More

    ‘ಶಿವಾಜಿ ಸುರತ್ಕಲ್​ 2’ನಲ್ಲಿ ಸಂಗೀತಾ ಶೃಂಗೇರಿ; ವಿಶೇಷ ಹಾಡಿಗೆ ಡ್ಯಾನ್ಸ್​

    ಬೆಂಗಳೂರು ರಮೇಶ್​ ಅಭಿನಯದ “ಶಿವಾಜಿ ಸುರತ್ಕಲ್​ 2′ ಚಿತ್ರದ ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಲಿದೆ. ಈ ಮಧ್ಯೆ, ಚಿತ್ರದ ವಿಶೇಷ ಹಾಡೊಂದರಲ್ಲಿ ‘777 ಚಾರ್ಲಿ’ ಚಿತ್ರದ ಸಂಗೀತ ಶೃಂಗೇರಿ ಹೆಜ್ಜೆ ಹಾಕಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ.

    ಇದನ್ನೂ ಓದಿ: ‘ತತ್ಸಮ ತದ್ಭವ’ದಲ್ಲಿ ಬಾಲಾಜಿ, ಮಹತಿ, ಅರವಿಂದ್​ ಅಯ್ಯರ್​ …

    ಹೌದು, ‘ಶಿವಾಜಿ ಸುರತ್ಕಲ್​ 2′ ಚಿತ್ರದ ಹಾಡೊಂದಕ್ಕೆ ಸಂಗೀತ ಹೆಜ್ಜೆ ಹಾಕಿದ್ದು, ಇತ್ತೀಚೆಗೆ ಈ ಹಾಡಿನ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ಈ ಹಾಡಿನಲ್ಲಿ ರಮೇಶ್​ ಅರವಿಂದ್​ ಸಹ ಹೆಜ್ಜೆ ಹಾಕಿದ್ದು, ಇದೇ ಮೊದಲು ಬಾರಿಗೆ ರಮೇಶ್ ಜತೆಗೆ ಸಂಗೀತ ನಟಿಸಿದ್ದಾರೆ.

    “ಶಿವಾಜಿ ಸುರತ್ಕಲ್​ 2’ ಚಿತ್ರವು 2021ರಲ್ಲಿ 2020ರಲ್ಲಿ ಬಿಡುಗಡೆಯಾಗಿದ್ದ ‘ಶಿವಾಜಿ ಸುರತ್ಕಲ್​’ ಚಿತ್ರದ ಮುಂದುವರೆದ ಮತ್ತು ಹಿಂದಿನ ಕಥೆಯಾಗಿದ್ದು, ಮೂಲ ಚಿತ್ರವನ್ನು ನಿರ್ದೇಶನ ಮಾಡಿದ್ದ ಆಕಾಶ್​ ಶ್ರೀವತ್ಸ ಈ ಚಿತ್ರಕ್ಕೂ ಆಕಾಶ್​ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್​ ಮತ್ತು ಅನೂಪ್​ ಗೌಡ ಈ ಚಿತ್ರದ ನಿರ್ಮಾಪಕರು.

    ಇದನ್ನೂ ಓದಿ: ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​ ಬಿಡುಗಡೆ ಮಾಡಿದರು ‘ಕಬ್ಜ’ ಚಿತ್ರದ ಟ್ರೇಲರ್​​

    ರಮೇಶ್​ ಅರವಿಂದ್​, ನಾಜರ್​, ರಾಧಿಕಾ ನಾರಾಯಣ್​, ಮೇಘನಾ ಗಾಂವ್ಕರ್​, ರಘು ರಾಮನಕೊಪ್ಪ, ಶೋಭರಾಜ್​, ರಾಕೇಶ್​ ಮಯ್ಯ, ವಿನಾಯಕ ಜೋಷಿ, ಶ್ರೀನಿವಾಸ ಪ್ರಭು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    VIDEO| ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಡ್ಯಾನ್ಸ್ ಮಾಡಿದ ಅಕ್ಷಯ್ ಕುಮಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts