More

    ದಾವಣಗೆರೆಯಲ್ಲಿ ಅಖಿಲ ಭಾರತ ಲಂಬಾಣಿ ಉತ್ಸವ

    ಶಿವಮೊಗ್ಗ: ದಾಖಲೆರಹಿತ ಹಳ್ಳಿಗಳನ್ನು ಕಂದಾಯ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಅಖಿಲ ಭಾರತ ಲಂಬಾಣಿ ಜನಾಂಗದ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಉತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಆಹ್ವಾನಿಸಲಾಗಿದೆ ಎಂದು ಮಾಜಿ ಸಚಿವ ಶಿವಮೂರ್ತಿ ನಾಯಕ್ ತಿಳಿಸಿದರು.
    ಇತ್ತೀಚೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜನ್ಮದಿನಾಚರಣೆ ನಡೆದ ಸ್ಥಳದಲ್ಲೇ ಲಂಬಾಣಿ ಉತ್ಸವ ಆಚರಿಸುವ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ಬಳಿಯೂ ಪ್ರಸ್ತಾಪಿಸಿದ್ದೇವೆ. ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದರೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಮೀಡಿಯಾ ಹೌಸ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ದ್ರೌಪತಿ ಮುರ್ಮು ಅವರು ಬುಡುಕಟ್ಟು ಜನಾಂಗದಿಂದ ಬಂದು ಉನ್ನತ ಸ್ಥಾನಕ್ಕೇರಿದ್ದಾರೆ. ಹಾಗಾಗಿ ಲಂಬಾಣಿ ಉತ್ಸವಕ್ಕೆ ಅವರೇ ಸೂಕ್ತ ಅತಿಥಿ. ಹಲವು ಮೂಲಗಳಿಂದ ಅವರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಅವರಿಂದ ಬುಡುಕಟ್ಟು ಜನಾಂಗದ ಸಾಧಕರಿಗೆ ಸನ್ಮಾನವನ್ನೂ ಮಾಡಿಸಲಾಗುವುದು ಎಂದರು.
    ರಾಜ್ಯದಲ್ಲಿ 58 ಸಾವಿರ ದಾಖಲೆರಹಿತ ಹಾಡಿ, ಹಟ್ಟಿ, ಲಂಬಾಣಿ ತಾಂಡಾಗಳಿವೆ. ಅವುಗಳನ್ನು ಕಂದಾಯ ವ್ಯಾಪ್ತಿಗೆ ಒಳಪಡಿಸುವುದು ಉತ್ಸವದ ಮೂಲ ಉದ್ದೇಶವಾಗಿದೆ. ಇದೇ ವೇಳೆ ನಾಡು-ನುಡಿ, ಸಮಾಜಕ್ಕಾಗಿ ದುಡಿದವರಿಗೆ ಧರ್ಮಗುರುಗಳ ಸಮ್ಮುಖದಲ್ಲೇ ಪಾದಪೂಜೆ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ, ರಾಘವೇಂದ್ರ ನಾಯಕ್, ಸತೀಶ್ ನಾಯಕ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts