More

    ನಟ ದರ್ಶನ್ ಕಾಟೇರ ನೋಡಿ ಹಿರಿಯ ನಟಿ ಗಿರಿಜಾ ಲೋಕೇಶ್ ಏನಂದ್ರು?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾವು ಡಿಸೆಂಬರ್ 29ರಂದು ತೆರೆಕಂಡಿತ್ತು. ಈ ಸಿನಿಮಾವು ನಟ ದರ್ಶನ್ ಅವರ ವೃತ್ತಿ ಬದುಕಿನಲ್ಲಿಯೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಕಾಟೇರ ಸಿನಿಮಾವು ಈವರೆಗೂ 150 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ.

    ಇದನ್ನೂ ಓದಿ:ಭಾರತದ 20 ಲಕ್ಷ ಜನರಿಗೆ ಎಐ ತರಬೇತಿ: ಸತ್ಯ ನಾದೆಲ್ಲಾ 

    ಕಾಟೇರ ಚಿತ್ರವನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ, ಇದು ದರ್ಶನ್​ ದಿ ಬೆಸ್ಟ್ ಸಿನಿಮಾ ಎನ್ನುತ್ತಿರುವಾಗ, ಕಾಟೇರ ಕಥೆಯನ್ನು ಜನ ಸಾಮಾನ್ಯರಷ್ಟೇ ಅಲ್ಲದೇ ಇದೀಗ ರಾಜಕಾರಣಿಗಳು, ಸೆಲೆಬ್ರೆಟಿಗಳು, ವಿಮರ್ಶಕರ ಮನಗೆದ್ದಿದೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಶಾಸಕ ಮಹೇಶ್​ ಟೆಂಗಿನಕಾಯಿ ಕಾಟೇರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕಾಟೇರ ಸಿನಿಮಾವನ್ನು ಕನ್ನಡದ ಹಿರಿಯ ನಟಿ ಗಿರಿಜಾ ಲೋಕೇಶ್ ನೋಡಿದ್ದಾರೆ. ಮನಸಾರೆ ಮೆಚ್ಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಬರೆದಿದ್ದಾರೆ. ಅದು ತುಂಬಾನೆ ಇಂಟ್ರಸ್ಟಿಂಗ್ ಆಗಿದೆ.

    ನಾನು ನೋಡಿದ ಕಾಟೇರ ಚಿತ್ರ ಮೊದಲನೇದಾಗಿ ನಿರ್ದೇಶಕರಿಗೆ ನನ್ನ ಅಭಿನಂದನೆಗಳು ಹಾಗೆ ನಿರ್ದೇಶಕರ ಬೇಕು ಬೇಡಗಳನ್ನು ಹಾಗೂ ಮಾಡಿಕೊಟ್ಟ ನಿರ್ಮಾಪಕರಿಗೆ ನನ್ನ ನಮನಗಳು. ಯಾಕೆಂದರೆ ಇಂಥ ಒಳ್ಳೆ ಕಥೆ ನಾ ಸಿನಿಮಾ ಮಾಡಿದ್ದೀರಾ ಒಂದು ದೃಶ್ಯ ಕಾವ್ಯವನ್ನು ನೋಡಿದ ಹಾಗಾಯಿತು ಇದು ಇಂದು ನೆನ್ನೆಯದಲ್ಲ ಸಮಸ್ಯೆ ನಮ್ಮನ್ನು ಕಾಡುತ್ತಿರುವ ಸಮಸ್ಯೆ ಕಥೆಗೆ ತಕ್ಕ ಪಾತ್ರಗಳ ಆಯ್ಕೆ ಯಾವ ಪಾತ್ರದ ಬಗ್ಗೆ ಹೇಳುವುದು ದರ್ಶನ್ ರವರ ಪಾತ್ರದ ಬಗ್ಗೆ ಹೇಳುವುದಾದರೆ ಆ ಪಾತ್ರದ ಬೇಕಾದ ನಿಲುವು ಎತ್ತರ ಮೈ ಕಟ್ಟು ಅವರ ಅಭಿನಯ ಎಂಥವರಿಗು ದಂಗು ಪಡಿಸುತ್ತೆ ಎಂದಿದ್ದಾರೆ.

    ಸಾಮಾನ್ಯವಾಗಿ ನನ್ನಂಥ ವಯಸ್ಸಾದವರಿಗೆ ಫೈಟಿಂಗ್ ಇಷ್ಟವಾಗುವುದಿಲ್ಲ ಆದರೆ ಈ ಸಿನಿಮಾದಲ್ಲಿ ಪ್ರತಿಯೊಂದು ಫೈಟಿಗೂ ನಾನು ಕೂಡ ವಿಸಿಲ್ ಹೊಡೆಯುತ್ತಿದ್ದೆ ಅಂತ ಖುಷಿಯಾಗುತ್ತಿತ್ತು ಭಾವಿಯ ದೃಶ್ಯವಂತ ನಿರ್ದೇಶಕನ ಕಲ್ಪನೆ ಏನು ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು ಶ್ರುತಿ ಅವರು ಮಗುವಿಗೆ ಹಾಲು ಕುಡಿಸಲು ಬರುವ ದೃಶ್ಯ ಕಣ್ಣಲ್ಲಿ ನೀರು ತರಿಸುತ್ತಿತ್ತು ಆ ದೃಶ್ಯದಲ್ಲಿ ಚೈತನ್ ರವರು ಎಷ್ಟು ಅದ್ಭುತವಾಗಿ ಮಾಡಿದ್ದಾರೆ ಅಭಿನಯಿಸಿದ್ದಾರೆ ಎಂದು ಹೇಳಿದ್ದಾರೆ.

    ನಟ ದರ್ಶನ್ ಕಾಟೇರ ನೋಡಿ ಹಿರಿಯ ನಟಿ ಗಿರಿಜಾ ಲೋಕೇಶ್ ಏನಂದ್ರು?

    ಕಾಟೇರ ಸಣ್ಣವನಿದ್ದಾಗ ಬರುವ ಪಾತ್ರ ಚಂದುದು ಅವನದು ಕೂಡ ಸಣ್ಣ ಪಾತ್ರವಾದರೂ ನೆನಪಿಟ್ಟುಕೊಳ್ಳುವ ಪಾತ್ರ ಮಾಮನ ಹಾಗೆ ಮೈಮಟವನ್ನು ಎಷ್ಟು ಚಂದ ಮಾಡಿಕೊಂಡಿದ್ದಾನೆ ಅವನ ಗೆಳತಿಯಾಗಿ ಅಂಕಿತ ಗೌಡ ಕೂಡ ಎಂಥ ಮುದ್ದಾಗಿ ಕಾಣುತ್ತೆ ಮತ್ತೆ ಬಿರಾದರ್ ಅವರದಂತೂ ಮರೆಯಲಾಗದ ಪಾತ್ರ ಅವರ ಕೈಯಲ್ಲಿ ಹಿರಣ್ಯ ಕಶ್ಯಪ್ವಿನ ಪಾತ್ರ ಮಾಡಿಸಿದ್ದು ಹಿಂದೆ ಕಾಟಿರಾ ದನಿ ಕೊಟ್ಟಿದ್ದು ಅದ್ಭುತವಾಗಿತ್ತು ಎಂದು ಬರೆದು ಕೊಂಡಿದ್ದಾರೆ.

    ನಮ್ಮ ನಾಯಕಿಯನ್ನು ಮರೆಯುವುದು ಹೇಗೆ? ತಾಯಿ ಹಾಗೆ ಸುಂದರ ಮುಖ ನೃತ್ಯ ಎಲ್ಲವೂ ಎಲ್ಲವೂ ಚೆಂದ ಕಳಶಪ್ರಾಯವಾಗಿರುವ ದರ್ಶನ್ ರವರಂತೂ ಒಳ್ಳೆಯ ಅಭಿನಯ ಚಿತ್ರ ನೋಡಿ ಬರುವಾಗ ಮನಸ್ಸು ತುಂಬಿ ಬಂತು ಎಂಥ ಒಳ್ಳೆ ಚಿತ್ರವನ್ನ ಕೊಟ್ಟಿದ್ದಾರೆ ಪ್ರತಿಯೊಬ್ಬರ ಪಾತ್ರ ಪ್ರತಿಯೊಂದು ಪಾತ್ರ ಎಷ್ಟು ಮುಖ್ಯವಾದದ್ದು ಎಲ್ಲರೂ ಎಲ್ಲರೂ ತುಂಬಾ ಚೆಂದವಾಗಿ ಅಭಿನಯಿಸಿದ್ದಾರೆ.

    ನಮ್ಮ ನಿರ್ದೇಶಕರಿಗೆ ನಿಜವಾಗಿ ಹ್ಯಾಟ್ಸಾಫ್ ಹೇಳಲೇಬೇಕು ಹಾಗೆ ನಿರ್ಮಾಪಕರಿಗೂ ನನ್ನ ಅಭಿನಂದನೆಗಳು ಹೀಗೆ ಒಳ್ಳೆಯ ಚಿತ್ರಗಳನ್ನು ಕೊಡುತ್ತಾ ಹೋಗಿ ನಮನೆಗಳು ಎಂದು ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts