More

    ಮರಗಳಿಗೆ ರಾಖಿ ಕಟ್ಟಿ ‘ಪರಿಸರ ಉಳಿಸಿ’ ಜಾಗೃತಿ ಅಭಿಯಾನ

    ಮೊರಾದಾಬಾದ್‌:‘ಪರಿಸರವನ್ನು ಉಳಿಸಿ’, ‘ಮರಗಳನ್ನು ಉಳಿಸಿ, ಜೀವನವನ್ನು ಉಳಿಸಿ’ ಎಂಬ ಸಂದೇಶಗಳೊಂದಿಗೆ ಮರಗಳಿಗೆ ರಾಖಿಗಳನ್ನು ಕಟ್ಟುವ ಮೂಲಕ ಇಲ್ಲಿಯ ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ರಕ್ಷಾಬಂಧನ ಹಬ್ಬವನ್ನು ಆಚರಿಸಿದರು.
    ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಶಿಲ್ಪಿ ಸೈನಿ, “ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ನಾವು ಪ್ರಯತ್ನಿಸಿದ್ದು, ಮರಗಳಿಗೆ ರಾಖಿಯನ್ನು ಕಟ್ಟುತ್ತಿದ್ದೇವೆ. ‘ಪರಿಸರವನ್ನು ಉಳಿಸಿ’ ಮತ್ತು ‘ಮರಗಳನ್ನು ಉಳಿಸಿ, ಜೀವ ಉಳಿಸಿ’ ಎಂಬ ಸಂದೇಶಗಳೊಂದಿಗೆ ನಾವು ಮರಗಳು ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ಹೇಳಲು ಬಯಸುತ್ತೇವೆ ಎಂದಿದ್ದಾರೆ.

    ಇದನ್ನೂ ಓದಿ:  26 ವರ್ಷಗಳ ಬಳಿಕ ಪಾತಾಳಕ್ಕಿಳಿದಿದೆ ಚಿನ್ನ; ಹಳದಿ ಲೋಹ ಆಕರ್ಷಣೆ ಕಳೆದುಕೊಂಡರೆ ಲಾಭ ಯಾರಿಗೆ?

    “ಜನಸಂಖ್ಯೆ ಹೆಚ್ಚುತ್ತಿದ್ದಂತೆ, ಮರಗಳ ಮಾರಣಹೋಮವೂ ಹೆಚ್ಚಾಗುತ್ತಿದೆ. ಮರಗಳ ರಕ್ಷಣೆ ಮೂಲಕ ಪರಿಸರ ಸಂರಕ್ಷಿಸುವುದು ನಮ್ಮ ಕರ್ತವ್ಯ.
    “ರಕ್ಷಾಬಂಧನವನ್ನು ರಕ್ಷಣೆಯ ಸಂಕೇತವೆಂದು ಕರೆಯಲಾಗುತ್ತದೆ. ಹಾಗೆಯೇ ಮರಗಳು ನಮ್ಮನ್ನು ರಕ್ಷಿಸುವುದರಿಂದ ನಾವೂ ಅವುಗಳನ್ನು ರಕ್ಷಿಸಲು ನಾವು ಬಯಸುತ್ತೇವೆ. ಎಂದರು.
    ಇಂದು ಆಚರಿಸಲಾಗುತ್ತಿರುವ ರಕ್ಷಾಬಂಧನ ಹಬ್ಬ, ಸಹೋದರ -ಸಹೋದರಿಯರ ನಡುವಿನ ವಿಶಿಷ್ಟ ಬಾಂಧವ್ಯದ ಆಚರಣೆಯಾಗಿದೆ. ಸಹೋದರಿಯರು ರಾಖಿಯನ್ನು ಕಟ್ಟುವುದು, ಸಹೋದರ – ಸಹೋದರಿಯರ ನಡುವಿನ ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ನಂಬಿಕೆಯನ್ನು ಸಂಕೇತಿಸುತ್ತದೆ.

    ನೀಟ್ – ಸೂಪರ್ ಸ್ಪೆಷಾಲಿಟಿ ಪರೀಕ್ಷೆ ಸೆಪ್ಟೆಂಬರ್ 15 ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts