More

    ಹಳೆಯ ಹಾಸಿಗೆಯನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಹೋಗಿ 68 ಲಕ್ಷ ರೂ.ಪಂಗನಾಮ ಹಾಕಿಸಿಕೊಂಡ ಬೆಂಗಳೂರು ಟೆಕ್ಕಿ

    ಬೆಂಗಳೂರು: ಮತ್ತೊಂದು ಒಟಿಪಿ ಹಗರಣ ಬೆಂಗಳೂರಿನಲ್ಲಿ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಇಂಜಿನಿಯರ್ ಒಬ್ಬರು ತಮ್ಮ ಹಾಸಿಗೆಯನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ವೇಳೆ 68 ಲಕ್ಷ ರೂ. ಕಳೆದುಕೊಂಡಿರುವುದು ವರದಿಯಾಗಿದೆ. ‘ಆನ್‌ಲೈನ್ ಮಾರ್ಕೆಟ್‌ಪ್ಲೇಸ್‌OLX’ ನಲ್ಲಿ ಜಾಹೀರಾತು ನೀಡಿದ ಮೂರು ದಿನಗಳಲ್ಲಿ ಇಂಜಿನಿಯರ್ ಅನ್ನು ‘ಸೈಬರ್‌ಕ್ರೂಕ್ಸ್’ ಹ್ಯಾಕ್ ಮಾಡಿದ್ದಾರೆ. ಹಳೆಯ ಹಾಸಿಗೆ ಮಾರಾಟ ಮಾಡಲು ಹೋಗಿ 68 ಲಕ್ಷ ರೂಪಾಯಿ ನಷ್ಟವಾಗಿದೆ.  

    ಎಚ್‌ಎಸ್‌ಆರ್ ಲೇಔಟ್ ನಿವಾಸಿ ಇಂಜಿನಿಯರ್ ದೂರಿನ ಆಧಾರದ ಮೇಲೆ ಡಿಸೆಂಬರ್ 9 ರಂದು ಐಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಂಚಕರ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಾಹಿತಿ ಪ್ರಕಾರ, ಹಳೆಯ ಬೆಡ್ ಅನ್ನು 15 ಸಾವಿರ ರೂಪಾಯಿಗೆ ಮಾರಾಟ ಮಾಡುವುದಾಗಿ ಇಂಜಿನಿಯರ್ ಫೋಟೋ ಸಹಿತ ‘ಓಎಲ್ ಎಕ್ಸ್’ನಲ್ಲಿ ಜಾಹೀರಾತು ಹಾಕಿದ್ದಾರೆ. ಡಿ.6ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಇಂದಿರಾನಗರದ ಫರ್ನಿಚರ್ ಅಂಗಡಿಯ ಮಾಲೀಕ ರೋಹಿತ್ ಮಿಶ್ರಾ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಕರೆ ಮಾಡಿ ಹಾಸಿಗೆ ಖರೀದಿಸಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಕೊನೆಗೆ ಹಾಸಿಗೆಯನ್ನು 15,000 ರೂ.ಗೆ ಖರೀದಿಸಲು ಒಪ್ಪಿಕೊಂಡಿದ್ದಾರೆ.  

    ಹಣದ ಬಗ್ಗೆ ಮಾತನಾಡಿದ ನಂತರ, ವಂಚಕ ಡಿಜಿಟಲ್ ಪಾವತಿ ಅಪ್ಲಿಕೇಶನ್ ಮೂಲಕ ಹಣವನ್ನು ಕಳುಹಿಸುವುದಾಗಿ ಎಂಜಿನಿಯರ್‌ಗೆ ತಿಳಿಸಿದ್ದಾನೆ. ಸ್ವಲ್ಪ ಸಮಯದ ನಂತರ, ತಮ್ಮ (ಎಂಜಿನಿಯರ್) ‘ಯುಪಿಐ ಐಡಿ’ಗೆ ಹಣವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾನೆ. ಹಾಗಾಗಿ ತಾನು ಕಳುಹಿಸಿದ ‘ಯುಪಿಐ ಐಡಿ’ಗೆ ಇಂಜಿನಿಯರ್​​​ಗೆ ಹಣವನ್ನು ಕಳುಹಿಸಲು ಹೇಳಿ, ಆ ನಂತರ ತಾನೂ ಹಿಂತಿರುಗಿಸುತ್ತೇನೆ ಎಂದು ಹೇಳಿದ್ದಾನೆ. ಮೊದಲಿಗೆ ಇಂಜಿನಿಯರ್ 5 ರೂಪಾಯಿ ಕಳುಹಿಸಿದ್ದು, ಪ್ರತಿಯಾಗಿ ಆತ 10 ರೂ. ಕಳುಹಿಸಿದ್ದಾನೆ. ಆದರೆ ಇದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ 5, 000 ರೂ ಕಳುಹಿಸಲು ಹೇಳಿದ್ದಾನೆ. ಕೊನೆಗೆ ಟೆಕ್ಕಿ 5 ಸಾವಿರ ಕಳುಹಿಸಿದ ನಂತರ ವಂಚಕ 10 ಸಾವಿರ ಹಾಕಿದ್ದಾನೆ. ನಂತರ 7,500 ರೂ.ಗಳನ್ನು ಕಳುಹಿಸುವಂತೆ ಕೇಳಿದ್ದಾನೆ. ಕೊನೆಗೆ 15, 000 ರೂ ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಆಗ ಇಂಜಿನಿಯರ್ ಮತ್ತೆ ಹಣ ಹಾಕಿದ್ದಾರೆ. ಕೊನೆಗೆ ಆತ ನಾನು ನಿಮಗೆ ಆಕಸ್ಮಿಕವಾಗಿ 30 ಸಾವಿರ ರೂ. ಕಳುಹಿಸಿದ್ದೇನೆ. ಆದ್ದರಿಂದ ಆ ಹಣವನ್ನು ಕಳುಹಿಸಿ… ನಾನೊಂದು ಲಿಂಕ್ ಕಳುಹಿಸುವೆ ಒಟಿಪಿ ಶೇರ್ ಮಾಡಿ ಎಂದಿದ್ದಾನೆ. ಅಲ್ಲಿಂದ ಇಂಜಿನಿಯರ್​​​ ಹಣ ಕಳೆದುಕೊಳ್ಳುತ್ತಾ ಹೋಗಿದ್ದಾರೆ.   

    ಟೆಕ್ಕಿ ಒಟಿಪಿ ಹಂಚಿಕೊಂಡ ಮೇಲೆ 68 ಲಕ್ಷ ರೂಪಾಯಿಗಳಷ್ಟು ಹಣವನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಬ್ಯಾಂಕ್‌ಗಳು, ಎನ್‌ಸಿಪಿಐ ಮತ್ತು ಆರ್‌ಬಿಐ ಗ್ರಾಹಕರಿಗೆ ಪದೇ ಪದೇ ಎಚ್ಚರಿಕೆ ನೀಡಿದ್ದು, ಯಾರೊಂದಿಗೂ ಒನ್-ಟೈಮ್ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳಬೇಡಿ. ನೀವು ಆರ್ಡರ್ ಮಾಡುವ ಪ್ರಕ್ರಿಯೆಯಲ್ಲಿದ್ದರೆ ವಿಶ್ವಾಸಾರ್ಹ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿದ್ದರೆ ಮಾತ್ರ ಬಳಕೆದಾರರು ಅದನ್ನು ಬಳಸಬೇಕು ಎಂದು ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಹೀಗಾದ ತಕ್ಷಣವೇ ನಿಮ್ಮ ಖಾತೆಯ ಪಾಸ್‌ವರ್ಡ್‌ಗಳನ್ನು ಬದಲಾಯಿಸುವುದು ಮತ್ತು ಈ ಅನಧಿಕೃತ ವಹಿವಾಟಿನ ಕುರಿತು ನಿಮ್ಮ ಬ್ಯಾಂಕ್‌ಗೆ ತಿಳಿಸುವುದು ಮುಖ್ಯವಾಗಿದೆ ಎಂದು ತಿಳಿಸಲಾಗಿದೆ.  

    ಸಂಸತ್ ಭದ್ರತಾ ಲೋಪ: ಮೊಬೈಲ್‌ಗೆ ಬೆಂಕಿ ಹಚ್ಚಿದ್ದ ಆರೋಪಿ, ಲಲಿತ್ ವಿಚಾರಣೆ ವೇಳೆ ಬಹಿರಂಗ, ಘಟನೆ ಮರುಸೃಷ್ಟಿಗೆ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts