More

    VIDEO: 7 ತಿಂಗಳ ಬಳಿಕ ಪತ್ನಿ ಸಾನಿಯಾ ಮಿರ್ಜಾ ಭೇಟಿಯಾದ ಕ್ರಿಕೆಟಿಗ ಶೋಯಿಬ್ ಮಲಿಕ್

    ದುಬೈ: ಕರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಕಳೆದ 7 ತಿಂಗಳಿಂದ ಪತ್ನಿ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪುತ್ರನಿಂದ ದೂರ ಉಳಿದಿದ್ದ ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲಿಕ್ ಕಡೆಗೂ ದುಬೈನಲ್ಲಿ ಭೇಟಿಯಾಗಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪುತ್ರನನ್ನು ಎತ್ತಿ ಮುದ್ದಾಡಿಸುತ್ತಿರುವ ವಿಡಿಯೋವನ್ನು ಶೋಯಿಬ್ ಮಲಿಕ್ ಪ್ರಕಟಿಸಿದ್ದಾರೆ. ಈ ಮೊದಲು ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪತ್ನಿ, ಪುತ್ರನ್ನು ಭೇಟಿಯಾಗಿ ಬರುವುದಾಗಿ ಶೋಯಿಬ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆದಿದ್ದರೂ ವಿಮಾನಯಾನ ರದ್ದುಗೊಂಡಿದ್ದರಿಂದ ಸಾಧ್ಯವಾಗಿರಲಿಲ್ಲ.

    ಇದನ್ನೂ ಓದಿ: ಕಂಗನಾ ವಿರುದ್ಧ ಡ್ರಗ್ಸ್ ಸೇವನೆ ಆರೋಪ- ತನಿಖೆ ನಡೆಸೋಕೆ ಮುಂಬೈ ಪೊಲೀಸ್​ಗೆ ಠಾಕ್ರೆ ಸರ್ಕಾರದ ಆದೇಶ

    ಕೇವಲ ಟಿ20ಗಷ್ಟೇ ಸೀಮಿತವಾಗಿರುವ ಮಲಿಕ್, ಟಿ20 ಸರಣಿ ಆಡುವ ಸಲುವಾಗಿ ಪಾಕ್ ತಂಡದ ಜತೆಗೆ ಇಂಗ್ಲೆಂಡ್‌ಗೆ ತೆರಳಿದ್ದರು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕುಟುಂಬ ಸದಸ್ಯರನ್ನು ನೋಡಲು ಅನುಮತಿ ನೀಡಬೇಕೆಂದು ಪಿಸಿಬಿ ಬಳಿ ಮನವಿ ಮಾಡಿದ್ದರು. ಪಿಸಿಬಿ ಅನುಮತಿ ನೀಡಿದರೂ ಭಾರತಕ್ಕೆ ಅಂತಾರಾಷ್ಟ್ರೀಯ ವಿಮಾನಯಾನ ಪುನರಾರಂಭಗೊಳ್ಳದ ಕಾರಣ ಕುಟುಂಬ ಸದಸ್ಯರ ಭೇಟಿ ಸಾಧ್ಯವಾಗಿರಲಿಲ್ಲ. ಇದೀಗ ಸಾನಿಯಾ ಮಿರ್ಜಾ ಪುತ್ರನೊಂದಿಗೆ ದುಬೈಗೆ ತೆರಳಿದ್ದರೆ, ಅತ್ತ ಇಂಗ್ಲೆಂಡ್ ಪ್ರವಾಸ ಮುಗಿಸಿ ಮಲಿಕ್ ಕೂಡ ನೇರವಾಗಿ ದುಬೈಗೆ ಬಂದಿದ್ದಾರೆ.

    ಇದನ್ನೂ ಓದಿ: ನಮ್ ಲೈಫೇ ಬರ್ನ್ ಆಗ್ಹೋಯ್ತು ಎಂದು ಅಲವತ್ತುಕೊಂಡ ರಾಗಿಣಿ: ವಿಡಿಯೋ ವೈರಲ್

    ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಕಳೆದ 7 ತಿಂಗಳಿಂದ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಂಪೂರ್ಣ ನಿಷೇಧ ಹೇರಲಾಗಿತ್ತು. ಸಾನಿಯಾ ಮಿರ್ಜಾ, ಮಗನೊಂದಿಗೆ ಹೈದರಾಬಾದ್‌ನಲ್ಲೇ ಆಗಿದ್ದರೆ, ಮಲಿಕ್ ಪಾಕಿಸ್ತಾನದಲ್ಲೇ ಉಳಿದುಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts