಶ್ವಾಸ ಪಡೆದು ವೈಜ್ಞಾನಿಕವಾಗಿ ಕಾಮಗಾರಿ ನಡೆಸಬೇಕು. ಕಾಮಗಾರಿ ಮುಗಿದ ನಂತರ ನಾಶಪಡಿಸಿದ ರಸ್ತೆಯನ್ನು ಗುಣಮಟ್ಟದಲ್ಲಿ ನಿರ್ಮಿಸಿಕೊಡಬೇಕು ಎಂದು ಎಇಇ ಅವರಿಗೆ ತಾಕೀತು ಮಾಡಿದರು.
    ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ಸದಸ್ಯರಾದ ಶ್ರೀರಂಜನಿ, ಈರೇಶ್ ಮೇಸ್ತ್ರಿ, ಮಧುರಾಯ್ ಜಿ. ಶೇಟ್, ನಟರಾಜ್, ಪ್ರಭು ಮೇಸ್ತ್ರಿ, ಅನ್ಸರ್ ಅಹ್ಮದ್, ಪ್ರೇಮಾ, ಆಫ್ರಿನ್, ಸುಲ್ತಾನ ಬೇಗಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts