More

    ಮುಂಬೈ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಸಂದೀಪ್! ಖುಷಿಯ ಹಿಂದಿತ್ತು ಯಾರಿಗೂ ತಿಳಿಸದ ದುಃಖಕರ ಸಂಗತಿ

    ಜೈಪುರ: ನಿನ್ನೆ (ಏ.22) ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್​ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಬಹುದಿನಗಳ ನಂತರ ಕಮ್​ಬ್ಯಾಕ್ ಮಾಡಿದ ಆರ್​​ಆರ್​ ವೇಗಿ ಸಂದೀಪ್ ಶರ್ಮಾ, ತನಗೆ ಕೊಟ್ಟ 4 ಓವರ್​ಗಳಲ್ಲಿ ಕೇವಲ 18 ರನ್​ ಕೊಟ್ಟು, ಬರೋಬ್ಬರಿ ಐದು ವಿಕೆಟ್​ಗಳನ್ನು ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾಗುವುದರ ಜತೆಗೆ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದರು.

    ಇದನ್ನೂ ಓದಿ: ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡು 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 179 ರನ್​ಗಳನ್ನು ಕಲೆಹಾಕುವಲ್ಲಿ ಶಕ್ತವಾಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಪಡೆಗೆ ಆರಂಭಿಕ ಹಂತದಲ್ಲೇ ಜಾಸ್​ ಬಟ್ಲರ್​ ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ಇನ್ಯಾವ ವಿಕೆಟ್ ಕಳೆದುಕೊಳ್ಳದೆ, ಅತ್ಯಂತ ‘ಯಶಸ್ವಿ’ಯಾಗಿ 8 ಬಾಲ್​ಗಳಿಗೂ ಮುನ್ನವೇ ಪಂದ್ಯವನ್ನು ವಶಪಡಿಸಿಕೊಂಡಿತು. ತನ್ನ ತಂಡಕ್ಕೆ ಭರ್ಜರಿ ಕೊಡುಗೆ ನೀಡಿದ್ದು, 60 ಎಸೆತಗಳಲ್ಲಿ ಅಜೇಯ 104 ರನ್ ಸಿಡಿಸಿದ ಜೈಸ್ವಾಲ್​ ಮಾತ್ರ. ಆರ್​ಆರ್​ ಪರ ಸೂಪರ್​ಸ್ಟಾರ್​ ಆಗಿ ಮಿಂಚಿದ್ದು, ಯಶಸ್ವಿ ಮತ್ತು ಸಂದೀಪ್.

    ಬೌಲಿಂಗ್​ನಲ್ಲಿ ಮುಂಬೈ ಇಂಡಿಯನ್ಸ್​ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಿದ ಸಂದೀಪ್ ಶರ್ಮಾ, ಇಂಜುರಿಯ ಕಾರಣದಿಂದ ಈ ಸೀಸನ್​ನಲ್ಲಿ ತಂಡದಿಂದ ಹೊರಗುಳಿದಿದ್ದರು. ಚೇತರಿಕೆಯ ಬಳಿಕ ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರು. ಇದು ಈ ಸೀಸನ್​ನಲ್ಲಿ ಸಂದೀಪ್ ಆಡಿದ ಮೊದಲ ಪಂದ್ಯವಾಗಿದ್ದೇ ಆದರೂ ಅತ್ಯುತ್ತಮ ಕಮ್​ಬ್ಯಾಕ್ ಮಾಡಿದ್ದು ಮಾತ್ರ ನೋಡುಗರ ಕಣ್ಮನಸೆಳೆಯಿತು. ಈ ಪಂದ್ಯವು ಸಹ ರೋಚಕವಾಗಿ ಮೂಡಿಬಂದಿತು. ಸದ್ಯ ಈ ಖುಷಿಯ ಬಗ್ಗೆ ಮಾತನಾಡಬೇಕಿದ್ದ ಸಂದೀಪ್ ಶರ್ಮಾ, ಅದರ ಹಿಂದಿದ್ದ ನೋವಿನ ಸಂಗತಿಯೊಂದನ್ನು ಮುಕ್ತವಾಗಿ ಹಂಚಿಕೊಂಡರು.

    ಇದನ್ನೂ ಓದಿ: ಸಾಲ ಮರುಪಾವತಿ ಮಾಡಲು ವಿಫಲ; ಮಹಿಳೆಯ ಕಪಾಳಕ್ಕೆ ಹೊಡೆದು, ಸ್ಥಳದಿಂದ ಕಾಲ್ಕಿತ್ತ ಬ್ಯಾಂಕ್ ಸಿಬ್ಬಂದಿ!

    ಎರಡು ವರ್ಷಗಳ ಹಿಂದೆ ನಾನು ಐಪಿಎಲ್​ ಆಕ್ಷನ್​ನಲ್ಲಿ ಅನ್​ಸೋಲ್ಡ್​ ಆಟಗಾರನಾಗಿ ಹೊರಹೊಮ್ಮಿದೆ. ಆದರೂ ಸಹ ರಿಪ್ಲೇಸ್​​ಮೆಂಟ್ ಬೌಲರ್ ಆಗಿ ಆರ್​ಆರ್​ ಪರ ಆಡುವುದು ನನಗೆ ಖುಷಿ ತಂದಿದೆ. ಸದ್ಯ ಮುಂಬರುವ ಪ್ರತಿ ಪಂದ್ಯವನ್ನು ಆನಂದಿಸುವ ಬಗ್ಗೆ ಹೆಚ್ಚು ಆಸಕ್ತಿ ಇದೆ ಎಂದು ಸಂದೀಪ್ ಶರ್ಮಾ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts