More

    ಜೇಬಲ್ಲಿ ಹಣವಿಲ್ಲದಿದ್ದರೂ ವಿಮಾನದಲ್ಲಿ ಪ್ರಯಾಣಿಸಬಹುದು! ವಿವರ ಇಲ್ಲಿದೆ..

    ರಿಯಾದ್(ಸೌದಿ ಅರೇಬಿಯಾ): ವಿಮಾನದಲ್ಲಿ ಪ್ರಯಾಣಿಸುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಜೇಬಲ್ಲಿ ಹಣ ವಿರಬೇಕಲ್ಲ? ಹಣವಿದ್ದರೂ ಸಮಯಕ್ಕೆ ಟಿಕೆಟ್​ ಖರೀದಿಗೆ ಹಣ ಸಿಗಬೇಕಲ್ಲ? ಹಾಗಾದರೆ ಇನ್ನು ಮುಂದೆ ಇಂತಹ ಚಿಂತೆ ಬಿಡಿ. ಹಣವಿದ್ದವರೂ, ಇಲ್ಲದವರೂ ವಿಶ್ವದ ಪ್ರಮುಖ ಏರ್​ಲೈನ್ಸ್​ನಲ್ಲಿ ಪ್ರಯಾಣಿಸಬಹುದು. ಸೌದಿ ಅರೇಬಿಯಾದ ಫ್ಲೈನಾಸ್ ಏರ್ ಇಂತಹದೊಂದು ಯೋಜನೆ ಜಾರಿಗೊಳಿಸಿದೆ. ವಿವರ ಇಲ್ಲಿದೆ…

    ಇದನ್ನೂ ಓದಿ: ಸಹಕಾರ ಬ್ಯಾಂಕುಗಳಲ್ಲಿನ ಸಾಲದ ಮೇಲಿನ ಬಡ್ಡಿ ಮನ್ನಾ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
    ಫ್ಲೈನಾಸ್ ಏರ್ ಇನ್ಸ್ಟಾಲ್ಮೆಂಟ್ ಫ್ಲೈಟ್ ಟಿಕೆಟ್ ಯೋಜನೆಯನ್ನು ಪರಿಚಯಿಸಿದೆ. ಅದರಂತೆ ವಿಮಾನ ಟಿಕೆಟ್‌ ಖರೀದಿಸುವವರು ಇನ್ನು ಮುಂದೆ ಪೂರ್ತಿ ಹಣ ಒಟ್ಟಿಗೆ ಕಟ್ಟಲೇ ಬೇಕೆಂದೇನೂ ಇಲ್ಲ. ಕಂತುಗಳಲ್ಲಿ ಸಹ ಪಾವತಿಸಬಹುದು. ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣ ಟಿಕೆಟ್‌ಗಳು ಕಂತು ಆಧಾರದ ಮೇಲೆ ಲಭ್ಯವಿರುತ್ತವೆ.

    ಸೌದಿ ಅರೇಬಿಯಾ ಮತ್ತು ಗಲ್ಫ್ ಪ್ರದೇಶದ ಪ್ರಮುಖ ಶಾಪಿಂಗ್ ಮತ್ತು ಪಾವತಿ ಫಿನ್‌ಟೆಕ್ ವೇದಿಕೆಯಾದ ಫ್ಲೈನಾಸ್ ಮತ್ತು ತಮಾರಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದಕ್ಕೆ ಫ್ಲೈನಾಸ್‌ನ ಡಿಜಿಟಲ್ ಸೇಲ್ಸ್ ಮತ್ತು ಲಾಯಲ್ಟಿಯ ಉಪಾಧ್ಯಕ್ಷ ಅಲಿ ಜಸ್ಸಿಮ್ ಮತ್ತು ತಮಾರಾ ಕಂಪನಿಯ ಸ್ಥಾಪಕ ಪಾಲುದಾರ ಮತ್ತು ಮಹಾನಿರ್ದೇಶಕ ತುರ್ಕಿ ತಾರಿಕ್ ಬಿನ್ ಜರ್ರಾ ಸಹಿ ಹಾಕಿದರು.

    ಫ್ಲೈನಾಸ್ ಯೋಜನೆಯಂತೆ ವಿಮಾನ ಟಿಕೆಟ್‌ನ ಮೊತ್ತವನ್ನು ನಾಲ್ಕು ತಿಂಗಳ ಅವಧಿಯಲ್ಲಿ ಮಾಸಿಕ ಕಂತುಗಳಲ್ಲಿ ಪಾವತಿಸಿದರೆ ಸಾಕು. ಫ್ಲೈನಾಸ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಹೊಸ ಸೇವೆಯನ್ನು ಪಡೆಯಬಹುದು. ಫ್ಲೈನಾಸ್ ಪಾವತಿ ಆಯ್ಕೆಗಳನ್ನು ಮತ್ತಷ್ಟು ವೈವಿಧ್ಯಗೊಳಿಸಲು ಸಂಸ್ಥೆ ಯೋಜಿಸಿದೆ.

    ಗ್ರಾಹಕರಿಗೆ ಇನ್ನೂ ಉತ್ತಮ ಸೇವೆಗಳನ್ನು ಒದಗಿಸಲು ಡಿಜಿಟಲ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಸಾಧಿಸುವ ಹಿನ್ನೆಲೆಯಲ್ಲಿ ಇಂತಹ ಪ್ರಯಾಣಿಕ ಸ್ನೇಹಿ ಯೋಜನೆ ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ. ಫ್ಲೈ ನಾಸ್ ವಿಶ್ವದ ನಾಲ್ಕನೇ ಅತ್ಯುತ್ತಮ ಬಜೆಟ್ ವಿಮಾನಯಾನ ಸಂಸ್ಥೆಯಾಗಿದೆ.

    ಹಳೆಯ ಹಾಸಿಗೆಯನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಹೋಗಿ 68 ಲಕ್ಷ ರೂ.ಪಂಗನಾಮ ಹಾಕಿಸಿಕೊಂಡ ಬೆಂಗಳೂರು ಟೆಕ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts