More

    ಬ್ರೆಸ್ಟ್‌ ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದ ನಟಿ ಹಂಸ ನಂದಿನಿ

    ಬೆಂಗಳೂರು: ಬ್ರೆಸ್ಟ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಂಸ ನಂದಿನಿ ಮಹಾಮಾರಿ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಮಹಿಳಾ ದಿನಾಚರಣೆಯ ಹಿನ್ನೆಲೆ, ಈ ವಿಚಾರ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಡಿಸೆಂಬರ್‌ 2021ರಲ್ಲಿ ಹಂಸ ನಂದಿನಿ ತಮಗೆ ಕ್ಯಾನ್ಸರ್‌ ಇರುವ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಕೇಶ ಮುಂಡನ ಮಾಡಿಸಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಾವು ಅನುಭವಿಸುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದರು. ಇದೀಗ ರೋಗದಿಂದ ಮುಕ್ತಿ ಪಡೆದಿರುವುದಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಒಂದು ತಿಂಗಳ ಕಾಲ ಕೀಟ ತಿಂದು, ತನ್ನ ಮೂತ್ರವನ್ನೇ ಕುಡಿದು ಬದುಕುಳಿದ!

    ನನಗೆ ಗ್ರೇಡ್ 3 ಕಾರ್ಸಿನೋಮಾ ಇರುವುದು ಗೊತ್ತಾಯಿತು. ಈ ಮೊದಲು ನನ್ನ ತಾಯಿ ಕೂಡ 18 ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡಿದರು. ಆದರೆ ದುರದೃಷ್ಟವಶಾತ್ ಆಕೆ ಮಹಾಮಾರಿ ಎದುರು ಸೋತಿದ್ದರು. ವಂಶಪಾರಂಪರ್ಯವಾಗಿ ನನಗೂ ಈ ಕ್ಯಾನ್ಸರ್​ ಬಂದಿದೆ ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

    ನನಗೆ ಕ್ಯಾನ್ಸರ್ ಸಂಪೂರ್ಣವಾಗಿ ಹರಡದಿದ್ದರೂ 16 ಕೀಮೋ ಥೆರಪಿ ಸೆಷೆನ್ಸ್ ಧೈರ್ಯವಾಗಿ ಮಾಡಿಸಿಕೊಂಡೆ. ಎಲ್ಲಾ ಮುಗಿತು ಎಂದುಕೊಳ್ಳುವ ಸಮಯದಲ್ಲಿ BRCA1 (ವಂಶಪಾರಂಪರ್ಯ ಸ್ತನ ಕ್ಯಾನ್ಸರ್) ಪಾಸಿಟಿವ್ ಎನ್ನುವುದು ಗೊತ್ತಾಯಿತು. ಕ್ಯಾನ್ಸರ್ ವಂಶಪಾರಂಪರ್ಯವಾಗಿ ಬಂದಿತ್ತು. ಮತ್ತೆ ಕ್ಯಾನ್ಸರ್ ಬರಬಹುದು ಎಂದು ವೈದ್ಯರು ಹೇಳಿದರು. 70% ರಷ್ಟು ಮತ್ತೆ ಕ್ಯಾನ್ಸರ್ ಬರುತ್ತೆ ಎಂದಾಗ ಅದಕ್ಕೆ ಇದ್ದಿದ್ದು ಒಂದೇ ಮಾರ್ಗ, ಇನ್ವಾಸಿವ್ ಪ್ರೊಫಿಲಾಕ್ಟಿಕ್ ಸರ್ಜರಿ. ಕಳೆದ ವರ್ಷ ಆ ಸರ್ಜರಿಯನ್ನು ಕೂಡ ಮಾಡಿಸಿಕೊಂಡೆ ಎಂದು ಹಂಸ ನಂದಿನಿ ಹೇಳಿದ್ದಾರೆ.

    ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ ರೀಲ್‌ ಚಿತ್ರೀಕರಿಸುವ ವೇಳೆ ಭೀಕರ ಅಪಘಾತ: ಮಹಿಳೆ ಸಾವು, ಇಬ್ಬರು ಅರೆಸ್ಟ್‌

    ಕ್ಯಾನ್ಸರ್‌ ಚಿಕಿತ್ಸೆಗಾಗಿ ತಲೆಕೂದಲು ತೆಗೆಸಿದ್ದ ಹಂಸನಂದಿನಿ ಈಗ ಮತ್ತೆ ಸಹಜಸ್ಥಿತಿಗೆ ಮರಳಿದ್ದಾರೆ. ಸಮುದ್ರ ತೀರದಲ್ಲಿ ತೆಗೆದ ಸೆಲ್ಫಿ ವಿಡಿಯೋವೊಂದನ್ನು ಹಂಸನಂದಿನಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ವರ್ಷದಲ್ಲಿ ಬಹಳಷ್ಟು ಸಂಭವಿಸಿದೆ. ಸದ್ಯಕ್ಕೆ ತಾನು ಚೆನ್ನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಕಮೆಂಟ್‌ ಮಾಡುತ್ತಾ, ಕ್ಯಾನ್ಸರ್‌ ಗೆದ್ದ ಬಂದ ನೀವು ಇನ್ಮುಂದೆ ಜೀವನದಲ್ಲಿ ಸಂತೋಷವಾಗಿರುತ್ತೀರಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

    ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ 13 ಮುಖಂಡರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts