More

    ಸ್ಮಶಾನದಲ್ಲಿ ‘ಫಾರ್ಚುನರ್​’ ಏರಲಿದ್ದಾರೆ ಜಾರಕಿಹೊಳಿ

    ಬೆಳಗಾವಿ: ಸ್ಮಶಾನದಲ್ಲಿ ಊಟ, ತಿಂಡಿ ಮಾಡಿ ಅಲ್ಲೇ ಮಲಗುವ ಮೂಲಕ ಮೌಢ್ಯದ ವಿರುದ್ಧ ಹೋರಾಟ ನಡೆಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

    ಮೌಢ್ಯತೆ ವಿರುದ್ಧ ಹೋರಾಡುತ್ತಿರುವ ಜಾರಕಿಹೊಳಿ, ತಾವು ಖರೀದಿಸಿರುವ ನೂತನ ಫಾರ್ಚುನರ್ ಕಾರಿಗೆ (KA-49, N-2023) ಸ್ಮಶಾನದಲ್ಲಿಯೇ ಚಾಲನೆ ನೀಡಲಿದ್ದಾರೆ. ಸದಾಶಿವ ನಗರದ ಸ್ಮಶಾನದಲ್ಲಿ ಜು.13ರ ಬೆಳಗ್ಗೆ 11ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, ತಾವು ಓಡಾಡುವ ವಾಹನವನ್ನು ಸ್ಮಶಾನದಿಂದಲೇ ಉದ್ಘಾಟಿಸಲು ಮುಂದಾಗಿದ್ದಾರೆ. ಇದನ್ನೂ ಓದಿರಿ  ಕ್ವಾರಂಟೈನ್ ಅಂದ್ರೆ ಹೀಗಿರಬೇಕು… ರಜೆಗೆ ಬಂದ ಸೈನಿಕರು ಹೊಲದಲ್ಲೇ ಏಕಾಂತ ವಾಸ

    ಈ ಕಾರ್ಯಕ್ರಮದಲ್ಲಿ ನಾಡಿನ ಐವರು ಹೆಸರಾಂತ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ಇಲ್ಲ. ಫೇಸ್​ಬುಕ್​ ಮತ್ತು ಯೂಟ್ಯೂಬ್​ನಲ್ಲಿ ನೇರಪ್ರಸಾರ ಆಗಲಿದೆ.

    ಹೊಸದಾಗಿ ಕಾರು, ಬೈಕ್​… ಹೀಗೆ ಯಾವುದೇ ವಾಹನ ಖರೀದಿಸಿದರೂ ಒಳ್ಳೆಯ ಮುಹೂರ್ತ ನೋಡಿ ದೇವಸ್ಥಾನದಲ್ಲಿ ಗಾಡಿಗೆ ಪೂಜೆ ಮಾಡಿಸುವುದು ರೂಢಿ. ಆದರೀಗ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ಮೌಢ್ಯತೆಗೆ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ.

    ಕರೊನಾ ಸೋಂಕಿತ ಮೃತದೇಹವನ್ನು ಎಳೆದಾಡಿದ ನಾಯಿಗಳು… ಬೆಚ್ಚಿಬಿದ್ದ ಸ್ಥಳೀಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts