More

    ಸ್ತ್ರೀಯರಿಗೆ ತಾಯ್ತನ ಸುಖಕರವಾಗಿರಲಿ – ಜಿಲ್ಲಾ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ಅಧಿಕಾರಿ ಡಾ.ಇಂದ್ರಾಣಿ ಆಶಯ

    ಸಂಡೂರು: ತಾಯ್ತನ ಸುಖಕರವಾಗಿರಬೇಕು. ಪ್ರಯಾಸದಾಯಕವಾಗಿರಬಾರದು. ತೊಡಕು ಇರುವ ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸುರಕ್ಷಿತವಾಗಿ ಶಿಶುವಿನ ಆರೈಕೆ ಮಾಡುವ ಉದ್ದೇಶದಿಂದ ಸುರಕ್ಷಿತ ಮಾತೃತ್ವ ಅಭಿಯಾನ ರೂಪಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ಅಧಿಕಾರಿ ಡಾ.ಇಂದ್ರಾಣಿ ಹೇಳಿದರು.

    ತಾಲೂಕಿನ ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಏರ್ಪಡಿಸಿದ್ದ ಗಂಡಾಂತರ ಇರುವ ಗರ್ಭಿಣಿಯರ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರಸೂತಿ ತಜ್ಙೆ ಡಾ.ರಜಿಯಾ ಬೇಗಂ ಮಾತನಾಡಿ, ಗರ್ಭಿಣಿಯರಲ್ಲಿ ತೊಂದರೆಗಳನ್ನು ಪತ್ತೆ ಹಚ್ಚಿ ವಿವಿಧ ಬಣ್ಣಗಳಿಂದ ಸಮಸ್ಯೆಗಳ ಪ್ರಮಾಣ ಗುರುತಿಸಲಾಗುವುದು. ಹಸಿರು ಬಣ್ಣ ಸಾಮಾನ್ಯ ಅಪಾಯಕಾರಿ, ಕೆಂಪು ಹೆಚ್ಚು ಅಪಾಯಕಾರಿ, ಹಳದಿ ಅಧಿಕ ರಕ್ತದೊತ್ತಡ, ನೀಲಿ ಮಧುಮೇಹ, ಥೈರಾಯ್ಡ, ಲೈಂಗಿಕ ರೋಗಗಳು ಇರುವವರು ಎಂದು ವರ್ಗೀಕರಣ ಮಾಡಲಾಗುತ್ತಿದೆ. ತೊಂದರೆಗಳಿಗೆ ತಕ್ಕಂತೆ ಚಿಕಿತ್ಸೆ ನೀಡಿ, ಅವುಗಳನ್ನು ನಿವಾರಣೆ ಮಾಡಲಾಗುವುದು ಎಂದರು.

    ಕಾರ್ಯಕ್ರಮವನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ನಿರ್ವಹಿಸಿದರು. ನಂತರ 94 ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಯಿತು. ಗ್ರಾಪಂ ಅಧ್ಯಕ್ಷೆ ಮಹೇಶ್ವರಿ ಕಟ್ಟೆಪ್ಪ, ಸದಸ್ಯರಾದ ಸರಸ್ವತಿ, ಚೆನ್ನಮ್ಮ, ತಿಪ್ಪಮ್ಮ, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗೋಪಾಲ್‌ರಾವ್, ಡಾ.ಸಾದಿಯಾ, ಅರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts