More

    ಪ್ರಶಸ್ತಿ ಸುತ್ತಿಗೇರಿದ ಸಾನಿಯಾ ಜೋಡಿ

    ಹೋಬರ್ಟ್: ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಉಕ್ರೇನ್​ನ ನಾಡಿಯಾ ಕಿಚೆನಾಕ್ ಜೋಡಿ ಹೋಬರ್ಟ್ ಇಂಟರ್​ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೇರಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಡೋ-ಉಕ್ರೇನ್ ಜೋಡಿ 7-6 (3), 6-2 ನೇರ ಸೆಟ್​ಗಳಿಂದ ಸ್ಲೋವೆನಿಯಾದ ತಮರಾ ಜಿದಾನ್ಸೆಕ್ ಹಾಗೂ ಚೆಕ್ ಗಣರಾಜ್ಯದ ಮಾರೀ ಬೌಸ್ಕೊವಾ ಜೋಡಿ ಎದುರು ಒಂದು ಗಂಟೆ, 24 ನಿಮಿಷಗಳ ಹೋರಾಟದಲ್ಲಿ ಜಯ ದಾಖಲಿಸಿತು.

    5ನೇ ಶ್ರೇಯಾಂಕಿತ ಸಾನಿಯಾ-ನಾಡಿಯಾ ಜೋಡಿ ಪ್ರಶಸ್ತಿಗಾಗಿ ಶನಿವಾರ ಚೀನಾದ ಶೌಯಿ ಪೆಂಗ್ ಹಾಗೂ ಶೌಯಿ ಜಾಂಗ್ ಜೋಡಿಯನ್ನು ಎದುರಿಸಲಿದೆ. ಎರಡು ವರ್ಷ ತಾಯ್ತನದ ರಜೆಯಲ್ಲಿದ್ದ ಸಾನಿಯಾ, ಮರಳಿ ಕಣಕ್ಕಿಳಿದು ಆಡಿದ ಮೊದಲ ಟೂರ್ನಿಯಲ್ಲಿ ಪ್ರಶಸ್ತಿ ಹಂತಕ್ಕೇರಲು ಸಫಲರಾಗಿದ್ದಾರೆ. ಚೀನಾ ಜೋಡಿ ವಾಕ್​ಓವರ್ ಪಡೆದು ಪ್ರಶಸ್ತಿ ಸುತ್ತಿಗೇರಿತು. ಬೆಲ್ಜಿಯಂನ ಕಿಶ್ಟಿನ್ ಫ್ಲಿಪ್​ಕೆನ್ಸ್ ಹಾಗೂ ಅಲಿಸನ್ ವಾನ್ ಉಟ್ವಾನಾಕ್ ಜೋಡಿ ಸೆಮಿಫೈನಲ್ ಹೋರಾಟದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಚೀನಾ ಜೋಡಿ ಪ್ರಶಸ್ತಿ ಸುತ್ತಿಗೇರಿತು.

    ಮೊದಲ ಸೆಟ್​ನಲ್ಲಿ 6-6 ರಿಂದ ಸಮಬಲ ಸಾಧಿಸಿದ ಹಿನ್ನೆಲೆ ಯಲ್ಲಿ ನಡೆದ ಟೈ ಬ್ರೇಕರ್ ಹೋರಾಟದಲ್ಲಿ ಭಾರತ-ಉಕ್ರೇನ್ ಜೋಡಿ ಮೇಲುಗೈ ಸಾಧಿಸಿತು. ಆದರೆ, ಸಂಪೂರ್ಣ ಏಕಪಕ್ಷೀಯವಾಗಿ ನಡೆದ 2ನೇ ಸೆಟ್​ನಲ್ಲಿ ಸಾನಿಯಾ-ನಾಡಿಯಾ ಜೋಡಿ ಸುಲಭ ಗೆಲುವು ಸಾಧಿಸಿತು. -ಪಿಟಿಐ/ಏಜೆನ್ಸೀಸ್

    ಆಸ್ಟ್ರೇಲಿಯನ್ ಓಪನ್ ನಿಗದಿಯಂತೆ ಆರಂಭ

    ಮೆಲ್ಬೋರ್ನ್: ಕಾಡ್ಗಿಚ್ಚಿನಿಂದಾಗಿ ಕಲುಷಿತಗೊಂಡಿರುವ ಗಾಳಿಯ ನಡುವೆಯೇ ಆಸ್ಟ್ರೇಲಿಯನ್ ಓಪನ್​ನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಕಳೆದ ಕೆಲ ದಿನಗಳಿಂದ ಅರ್ಹತಾ ಹಂತದ ಪಂದ್ಯಗಳಿಗೆ ಮಲಿನ ಗಾಳಿಯಿಂದ ಅಡ್ಡಿಯಾದ ನಡುವೆಯೂ, ಪ್ರಧಾನ ಹಂತ ನಿಗದಿತ ದಿನದಂದೇ ಆರಂಭಗೊಂಡು, ನಿಗದಿತ ದಿನದಂತೆ ಮುಕ್ತಾಯ ಕಾಣಲಿದೆ ಎಂದು ಆಸ್ಟ್ರೇಲಿಯಾ ಟೆನಿಸ್ ಸಂಸ್ಥೆ ತಿಳಿಸಿದೆ.

    ಪ್ರಧಾನ ಸುತ್ತಿಗೇರಲು ಪ್ರಜ್ಞೇಶ್ ವಿಫಲ

    ಮೆಲ್ಬೋರ್ನ್: ಭಾರತದ ನಂ.1 ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್, ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್​ನಲ್ಲಿ ಪ್ರಧಾನ ಸುತ್ತಿಗೇರಲು ವಿಫಲರಾಗಿದ್ದಾರೆ. ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ 3ನೇ ಹಾಗೂ ಅಂತಿಮ ಸುತ್ತಿನ ಅರ್ಹತಾ ಪಂದ್ಯದಲ್ಲಿ ವಿಶ್ವ ನಂ. 122 ಪ್ರಜ್ಞೇಶ್ 6-7 (2), 2-6 ರಿಂದ ಲಾಟ್ವಿಯಾದ ಎರ್ನೆಸ್ಟ್ ಗುಲ್ಬಿಸ್​ಗೆ ಶರಣಾದರು. ಅದರೊಂದಿಗೆ ಆಸ್ಟ್ರೇಲಿಯನ್ ಓಪನ್​ನ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಮೊದಲ ಸೆಟ್​ನಲ್ಲಿ ಹೋರಾಟ ತೋರಿದ್ದ ಪ್ರಜ್ಞೇಶ್ ಟೈಬ್ರೇಕರ್​ನಲ್ಲಿ ಸೋಲು ಕಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts