More

    ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ ಸಂಗೀತ ಮತ್ತು ಸಾಹಿತ್ಯ ಲೋಕದ ಮೇರುಪರ್ವತ: ಮಹೇಶ್ವರ ಸ್ವಾಮೀಜಿ

    ವಿಜಯವಾಣಿ ಸುದ್ದಿಜಾಲ ಗದಗ
    ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ ಅವರು ಸಾಹಿತ್ಯ ಮತ್ತು ಸಂಗೀತ ೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ ಎಂದು ಅಡವೀಂದ್ರಸ್ವಾಮಿ ಮಠದ ಧರ್ಮದಶಿರ್ ಮಹೇಶ್ವರಸ್ವಾಮೀಜಿ ಹೊಸಳ್ಳಿಮಠ ಹೇಳಿದರು.
    ನಗರದ ಅಡವೀಂದ್ರಸ್ವಾಮಿ ಮಠ ಹಾಗೂ ಶ್ರೀಗುರು ಪಂಚಾರಿ ಸೇವಾ ಸಮಿತಿ ಸಹಯೋಗದಲ್ಲಿ ಇತ್ತೀಚಿಗೆ ಸಂಗೀತ ಹಾಗೂ ಸಾಹಿತ್ಯ ಸೇವೆಗಾಗಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪಡೆದ ಡಾ. ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ಅಭಿನಂಧನಾ ಸಮಾರಂಭದಲ್ಲಿ ಸಮ್ಮುಖವಹಿಸಿ ಅವರು ಮಾತನಾಡಿದರು.
    ಕಲಿಕೇರಿ ಅವರು ಸಂಗೀತದೊಂದಿಗೆ ನಾಟಕ, ಸಾಹಿತ್ಯ ಜನಪದದ ಅಭಿರುಚಿ ಮೂಡಿಸಿ ಸಾವಿರಾರು ಕಲಾವಿದರಿಗೆ ತಮ್ಮ ವಿದ್ಯೆಯನ್ನು ದಾರೆ ಎರಿದಿದ್ದಾರೆ. ಪುಟ್ಟರಾಜ ಗವಾಯಿಗಳವರ ಶಿಷ್ಯರಾಗಿ ಸಂಗೀತ, ಸಾಹಿತ್ಯ, ನಾಟಕಗಳನ್ನು ರಚಿಸಿ ಗುರುವಿನ ಗುಲಾಮನಾಗಿ ಸಂಗೀತ ಹಾಗೂ ಸಾಹಿತ್ಯ ಲೋಕಕ್ಕೆ ತಮ್ಮದೆಯಾದ ವಿಶೇಷ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಲಿಂಗಯ್ಯಶಾಸ್ತ್ರಿಜೀ ಸಿದ್ದಾಪೂರ ಅವರು, ಯಾವುದೇ ಸಾಂಪ್ರದಾಯಿಕ ಉನ್ನತ ಶಿಣ, ಪದವಿ ಅಥವಾ ಸ್ನಾತಕೋತ್ತರ ಪದವಿಗಳಿಲ್ಲದೆ ಸಾಹಿತ್ಯ ಬರವಣಿಗೆಯ ಆರು ಸಾವಿರ ಪುಟಗಳನ್ನು ಪ್ರಕಟಿಸಿದ್ದಾರೆ. ಕಲಿಪುರೇಶ ಮತ್ತು ಕಲಿಪುರಾಧೀಶ್ವರ ಎಂಬ ಕಾವ್ಯನಾಮಗಳಲ್ಲಿ ವಚನಗಳನ್ನು ರಚಿಸಿರುವ ಅವರು ಗಾನಭಾರತಿ, ಭಾವ ಭಗವದ್ಗೀತೆ, ಪಂಚಾರ ಸುಪ್ರಭಾತ ಮುಂತಾದ ಕವನ ಸಂಕಲನಗಳನ್ನು, ಪರಿಚಯ ಪ್ರಭಾ, ಗುರುಪರಂಪರ ಪ್ರಭಾ, ಕೀರ್ತನ ಕಲೆ, ಮಾಚಿನ್ಮಯ ಕಾದಂಬರಿಗಳು ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ ಎಂದರು.
    ಶಶಿಧರಶಾಸ್ತ್ರಿ ಡೋಣಿ, ಮೋಹನ ಗ್ವಾರಿ, ಶಾಂತಾಬಾಯಿ ಬಾಕಳೆ, ವಿ. ಎಂ. ಕುಂದ್ರಾಳಹಿರೇಮಠ, ಎಂ. ಎಂ. ಶಿರೋಳಮಠ, ಶರಣುಕುಮಾರ ಗುತ್ತರಗಿ, ಡಾ. ಶಿವಬಸಯ್ಯ ಗಡ್ಡದಮಠ, ಎಂ. ಎಸ್​. ಮಠದ, ವಿನಾಯಕ ಸಜ್ಜನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts