More

    ಗುಪ್ತಚರ ಅಧಿಕಾರಿ ಕೊಲೆಗೆ ಯತ್ನಿಸಿದನೇ ಸೌದಿ ಯುವರಾಜ? ಕೋರ್ಟ್​ಗೆ ಸಲ್ಲಿಸಿದ ದಾಖಲೆಯಲ್ಲಿದೆ ಸ್ಫೋಟಕ ಮಾಹಿತಿ

    ಟೊರೊಂಟೋ: ಸೌದಿ ಅರೇಬಿಯಾದ ಯುವರಾಜ ಮಹಮ್ಮದ್​ ಬಿನ್​ ಸಲ್ಮಾನ್​ ವಿರುದ್ಧ ಮತ್ತೊಂದು ಕೊಲೆ ಯತ್ನದ ಆರೋಪ ಕೇಳಿ ಬಂದಿದೆ.
    ತನ್ನ ವಿರೋಧಿ ರಾಜಕುಮಾರನ ಗುಪ್ತಚರ ವಿಭಾಗದ ಪ್ರಮುಖನೊಬ್ಬನನ್ನು ಕೊಲ್ಲಿಸಲು 50 ಜನರನ್ನು ಕಳುಹಿಸಿದ್ದರು ಎಂದು ಕೋರ್ಟ್​ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

    ಸೌದಿ ಯುವರಾಜಕುಮಾರ ಮಹಮ್ಮದ್​ ಬಿನ್​ ಸಲ್ಮಾನ್​ ಹಾಗೂ ರಾಜಕುಟುಂಬದ ಪ್ರಮುಖ ಮಹಮ್ಮದ್​ ಬಿನ್​ ನಯೀಫ್​ ನಡುವಣ ವೈರತ್ವ ಹೊಸದೇನಲ್ಲ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಆತನ ಗುಪ್ತಚರ ವಿಭಾಗದ ಪ್ರಮುಖ ಸಾದ್​ ಅಲ್​ಜಬ್ರಿಯನ್ನು ಹತ್ಯೆ ಮಾಡಲು ಟೈಗರ್​ ಸ್ಕ್ವಾಡ್​ನ 50 ಜನರನ್ನು ಕೆನಡಾಗೆ ಕಳುಹಿಸಿದ್ದ ಎಂದು ಟೊರಂಟೋ ಕೋರ್ಟ್​ಗೆ ಸಲ್ಲಿಸಿದ ದಾಖಲೆಯಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ; ಎರಡು ಮದುವೆಗಳಿಂದ 1.5 ಕೋಟಿ ರೂ. ಕಮಾಯಿ; ಮೂರನೇ ಮದುವೆಯಾಗಿ ವಿದೇಶಕ್ಕೆ ಹಾರಬೇಕಿದ್ದ ವಧುವಿಗೆ ಕೈಕೊಟ್ಟಿದ್ದೇನು ? 

    ಟರ್ಕಿ ರಾಜಧಾನಿ ಇಸ್ತಾನ್​ಬುಲ್​ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಪತ್ರಕರ್ತ ಜಮಾಲ್​ ಖಸ್ತೋಗಿಯನ್ನು ಹತ್ಯೆ ಮಾಡಿಸಿದ ಆರೋಪವೂ ಸೌದಿ ಯುವರಾಜನ ಮೇಲಿದೆ.

    ಖಸ್ತೋಗಿಯನ್ನು ಹತ್ಯೆಗೈದ ಒಂದು ವಾರದಲ್ಲಿಯೇ ತನ್ನನ್ನು ಹತ್ಯೆ ಮಾಡಲು 50 ಜನರನ್ನು ಸೌದಿ ಯುವರಾಜ ಕಳುಹಿಸಿದ್ದ ಎಂದು ಕೋರ್ಟ್​ಗೆ ನೀಡಿದ ದಾಖಲೆಯಲ್ಲಿ ಸಾದ್​ ಅಲ್​ಜಬ್ರಿ ಹೇಳಿಕೆ ನೀಡಿದ್ದಾನೆ.

    ಇದನ್ನೂ ಓದಿ; ರಿಯಾಳಿಂದ 2 ಐಷಾರಾಮಿ ಫ್ಲ್ಯಾಟ್ಸ್​ ಖರೀದಿ; ವಿಚಾರಣೆಗೆ ಬಂದಿದ್ದು ಯಾರ ಕಾರಿನಲ್ಲಿ?; ಇ.ಡಿಯಿಂದ ಬಯಲಾಗಲಿದೆ ಸತ್ಯ 

    ತನ್ನ ಲೋಕೇಷನ್​ ಪತ್ತೆ ಹಚ್ಚಿದ ಹತ್ಯೆಕೋರರು ಕೆನಡಾಕ್ಕೆ ಬರುತ್ತಿದ್ದಾಗ ಅಮೆರಿಕ- ಕೆನಡಾ ಗಡಿಭಾಗದಲ್ಲಿ ಕೆನಡಾ ಪೊಲೀಸರಿಂದ ಬಂಧನಕ್ಕೊಳಗಾದರು ಎಂದು ಜಬ್ರಿ ಹೇಳಿದ್ದಾನೆ.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts