More

    ಮತ್ತದೇ ಮಂಗ ಲಾರಿಯಲ್ಲಿ ಬಂದಿಳಿಯಿತು, ಕೊಟ್ಟಿಗೆಹಾರದಲ್ಲಿ ಆತಂಕ!; ನರನ ವಿರುದ್ಧ ವಾನರನ ಸೇಡು?

    ಚಿಕ್ಕಮಗಳೂರು: ಮತ್ತದೇ ಮಂಗ ಲಾರಿಯಲ್ಲಿ ಬಂದಿಳಿದಿದ್ದರಿಂದ ಕೊಟ್ಟಿಗೆಹಾರ ಪ್ರದೇಶದಲ್ಲಿ ಪುನಃ ಅದೇ ಆತಂಕ ಮರುಕಳಿಸಿದೆ. ನರನ ವಿರುದ್ಧ ಸೇಡಿಗಾಗಿ ಈ ವಾನರ ಮತ್ತೆ ಬಂದಿರಬೇಕು ಎಂಬ ಭಯ ಇದೀಗ ಸ್ಥಳೀಯರನ್ನು ಕಾಡಲಾರಂಭಿಸಿದೆ.

    ಲಾರಿಯೊಂದರಲ್ಲಿ 22 ಕಿ.ಮೀ. ದೂರದಿಂದ ಮರಳಿರುವ ಈ ಮಂಗ, ಇಂದು ರಾತ್ರಿ ಕೊಟ್ಟಿಗೆ ಹಾರ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಸೆ.16ರಂದು ಇಲ್ಲಿನ ಮುರಾರ್ಜಿ ಶಾಲೆಯಲ್ಲಿ ಮಂಗನೊಂದಿಗೆ ಆಟೋ ಚಾಲಕನೊಬ್ಬ ಕಿರಿಕ್ ಮಾಡಿಕೊಂಡಿದ್ದು, ಅದು ರೊಚ್ಚಿಗೆದ್ದಿತ್ತು.

    ಇದನ್ನೂ ಓದಿ: ಬಕೆಟ್ ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ; ಆಕೆಯನ್ನು ರಕ್ಷಿಸಲು ಧಾವಿಸಿದ ಪತಿ ಪ್ರಾಣಾಪಾಯದಿಂದ ಪಾರು..

    ಆದರೆ ಅಂದು ಸುಮಾರು 50 ಜನರು ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿದ್ದಲ್ಲದೆ, ಕೊನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಮಂಗನನ್ನು ಸೆರೆ ಹಿಡಿದಿದ್ದರು. ಬಳಿಕ ಅದನ್ನು 22 ಕಿ.ಮೀ. ದೂರ ತೆರಳಿ ಚಾರ್ಮಾಡಿ ಘಾಟ್​ನಲ್ಲಿ ಬಿಟ್ಟು ಬಂದಿದ್ದರು. ಆದರೆ ಅದೇ ಮಂಗ ಇಂದು ಲಾರಿಯೊಂದನ್ನು ಏರಿ ಮತ್ತದೇ ಪ್ರದೇಶಕ್ಕೆ ಬಂದಿಳಿದಿದೆ. ಇನ್ನು ಆ ಆಟೋಚಾಲಕನಿಗೇನು ಗ್ರಹಚಾರ ಕಾದಿದೆಯೋ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

    ನಿನ್ನೆಯಷ್ಟೇ ವಿದೇಶದಿಂದ ಬಂದಿದ್ರು, ಇಂದು ಸುಟ್ಟು ಕರಕಲಾದ್ರು; ಸಿಲಿಂಡರ್ ಸ್ಫೋಟಕ್ಕೆ ಅಮ್ಮ-ಮಗಳು ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts