More

    ಲಿಂಗಾಪುರ ಹುಲಿಗೆಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ

    ಸಾಸ್ವೆಹಳ್ಳಿ: ಹೋಬಳಿಯ ಲಿಂಗಾಪುರ ಗ್ರಾಮದೇವತೆ ಹುಲಿಗೆಮ್ಮ ದೇವಿಯ ನೂತನ ದೇವಾಲಯದಲ್ಲಿ ಮಂಗಳವಾರ ರಾಂಪುರ ಬೃಹ್ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಹಾಲಸ್ವಾಮಿ ಸಾನ್ನಿಧ್ಯದಲ್ಲಿ ಮೂರ್ತಿ ಸ್ಥಾಪನೆ, ಗೋಪುರ ಕಳಸಾರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿದವು.

    ಕಳೆದ ಮೂರು ದಿನಗಳಿಂದ ದೇವಾಲಯದ ಆವರಣದಲ್ಲಿ ಕಿರಣ್ ಶಾಸ್ತ್ರಿ ಅವರ ಪುರೋಹಿತ ತಂಡದಿಂದ ಸಂಕಲ್ಪ ಸೇವೆ, ಮಹಾಗಣಪತಿ ಪೂಜೆ, ವಾಸ್ತು ಕಳಸ ಪೂಜೆ ಮತ್ತಿತರ ಪೂಜಾ ಕಾರ್ಯಗಳು ನಡೆದವು.

    ಸೋಮವಾರ ಸಂಜೆ ವಾದ್ಯ ಮೇಳಗಳೊಂದಿಗೆ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ಮಂಗಳವಾರ ಮುಂಜಾನೆ ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನಂತರ ಹುಲಿಗೆಮ್ಮ ದೇವಿಯ ಮೂರ್ತಿ ಸ್ಥಾಪನೆ ಮಾಡಲಾಯಿತು.

    ಸಂಜೆ ದೇವಾಲಯದಲ್ಲಿ ದೇವಿಯ ತೊಟ್ಟಿಲು ಪೂಜೆ, ಜೋಗತಿಯರ ಪಡ್ಲಿಗೆಗೆ ಹೋಳಿಗೆ ತುಂಬುವ ಕಾರ್ಯಕ್ರಮ ನಡೆದವು. ಮೂರು ದಿನ ದೇವಾಲಯದ ಆಡಳಿತ ಮಂಡಳಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts