More

    ಬಾಲಿವುಡ್​ನ ಹಿರಿಯ ನಟ-ನಿರ್ದೇಶಕ ಸತೀಶ್​ ಕೌಶಿಕ್ ಹೃದಯಾಘಾತದಿಂದ ನಿಧನ

    ಮುಂಬೈ: ಬಾಲಿವುಡ್​ನ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್​ ಕೌಶಿಕ್​, ಬುಧವಾರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 67 ವರ್ಷ ವಯಸ್ಸಿನ ಸತೀಶ್​ ಕೌಶಿಕ್​, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

    ಇದನ್ನೂ ಓದಿ: ‘ಬೊಂಬೆ ಹೇಳುತೈತೆ’ ಮೂಲಕ ಹೊಸ ದಾಖಲೆ ಬರೆದ ಯತಿರಾಜ್

    ನಾಸಿರುದ್ದೀನ್​ ಷಾ ಅಭಿನಯದ ‘ಜಾನೇ ಭಿ ದೋ ಯಾರೋ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸತೀಶ್ ಕೌಶಿಕ್​, ‘ಮಿಸ್ಟರ್​ ಇಂಡಿಯಾ’ ಚಿತ್ರದ ಕ್ಯಾಲೆಂಡರ್​ ಪಾತ್ರದಿಂದ ಬಹಳ ಜನಪ್ರಿಯರಾಗಿದ್ದರು. ‘ರಾಮ್​ ಲಖನ್​’, ‘ಸಾಜನ್​ ಚಲೇ ಸಸುರಾಲ್​’, ‘ದೀವಾನಾ ಮಸ್ತಾನಾ’, ‘ಬಡೆ ಮಿಯಾ ಚೋಟೆ ಮಿಯಾ’, ‘ಘರ್​ವಾಲಿ ಬಹಾರ್​ವಾಲಿ’, ‘ಹಮ್ ಕಿಸೀ ಸೆ ಕಮ್​ ನಹೀ’ ಮತ್ತು ಇತ್ತೀಚೆಗೆ ಬಿಡುಗಡೆಯಾದ ‘ಛತ್ರಿವಾಲಿ’ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಸತೀಶ್​ ಅಭಿನಯದ ‘ಎಮರ್ಜೆನ್ಸಿ’ ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ. ಕಾಮಿಡಿ ಚಿತ್ರಗಳಿಗೆ ಹೆಚ್ಚು ಜನಪ್ರಿಯರಾಗಿದ್ದ ಸತೀಶ್​, ಗೋವಿಂದ ಅಭಿನಯದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

    ಬರೀ ನಟನಾಗಿಯಷ್ಟೇ ಅಲ್ಲ, ಅನಿಲ್​ ಕಪೂರ್​ ಮತ್ತು ಶ್ರೀದೇವಿ ಅಭಿನಯದ ‘ರೂಪ್​ ಕಿ ರಾನಿ ಚೋರೋನ್​ ಕಾ ರಾಜ’ ಮೂಲಕ ನಿರ್ದೇಶಕರೂ ಆದ ಸತೀಶ್​, ‘ಪ್ರೇಮ್​’, ‘ಹಮ್​ ಆಪ್ಕೆ ದಿಲ್​ ಮೆ ರೆಹ್ತೆ ಹೈ’, ‘ಹಮಾರೆ ದಿಲ್​ ಆಪ್ಕೆ ಪಾಸ್​ ಹೈ’, ‘ತೇರೆ ನಾಮ್​’, ‘ಕರ್ಜ್​’, ಢೋಲ್​’ ಮುಂತಾದ ಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು.

    ಬುಧವಾರ ಗುರ್​ಗಾಂವ್​ನಲ್ಲಿ ತಮ್ಮ ಸ್ನೇಹಿತನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಸತೀಶ್​ ಕೌಶಿಕ್​ ಅವರಿಗೆ ಎದೆ ನೋವು ಉಂಟಾಯಿತಂತೆ. ತಕ್ಷಣವೇ ತಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಅವರು ತಮ್ಮ ಡ್ರೈವರ್​ಗೆ ಹೇಳಿದರಂತೆ. ಆದರೆ, ಮಧ್ಯರಾತ್ರಿ ಒಂದು ಗಂಟೆಯ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಸತೀಶ್​ ಕೌಶಿಕ್​ ಅವರ ಆಪ್ತರೂ ಆಗಿರುವ ಅನುಪಂ ಖೇರ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಚಳಿ, ಕೇಕ್ ಮತ್ತು ಮುದ್ದಾಟ; ವಿದೇಶದಲ್ಲಿ ಬರ್ತಡೇ ಆಚರಿಸಿಕೊಂಡ ರಾಧಿಕಾ ಪಂಡಿತ್

    ಸತೀಶ್​ ಕೌಶಿಕ್​ ನಿಧನಕ್ಕೆ ಕಂಗನಾ ರಣಾವತ್​, ಮನೋಜ್​ ಬಾಜ್ಪೇಯಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

    ಬ್ರೆಸ್ಟ್‌ ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದ ನಟಿ ಹಂಸ ನಂದಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts