More

    ಕುಡಿತ-ಸಿಗರೇಟ್​ ಅಭ್ಯಾಸ ಇದ್ದದ್ದು ನಿಜ ಎಂದ ಲೂಸ್​ಮಾದ, ರಾಗಿಣಿ ಬಗ್ಗೆ ಹೇಳಿದ್ದೇನು?

    ಬೆಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ಐಎಸ್​ಡಿ ವಿಚಾರಣೆ ಎದುರಿಸಿದ್ದ ಲೂಸ್ ಮಾದ ಯೋಗಿ ‘ಮಾದಕ’ ನಂಟಿನ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹೊರಹಾಕಿದ್ರು.

    ಹೊಸಕೆರೆಹಳ್ಳಿ ನಿವಾಸದ ಬಳಿ ಮಧ್ಯಾಹ್ನ 12.10ರ ಸುಮಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೂಸ್​ಮಾದ, 2013ರಲ್ಲಿ ರಾಗಿಣಿ ನಾನು ಸಿನಿಮಾ ಮಾಡಿದ್ದೆ. ಅವರ ನನ್ನ ಸಂಬಂಧ ಸಿನಿಮಾಕ್ಕಷ್ಟೆ. ನನಗೆ ಡ್ರಗ್ಸ್​ ಪೆಡ್ಲರ್​ಗಳ ಜತೆ ಲಿಂಕ್​ ಇಲ್ಲ. ನಾನು ಯಾವ ಪಾರ್ಟಿಗೂ ಹೋಗಿಲ್ಲ. ಕುಡಿತ, ಸಿಗರೇಟ್​ ಸೇವನೆ ಅಭ್ಯಾಸ ಇದ್ದದ್ದು ನಿಜ ಈ ಬಗ್ಗೆ ಐಎಸ್​ಡಿ ವಿಚಾರಣೆ ವೇಳೆ ಹೇಳಿದ್ದೇನೆ ಎಂದರು. ಇದನ್ನೂ ಓದಿರಿ ಮತ್ತೊಂದು ಎಡವಟ್ಟು ಮಾಡಿಕೊಂಡ ಲೂಸ್​ ಮಾದ!

    ಐಎಸ್​ಡಿಯಿಂದ ನನಗೆ ಶುಕ್ರವಾರ ನೋಟಿಸ್​ ಬಂದಿತ್ತು. ಇದನ್ನು ಕಂಡು ಆಶ್ಚರ್ಯ ಆಯ್ತು. ನನಗಷ್ಟೇ ಅಲ್ಲ 15-20 ಮಂದಿಗೆ ನೋಟಿಸ್​ ಹೋಗಿದೆ. ನನ್ನನ್ನು ಎರಡು ಗಂಟೆ ಕಾಲ ವಿಚಾರಣೆ ಮಾಡಿದರು. ರಾಗಿಣಿ ಬಗ್ಗೆ ನನ್ನನ್ನು ಏನೂ ಕೇಳಲಿಲ್ಲ. 2011-2012ರ ನಂತರ ನಾನು ಹೆಚ್ಚಾಗಿ ಪಾರ್ಟಿಗಳಿಗೇ ಹೋಗಿಲ್ಲ. ರಾಗಿಣಿ ದ್ವಿವೇದಿ, ಐಂದ್ರಿತಾ ರೇ ಹೊರತುಪಡಿಸಿ ಡ್ರಗ್ಸ್​ ಕೇಸ್​ನ ಆರೋಪಿಗಳು ಯಾರು ನನಗೆ ಗೊತ್ತಿಲ್ಲ ಎಂದು ಲೂಸ್​ಮಾದ ಯೋಗಿ ಸ್ಪಷ್ಟಪಡಿಸಿದರು.

    ಸಾಲು ಸಾಲು ಸಿನಿಮಾಗಳು ಸೋತಾಗ ಡಿಪ್ರೆಷನ್​ಗೆ ಜಾರಿದ್ದು ನಿಜ. ಆಗ ಮದ್ಯಪಾನ, ಧೂಮಪಾನ ಸೇವನೆ ಹೆಚ್ಚಾಗಿತ್ತು. ಆದರೀಗ ಎಲ್ಲವನ್ನೂ ಕಡಿಮೆ ಮಾಡಿದ್ದೇನೆ ಎಂದ ಯೋಗಿ, ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲ ಅಂತ ಹೇಳೋದು ಬೇಡ. ಯಾರೋ ಕೆಲವರು ಮಾಡೋ ಕೆಲಸಕ್ಕೆ ಪೂರ್ತಿ ಚಿತ್ರರಂಗವನ್ನು ಹೊಣೆ ಮಾಡೋದು ಬೇಡ. ಸಿನಿಮಾದವರು ಮಾತ್ರವಲ್ಲ, ವಿರೇನ್ ಖನ್ನಾ ಸೇರಿದಂತೆ ಹಲವರು ಹೊರಗಿನವರು ಬಂಧನವಾಗಿದ್ದಾರೆ. ರಾಜಕಾರಣಿಗಳ ಮಕ್ಕಳ ಹೆಸರೂ ಕೇಳಿ ಬರುತ್ತಿದೆ ಎಂದರು.

    ಡ್ರಗ್ಸ್​ ಕೇಸ್​: ‘ಬ್ರಹ್ಮಗಂಟು’ ಖ್ಯಾತಿಯ ಗೀತಾ, ‘ಗಟ್ಟಿಮೇಳ’ದ ವಿಕ್ರಾಂತ್​ಗೆ ಐಎಸ್​ಡಿ ಡ್ರಿಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts