More

    ಲಾಕ್‌ಡೌನ್‌ನಿಂದಾಗಿ ಸಾನಿಯಾ-ಮಲಿಕ್ ದೂರ!

    ಹೈದರಾಬಾದ್: ಕರೊನಾ ಭೀತಿಯಿಂದಾಗಿ ಲಾಕ್‌ಡೌನ್ ೋಷಿಸಿದ ಬೆನ್ನಲ್ಲೇ ದೇಶದ ಜನರು ಎಲ್ಲಿದ್ದರೋ ಅಲ್ಲೇ ಲಾಕ್ ಆದರು. ಇದರಿಂದಾಗಿ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸುವಂತಾಗಿದೆ. ಆರ್ಥಿಕ, ಆಹಾರದ ತೊಂದರೆ ಒಂದೆಡೆಯಾದರೆ, ಕೆಲ ಆಪ್ತರು, ಕುಟುಂಬದವರನ್ನು ನೋಡಲಾಗದ, ಅವರೊಂದಿಗೆ ಬೆರೆಯಲಾಗದ ಇಕ್ಕಟ್ಟು ಮತ್ತೊಂದೆಡೆ. ಜಿಲ್ಲೆ, ರಾಜ್ಯಗಳ ಗಡಿಯೇ ಬಂದ್ ಆಗಿರುವ ನಡುವೆ ದೇಶದಿಂದ ವಿದೇಶಕ್ಕೆ ಪ್ರಯಾಣ ಅಥವಾ ವಿದೇಶೀಯರ ಆಗಮನವಂತೂ ಸದ್ಯಕ್ಕೆ ಸಾಧ್ಯವಾಗುವ ಲಕ್ಷಣಗಳಿಲ್ಲ. ಇದರಿಂದಾಗಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಪತಿ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್‌ರನ್ನು ಕಾಣದೆ ಪರಿತಪಿಸುತ್ತಿದ್ದಾರೆ.

    ಇದನ್ನೂ ಓದಿ: ಲಾಕ್‌ಡೌನ್ ವೇಳೆ ಪತ್ನಿಯೇ ಸ್ಟಾರ್ ಎಂದ ಹಿಟ್‌ಮ್ಯಾನ್

    ತಾಯ್ತನದ ಬಳಿಕ ಇತ್ತೀಚೆಗಷ್ಟೇ ಟೆನಿಸ್ ಕೋರ್ಟ್‌ಗೆ ಮರಳಿದ್ದ ಸಾನಿಯಾ, ಒಂದೂವರೆ ವರ್ಷದ ಪುತ್ರ ಇಜಾನ್ ಜತೆಗೆ ಹೈದರಾಬಾದ್‌ನ ಮನೆಯಲ್ಲಿ ಲಾಕ್ ಆಗಿದ್ದರೆ, ಶೋಯಿಬ್ ಮಲಿಕ್ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿದ್ದಾರೆ. ಹೀಗಾಗಿ, ‘ನನ್ನ ಮಗ ಯಾವಾಗ ಮತ್ತೆ ತನ್ನ ತಂದೆಯನ್ನು ನೋಡುವನೋ ಗೊತ್ತಾಗುತ್ತಿಲ್ಲ’ ಎಂದು 33 ವರ್ಷದ ಸಾನಿಯಾ ಅಳಲು ತೋಡಿಕೊಂಡಿದ್ದಾರೆ.
    ಭಾರತದಲ್ಲಿ ಲಾಕ್‌ಡೌನ್ ೋಷಣೆಯಾಗುವುದಕ್ಕೆ ಕೆಲವೇ ದಿನ ಮುನ್ನ ಸಾನಿಯಾ ಅಮೆರಿಕದಿಂದ ತವರಿಗೆ ವಾಪಸ್ ಆಗಿದ್ದರು. ಅತ್ತ ಮಲಿಕ್ ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಆಡುತ್ತಿದ್ದರು ಮತ್ತು ಅಲ್ಲೂ ಲಾಕ್‌ಡೌನ್ ೋಷಣೆಯಾಗಿದ್ದರಿಂದ ಅಲ್ಲೇ ಲಾಕ್ ಆದರು.

    ಲಾಕ್‌ಡೌನ್‌ನಿಂದಾಗಿ ಸಾನಿಯಾ-ಮಲಿಕ್ ದೂರ!

    ‘ನನ್ನ ಮಗ ಚಿಕ್ಕವನಿರುವ ಕಾರಣ ಈ ಸಮಯವನ್ನು ನಿಭಾಯಿಸುವುದು ಬಹಳ ಕಠಿಣವಾಗಿದೆ. ನಾನೂ ಮತ್ತೆ ಪತಿಯನ್ನು ನೋಡುವ ತವಕದಲ್ಲಿದ್ದು, ಇಬ್ಬರೂ ಸಕಾರಾತ್ಮಕ ಚಿಂತನೆಯಲ್ಲಿದ್ದೇವೆ. ಮಲಿಕ್‌ಗೆ 65 ವರ್ಷದ ಅಮ್ಮ ಇದ್ದು, ಅವರ ಕಾಳಜಿಯನ್ನು ಅಲ್ಲಿ ಮಾಡಬೇಕಾಗಿದೆ. ಅವರ ಆರೋಗ್ಯದ ಬಗ್ಗೆ ಮಲಿಕ್ ಗಮನ ಹರಿಸಿದ್ದಾರೆ’ ಎಂದು ಗ್ರಾಂಡ್ ಸ್ಲಾಂ ಗೆದ್ದ ಭಾರತದ ಮೊದಲ ಮಹಿಳೆ ಎನಿಸಿರುವ ಸಾನಿಯಾ ೇಸ್‌ಬುಕ್ ಲೈವ್‌ನಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: ಭಾರತ, ಮೋದಿ ವಿರುದ್ಧ ಅಫ್ರಿದಿ ಎಷ್ಟೇ ವಿಷ ಕಾರಿದ್ರೂ ಕಾಶ್ಮೀರ ಪಡೆಯಲಾಗದು: ಗೌತಮ್​ ಗಂಭೀರ್​​

    ‘ನಮ್ಮ ಕುಟುಂಬ ಮತ್ತೆ ಒಗ್ಗೂಡುವ ಬಗ್ಗೆ ನಾನು ನಿರೀಕ್ಷೆಯಲ್ಲಿರುವೆ. ಗಂಡನಿಂದ ದೂರವಿರುವುದು ಸುಲಭವಲ್ಲ. ಪುತ್ರ ಇಜಾನ್‌ಗೂ ತಂದೆಯಿಂದ ದೂರವಿರುವುದು ಕಷ್ಟ. ವಿಡಿಯೋ ಕಾಲ್ ಮೂಲಕ ಎಷ್ಟೇ ಮಾತನಾಡಿದರೂ ಖುದ್ದಾಗಿ ಭೇಟಿಯಾಗುವ ಆನಂದವೇ ಬೇರೆ’ ಎಂದು ಸಾನಿಯಾ ಹೇಳಿದ್ದಾರೆ.

    ಜುಲೈನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸ ನಿಗದಿಯಾಗಿದ್ದು, ಮಲಿಕ್ ಅಲ್ಲಿಗೆ ತೆರಳುವ ಬಗ್ಗೆಯೂ ಸಾನಿಯಾ ಆತಂಕದಲ್ಲಿದ್ದಾರೆ. ಯಾಕೆಂದರೆ ಬ್ರಿಟನ್‌ನಲ್ಲಿ ಈಗಾಗಲೆ ಕರೊನಾ ಹಾವಳಿ ಹೆಚ್ಚಾಗಿದ್ದು, 30 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆದರೆ ಟೆನಿಸ್‌ಗಿಂತ ಕ್ರಿಕೆಟ್‌ನಂಥ ಟೀಮ್ ಗೇಮ್‌ಗಳನ್ನು ಕರೊನಾ ಭೀತಿಯಿಂದ ಮುಕ್ತವಾಗಿ ಆಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಟೆನಿಸ್ ಬಗ್ಗೆ ಚಿಂತಿಸುತ್ತಿಲ್ಲ

    ಲಾಕ್‌ಡೌನ್‌ನಿಂದಾಗಿ ಸಾನಿಯಾ-ಮಲಿಕ್ ದೂರ!
    ಟೆನಿಸ್ ಆಟದ ಬಗ್ಗೆ ನಾನೀಗ ಯಾವ ಚಿಂತೆಯನ್ನೂ ಮಾಡುತ್ತಿಲ್ಲ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ. ಸಾಮಾನ್ಯವಾಗಿ ನಾನು ಆತಂಕ ಪಡುವುದಿಲ್ಲ. ಆದರೆ ಇತ್ತೀಚೆಗೆ ಮನೆಯಲ್ಲಿ ಮಲಗಿಕೊಂಡಿರುವಾಗ ಭಾರಿ ಆತಂಕಕ್ಕೊಳಗಾಗಿದ್ದೆ. ಮನೆಯಲ್ಲಿ ಅಂಬೆಗಾಲಿಡುವ ಮಗುವಿದೆ, ವಯಸ್ಸಾದ ಪೋಷಕರು ಇದ್ದಾರೆ. ಅವರ ಬಗ್ಗೆಯೇ ನಾನು ಹೆಚ್ಚು ಚಿಂತೆ ಮಾಡುತ್ತಿದ್ದೇನೆ ಎಂದು ಸಾನಿಯಾ ಹೇಳಿದ್ದಾರೆ. ಲಾಕ್‌ಡೌನ್ ವೇಳೆ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರ ನೆರವಿಗಾಗಿ ಸಾನಿಯಾ ಇತ್ತೀಚೆಗೆ 3.3 ಕೋಟಿ ರೂ. ಮೊತ್ತದ ದೇಣಿಗೆ ಸಂಗ್ರಹಿಸಿ ಎನ್‌ಜಿಒ ಒಂದಕ್ಕೆ ನೀಡಿದ್ದರು.

    ಟೆನಿಸಿಗರ ಬಗ್ಗೆ ಚಿಂತೆ

    ಲಾಕ್‌ಡೌನ್‌ನಿಂದಾಗಿ ಸಾನಿಯಾ-ಮಲಿಕ್ ದೂರ!
    ವಿಶ್ವ ರ‌್ಯಾಂಕಿಂಗ್‌ನಲ್ಲಿ 200-250ನೇ ಸ್ಥಾನಕ್ಕಿಂತ ಹೊರಗಿರುವ ಟೆನಿಸ್ ಆಟಗಾರರ ಬಗ್ಗೆಯೂ ಸಾನಿಯಾ ಚಿಂತೆ ವ್ಯಕ್ತಪಡಿಸುತ್ತಾರೆ. ಕರೊನಾ ಭೀತಿ ಹೆಚ್ಚಾಗುವುದಕ್ಕೆ ಮುನ್ನ ಸಾನಿಯಾ ಕೊನೆಯದಾಗಿ ಮಾರ್ಚ್ ಮೊದಲ ವಾರದಲ್ಲಿ ೆಡ್ ಕಪ್ ಟೂರ್ನಿಯನ್ನು ದುಬೈನಲ್ಲಿ ಆಡಿದ್ದರು. ಆಗ ಮೊದಲ ದಿನದ ಪಂದ್ಯಗಳಿಗೆ ಬಾಲ್ ಬಾಯ್‌ಗಳು ಬಂದಿದ್ದರಂತೆ. ಮರುದಿನ ವೈರಸ್ ಭೀತಿಯಿಂದಾಗಿ ಮತ್ತು ಸ್ವಚ್ಛತೆಯ ಕಾರಣದಿಂದಾಗಿ ಬಾಲ್ ಬಾಯ್‌ಗಳು ಆಟಗಾರ್ತಿಯರಿಗೆ ಪಂದ್ಯದ ವೇಳೆ ಟವೆಲ್ ನೀಡುವುದು ಅಥವಾ ಇತರ ಸಹಾಯ ಮಾಡುವುದನ್ನು ನಿರ್ಬಂಧಿಸಲಾಗಿತ್ತಂತೆ. ಮಗನನ್ನು ಕರೆದುಕೊಂಡೇ ೆಡ್ ಕಪ್ ಟೂರ್ನಿಯಲ್ಲಿ ಆಡಲು ತೆರಳಿದ್ದ ಸಾನಿಯಾಗೆ ಇತ್ತೀಚೆಗೆ ಈ ಸಾಹಸಕ್ಕಾಗಿ ‘ಹಾರ್ಟ್’ ಪ್ರಶಸ್ತಿಯನ್ನೂ ನೀಡಲಾಗಿತ್ತು.

    ಇದನ್ನೂ ಓದಿ: ಬ್ಯಾಟು ಹಿಡಿಯುತ್ತಿದ್ದ ಧವನ್ ಕೈಯಲ್ಲಿ ಕೊಳಲು

    ‘ಅಪ್ಪುಗೆ, ಹಸ್ತಲಾಘವವನ್ನು ಹೊಂದಿದ ಸಹಜಸ್ಥಿತಿ ಮತ್ತೆ ಮರಳಬೇಕೆಂದು ನಾನು ಬಯಸುತ್ತೇನೆ. ನಮ್ಮ ಪ್ರೀತಿ ಪಾತ್ರರನ್ನೂ ಅಪ್ಪಿದರೆ ಸಾಯುತ್ತೇವೆ ಅಥವಾ ಅವರು ಸಾಯುತ್ತಾರೆ ಎಂಬ ಭಯದಲ್ಲಿ ಬದುಕುವುದು ಕಷ್ಟ’ ಎಂದು ಸಾನಿಯಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts