More

    ದೀಪಾವಳಿ ಹಬ್ಬದ ಶುಭಾಶಯ ಹೇಳಿದ ಚಂದನವನದ ಸೆಲೆಬ್ರಿಟಿಗಳು …

    ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಈ ವರ್ಷ ಎಲ್ಲಾ ಹಬ್ಬಗಳ ಆಚರಣೆ ಮತ್ತು ಸಂಭ್ರಮದಲ್ಲಿ ವ್ಯತ್ಯಾಸವಾಗಿದೆ. ಇದಕ್ಕೆ ದೀಪಾವಳಿ ಸಹ ಹೊರತಲ್ಲ. ಈ ಬಾರಿ ಪಟಾಕಿಗಳಿಗೆ ಸರ್ಕಾರ ನಿಷೇಧ ಹೇರಿದ್ದು, ಅದರಿಂದ ಕೊಂಚ ಸಂಭ್ರಮ ತಗ್ಗಿದೆ. ಈ ಮಧ್ಯೆ ಚಂದನವನದ ತಾರೆಯರೆಲ್ಲಾ ತಮ್ಮ ಅಭಿಮಾನಿಗಳಿಗೆ ತಮ್ಮದೇ ರೀತಿಯಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಕೋರಿದ್ದಾರೆ.

    ಇದನ್ನೂ ಓದಿ: ಈ ‘ವಿಂಡೋ ಸೀಟ್​’ನಲ್ಲಿ ಏನಿದೆ ಗೊತ್ತಾ? ನೀವೇ ನೋಡಿ …

    ಬರೀ ನಟ-ನಟಿಯರು, ತಂತ್ರಜ್ಱರು ಮಾತ್ರವಲ್ಲ, ಹಲವು ಚಿತ್ರತಂಡದವರು ನಾಡಿನ ಜನತೆಗೆ ಶುಭಾಶಯ ಕೋರುವುದರ ಜತೆಗೆ, ತಮ್ಮ ಚಿತ್ರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿದ್ದಾರೆ. ರಕ್ಷಿತ್​ ಶೆಟ್ಟಿ ಅಭಿನಯದ ‘777 ಚಾರ್ಲಿ’, ಧನವೀರ್​ ಗೌಡ ಅಭಿನಯದ ‘ಬಂಪರ್​’, ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’, ಪ್ರಮೋದ್​ ಅಭಿನಯದ ‘ಇಂಗ್ಲೀಷ್​ ಮಂಜ’, ಶ್ರೀಮುರಳಿ ಅಭಿನಯದ ‘ಮದಗಜ’, ರಚಿತಾ ರಾಮ್​ ಅಭಿನಯದ ‘ಪಂಕಜ ಕಸ್ತೂರಿ’, ‘ನೆನಪಿರಲಿ’ ಪ್ರೇಮ್​ ಅಭಿನಯದ ‘ಪ್ರೇಮಂ ಪೂಜ್ಯಂ’, ದರ್ಶನ್​ ಅಭಿನಯದ ‘ರಾಬರ್ಟ್​’, ‘ದುನಿಯಾ’ ವಿಜಯ್​ ಅಭಿನಯದ ‘ಸಲಗ’, ‘ಮದರಂಗಿ’ ಕೃಷ್ಣ ಅಭಿನಯದ ‘ಶ್ರೀಕೃಷ್ಣ @ಜಿಮೇಲ್​ಡಾಟ್​ಕಾಂ’ ಚಿತ್ರತಂಡಗಳು ಶುಭಕೋರಿವೆ.

    ದೀಪಾವಳಿ ಹಬ್ಬದಂದು ಸಿಹಿಸುದ್ದಿ ಹಂಚಿಕೊಂಡ ಮಯೂರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts