More

    ಲಂಬಾಣಿ ಭಾಷೆ- ಸಂಸ್ಕೃತಿ ಉಳಿಸಿ, ಬೆಳೆಸಿ: ಸಂತ ಸೇವಾಲಾಲ್​ರ 281ನೇ ಜಯಂತ್ಯುತ್ಸವದಲ್ಲಿ ಮನೋಹರ್ ಐನಾಪುರ ಕರೆ

    ಬೆಂಗಳೂರು: ಲಂಬಾಣಿ ಸಮುದಾಯದವರು ತಮ್ಮ ಮಕ್ಕಳಿಗೆ ಲಂಬಾಣಿ ಭಾಷೆ ಕಲಿಸಿ, ಬೆಳೆಸುವ ಮೂಲಕ ಸಮುದಾಯದ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕಿದೆ ಎಂದು ಮಾಜಿ ಶಾಸಕ ಮನೋಹರ್ ಐನಾಪುರ ಹೇಳಿದ್ದಾರೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್​ರ 281ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಲಂಬಾಣಿ ಸಮುದಾಯದ ಜನ ತಮ್ಮ ಮಕ್ಕಳಿಗೆ ಇತರ ಭಾಷೆಗಳನ್ನು ಕಲಿಸುತ್ತಿದ್ದಾರೆ. ಇದರಿಂದ ಲಂಬಾಣಿ ಭಾಷೆ ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಹೀಗೇ ಮುಂದುವರಿದರೆ ಭಾಷೆ ಸಂಪೂರ್ಣವಾಗಿ ಮರೆಯಾಗುತ್ತದೆ. ಆದ್ದರಿಂದ ಲಂಬಾಣಿ ಭಾಷೆ ಉಳಿಸುವ ಕಾರ್ಯ ಮಾಡಬೇಕು ಎಂದರು.

    ವಿಧಾನಪರಿಷತ್​ನ ಮಾಜಿ ಸದಸ್ಯೆ ಜಲಜಾ ನಾಯಕ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಲಂಬಾಣಿ ಸಮುದಾಯದ ಯುವಕರು ಸೈನಿಕರಿಗೆ ವ್ಯಾಪಾರಿಗಳ ಸೋಗಿನಲ್ಲಿ ಆಹಾರ ಒದಗಿಸುತ್ತಿದ್ದರು. ಆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಮ್ಮದೇ ರೀತಿಯಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.

    ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ, ಎಸ್.ರಂಗಪ್ಪ ಮತ್ತಿತರರಿದ್ದರು.

    ಏಕಾಗ್ರತೆಯಿಂದ ದೇವರನ್ನು ಒಲಿಸಿಕೊಂಡು ಸಮಾಜದ ಹಿತ ರಕ್ಷಣೆಗೆ ಶ್ರಮಿಸಿದ್ದರು. ಲಂಬಾಣಿ ಜನಾಂಗ ಯಾವುದೇ ತಪ್ಪುಗಳನ್ನು ಮಾಡದೆ ಜೀವನ ನಡೆಸಲು ಪ್ರೇರಣೆ ನೀಡಿದ್ದರು. ಅವರ ಆಚಾರ, ತತ್ವ ಸಿದ್ಧಾಂತಗಳನ್ನು ಅನುಸರಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು.

    | ಡಾ.ಸಣ್ಣರಾಮಪ್ಪ ನಿವೃತ್ತ ಪ್ರಾಧ್ಯಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts