More

    ಪ್ರಣಾಳಿಕೆ ಬಿಜೆಪಿ ಜೀವಾಳ

    ಸಂಡೂರು: ಪ್ರಣಾಳಿಕೆ ಬಿಜೆಪಿಯ ಜೀವಾಳ. ಕಾಶ್ಮೀರ 370 ಕ್ವಾಸ್ ಮಾಡುವುದು, ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಷಯ ಪ್ರಣಾಳಿಕೆಯಲ್ಲಿದ್ದವು. ಅವೀಗ ಸಾರ್ಥಕ್ಯವಾಗಿವೆ ಎಂದು ಚುನಾವಣೆ ಸಹ ಸಂಚಾಲಕ ಸಂಜೀವ ಪ್ರಸಾದ್ ಹೇಳಿದರು.

    ದೌಲತ್‌ಪುರ ರಸ್ತೆಯ ಕಾರ್ತಿಕ್ ಘೋರ್ಪಡೆಯವರ ಅರಮನೆ ಆವರಣದಲ್ಲಿ ಪ್ರಣಾಳಿಕೆ ಅಭಿಯಾನ ಆರಂಭಿಸಿ ಮಂಗಳವಾರ ಮಾತನಾಡಿದರು.
    ಸಂಡೂರಿನಲ್ಲಿ ಮಿನಿ ಸಾಫ್ಟ್‌ವೇರ್ ಪಾರ್ಕ್ ಸ್ಥಾಪನೆ ಸೇರಿ ನಿಮ್ಮ ಕ್ಷೇತ್ರಕ್ಕೆ ಏನೇನು ಬೇಕು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಎಲ್ಲರೂ ಒಂದೇ ವಿಷಯದ ಬಗ್ಗೆ ಬರೆಯದೆ ಬೇರೆ ಬೇರೆ ವಿಷಯ ನಮೂದಿಸಿಕೊಡಿ ಎಂದರು.

    ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಫ್.ಕುಮಾರನಾಯ್ಕ ಮಾತನಾಡಿ, ನಂದಿಹಳ್ಳಿಯ ಸಂಡೂರು ಯೂನಿವರ್ಸಿಟಿ ಆಫ್ ಮೈನ್ಸ್ ಪಿಜಿಯಲ್ಲೇ ಗಣಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸಬೇಕು. ಗಣಿ ಲಾರಿ ಚಾಲಕರು, ಕ್ಲೀನರ್‌ಗಳು, ಗಣಿ ಕಾರ್ಮಿಕ ವರ್ಗವಿರುವ ಕಾರಣ 40-50 ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಆಗಬೇಕು. ಧರ್ಮಾಪುರ-ಸುಶೀಲಾನಗರ ಬೈಪಾಸ್ ರಸ್ತೆ, ಸಂಡೂರು ಪುರಸಭೆ, ಕುರೇಕುಪ್ಪ ಪುರಸಭೆ ಹಾಗೂ ತಾಲೂಕಿನ ಹಳ್ಳಿಗಳಲ್ಲಿ ಜಲ ಜೀವನ್ ಮೀಷನ್, ಪುರಸಭೆ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳನ್ನೊಳಗೊಂಡ ಮಿನಿ ವಿಧಾನಸೌಧ ನಿರ್ಮಿಸಬೇಕು. ಯಶವಂತನಗರ ರೈಲ್ವೆಬ್ರಿಡ್ಜ್ ಎತ್ತರಿಸಬೇಕು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ, ತಾಲೂಕಿನಲ್ಲಿ ಪ್ಯಾಸಂಜರ್ ರೈಲು ಸೇವೆ, ಡಾಂಬರ್, ಸಿಸಿ ರಸ್ತೆಗಳ ನಿರ್ಮಾಣ, ಕೆರೆ ತುಂಬಿಸುವುದು, ಭೈರವ ತೀರ್ಥ ಸೇರಿದಂತೆ ತಾಲೂಕಿನ ಎಲ್ಲ ತೀರ್ಥಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿ ಪ್ರವಾಸಿ ತಾಣಗಳನ್ನಾಗಿಸಬೇಕು ಎಂದು ಒತ್ತಾಯಿಸಿದರು.

    ಬಿಜೆಪಿ ತಾಲೂಕು ಉಪಾಧ್ಯಕ್ಷ ಆರ್.ಟಿ.ರಘುನಾಥ ಮಾತನಾಡಿದರು. ಪುರಸಭೆ ವಿರೋಧ ಪಕ್ಷದ ನಾಯಕ ಅಬ್ದುಲ್ ಮುನಾಫ್, ಮಹಿಳಾ ಮೋರ್ಚಾದ ದೀಪಾ ಘೋಡ್ಕೆ, ಎಸ್ಸಿ ಮೋರ್ಚಾ ಅಧ್ಯಕ್ಷ ದೌಲತ್‌ಪುರ ಸತೀಶ್, ವಿಶ್ವನಾಥರೆಡ್ಡಿ, ಪುರಸಭೆ ಸದಸ್ಯರಾದ ಮಾಳ್ಗಿ ರಾಮಣ್ಣ, ಎಂ.ಪಂಪಾಪತಿ, ದೇವೇಂದ್ರಪ್ಪ ಇತರರಿದ್ದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts