More

    ಭಾರತದ 20 ಲಕ್ಷ ಜನರಿಗೆ ಎಐ ತರಬೇತಿ: ಸತ್ಯ ನಾದೆಲ್ಲಾ 

    ಮುಂಬೈ: 2025ರ ವೇಳೆಗೆ ಭಾರತದ 20 ಲಕ್ಷ ಜನರಿಗೆ ಕೃತಕ ಬುದ್ಧಿಮತ್ತೆ (ಎಐ) ತರಬೇತಿ ನೀಡಲಾಗುವುದು ಎಂದು ಮೈಕ್ರೋಸಾಫ್ಟ್ ಸಿಇಒ ಮತ್ತು ಅಧ್ಯಕ್ಷ ಹೈದರಾಬಾದ್​ ಮೂಲದ ಸತ್ಯ ನಾದೆಲ್ಲಾ ಹೇಳಿದರು.

    ಇದನ್ನೂ ಓದಿ:5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

    ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಭಾರತಕ್ಕೆ ಎರಡು ದಿನದ ಭೇಟಿ ನೀಡಿದ್ಧಾರೆ. ಇವತ್ತು ಮುಂಬೈ, ನಾಳೆ ಬೆಂಗಳೂರಿನಲ್ಲಿ ಇರಲಿದ್ದಾರೆ. AI ಗಾಗಿ ಡೇಟಾಸೆಟ್‌ಗಳನ್ನು ರಚಿಸುವ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ, AI ಕ್ಷೇತ್ರದಲ್ಲಿ ಭಾರತ-ಯುಎಸ್ ಸಂಬಂಧಗಳ ಕುರಿತು ಚರ್ಚಿಸಿದರು.

    ಎಐ ಶಕ್ತಿಶಾಲಿ ಹೊಸ ತಂತ್ರಜ್ಞಾನವಾಗಿದೆ. ಅದರ ಬಗ್ಗೆ ಚಿಂತಿಸಬೇಡಿ. ಪ್ರಪಂಚದಾದ್ಯಂತ ವೇಗವಾಗಿ ವಿಸ್ತರಿಸಿ. ಅನುಸರಿಸಬೇಕಾದ ನೀತಿಗಳನ್ನು ರೂಪಿಸುವಲ್ಲಿ ಭಾರತ ಮತ್ತು ಅಮೆರಿಕಾ ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ ಎಂದರು.

    ಈ ಪಾಲುದಾರಿಕೆ ಎರಡೂ ದೇಶಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. 2025ರ ವೇಳೆಗೆ ಭಾರತದಲ್ಲಿ 20 ಲಕ್ಷ ಜನರಿಗೆ ಈ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ನೀಡುತ್ತೇವೆ. ದೇಶದ ಜಿಡಿಪಿ ಹೆಚ್ಚಿಸಲು ಎಐ ನೆರವಾಗಲಿದೆ. ಭಾರತವು ಇದೀಗ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಸತ್ಯ ನಾಡೆಲ್ಲಾ ಹೇಳಿದರು.

    ಮೈಕ್ರೋಸಾಫ್ಟ್ ಇತ್ತೀಚೆಗೆ ಪ್ರಮುಖ ಮೈಲಿಗಲ್ಲನ್ನು ದಾಟಿದೆ. ಮಾರುಕಟ್ಟೆ ಬಂಡವಾಳೀಕರಣವು ಮೂರು ಟ್ರಿಲಿಯನ್ ಡಾಲರ್‌ಗಳನ್ನು ದಾಟಿದ ಎರಡನೇ ಕಂಪನಿಯಾಗಿದೆ. ಮೈಕ್ರೋಸಾಫ್ಟ್ ಕೆಲವು ಸಮಯದಿಂದ AI ಅನ್ನು ಓಪನ್ ಎಐ ಜೊತೆಗೆ ಸಂಶೋಧಿಸಿದೆ. ಇದರ ಭಾಗವಾಗಿ ಹೊಸ ಉಪಕರಣಗಳನ್ನು ಪರಿಚಯಿಸಲಾಗುತ್ತಿದೆ. ಮತ್ತೊಂದೆಡೆ, ಫೆಬ್ರವರಿ 4 ರಂದು, ಸತ್ಯ ನಾಡೆಲ್ಲಾ ಕಂಪನಿಯ ಸಿಇಒ ಆಗಿ ಹತ್ತು ವರ್ಷಗಳನ್ನು ಪೂರೈಸಿದರು. ಪ್ರಸ್ತುತ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

    ಭಾರತಕ್ಕೆ ಎರಡು ದಿನದ ಭೇಟಿ ನೀಡಿರುವ ಮೈಕ್ರೋಸಾಫ್ಟ್ ಸಿಇಒ ಅವರು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ಭಾರತಕ್ಕೆ ನೆರವಾಗುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಭಾರತ ತನ್ನದೇ ಎಐ ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ವಿಶ್ವಕ್ಕೆ ರಫ್ತು ಮಾಡಬೇಕು. ಆ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ನೆರವಾಗಲು ಬಯಸುತ್ತದೆ ಎಂದು ಸಂದರ್ಶನವೊಂದರಲ್ಲಿ ಸತ್ಯ ಹೇಳಿದ್ದಾರೆ. ಸತ್ಯ ನಾದೆಲ್ಲಾ ಫೆಬ್ರುವರಿ 8, ನಾಳೆ ಬೆಂಗಳೂರಿಗೆ ಬರಲಿದ್ದಾರೆ.

    ಈ ಬೇಸಿಗೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಏಕೆ ಹೆಚ್ಚು ಸೇವಿಸಬೇಕು? ಕಾರಣ ಇಲ್ಲಿದೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts