More

    ಚಂದನ್​ ಜತೆಗೆ ಹೆಜ್ಜೆ ಹಾಕಿದ ಸಂಜನಾ … ‘ಸೂತ್ರಧಾರಿ’ ಚಿತ್ರದಲ್ಲೊಂದು ವಿಶೇಷ ಹಾಡು …

    ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ ‘ಸಲಗ’ ಚಿತ್ರದ ನಂತರ ಸಂಜನಾ ಆನಂದ್​, ತೆಲುಗಿನಲ್ಲಿ ಬ್ಯುಸಿ ಇದ್ದರು. ಅಲ್ಲಿ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಈಗ ಅವರು ಪುನಃ ಕನ್ನಡಕ್ಕೆ ಬಂದಿದ್ದಾರೆ. ಗಾಯಕ-ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಅಭಿನಯದ ‘ಸೂತ್ರಧಾರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಇದನ್ನೂ ಓದಿ: ‘ಛೂ ಮಂತರ್’ ಮಾಡಲು ಬರುತ್ತಿದ್ದಾರೆ ಶರಣ್​ …

    ಹಾಗಂತ ಅವರು ಈ ಚಿತ್ರಕ್ಕೆ ನಾಯಕಿ ಎಂದು ಭಾವಿಸಬೇಡಿ. ‘ಸೂತ್ರಧಾರಿ’ಯ ವಿಶೇಷ ಹಾಡಲ್ಲಿ ಸಂಜನಾ ಹೆಜ್ಜೆ ಹಾಕಿದ್ದಾರೆ. ಈಗಾಗಲೆ ಚಿತ್ರದ ಶೇ. 90ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದ್ದು ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ್ ಸಿಟಿಯಲ್ಲಿ ನಡೆದಿದೆ, ಇದು ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದ್ದು, ಈ ಹಾಡಿನಲ್ಲಿ ಚಂದನ್ ಶೆಟ್ಟಿ ಜೋಡಿಯಾಗಿ ಸಂಜನಾ ಆನಂದ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

    ಈ ಹಾಡು ಹೊಸ ವರ್ಷದ ಸಂಭ್ರಮಾಚರಣೆಗೆ ಹೇಳಿ ಮಾಡಿಸಿದ ಹಾಗಿದೆಯಂತೆ. ಅದೇ ಕಾರಣಕ್ಕೆ, ಈ ಹಾಡನ್ನು ಡಿ. 27ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ.

    ‘ಸೂತ್ರಧಾರಿ’ ಒಂದು ಕ್ರೈಂ ಥ್ರಿಲ್ಲರ್​ ಚಿತ್ರವಾಗಿದ್ದು, ಈ ಚಿತ್ರವನ್ನು ನವರಸನ್​ ನಿರ್ಮಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ’ ನಂತರ ನಿರ್ಮಾಣದಿಂದ ದೂರವೇ ಇದ್ದ ನವರಸನ್​, ಈಗ ಈ ಚಿತ್ರ ನಿರ್ಮಿಸುವುದರ ಜತೆಗೆ ಕ್ರಿಯೇಟಿವ್​ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು, ಈ ಚಿತ್ರವನ್ನು ಕಿರಣ್​ ಕುಮಾರ್​ ನಿರ್ದೇಶಿಸುತ್ತಿದ್ದು, ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್​. ದಾಸ್​ ಚಿತ್ರಕ್ಕೆ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಇದೊಂದು ಫೇಕ್​ ನ್ಯೂಸ್​ … ಕಂಗನಾ ಹೀಗೆ ಹೇಳಿದ್ದು ಯಾವ ವಿಷಯದ ಬಗ್ಗೆ?

    ‘ಸೂತ್ರಧಾರಿ’ ಚಿತ್ರದಲ್ಲಿ ಚಂದನ್​ ಶೆಟ್ಟಿ ನಾಯಕನಷ್ಟೇ ಅಲ್ಲ, ನಟನೆಯ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡಲಿದ್ದಾರೆ. ಅವರ ಜತೆಗೆ ತಬಲಾ ನಾಣಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಉಂಗುರದಲ್ಲೇ ಸಿಂಹ-ಸಿಂಹಿಣಿ: ಹರಿಪ್ರಿಯಾಗೆ ವಸಿಷ್ಟ ಯಾಕಿಷ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts