More

    ಸಾವಿರಾರು ಅಭಿಮಾನಿಗಳನ್ನು ಆಂಧ್ರದಲ್ಲಿ ಕಂಡು ದಿಲ್ ಖುಷ್ ಆದ ಸಮಂತಾ! ಫೋಟೋಗಳು ವೈರಲ್…

    ಇಂದು ಮಧ್ಯಾಹ್ನ ನಟಿ ಸಮಂತಾ ರುತ್ ಪ್ರಭು ಆಂಧ್ರದ ನಲ್ಗೊಂಡದಲ್ಲಿ ‘ಮಾಂಗಲ್ಯಾ’ ಎಂಬ ಒಂದು ಸ್ಟೋರ್​ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಾಗಾಗಿ, ನಟಿಯನ್ನು ನೋಡಲು ಈ ಈವೆಂಟ್​ನಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ನೆರೆದಿದ್ದು, ಲೇನ್‌ಗಳಲ್ಲಿ ಕಿಕ್ಕಿರಿದು ಕಾಯುತ್ತಿದ್ದರು. ಅಂದಹಾಗೆ, ಈ ಸಂದರ್ಭದಲ್ಲಿ ಗುಲಾಬಿ ಬಣ್ಣದ ಸೀರೆಯಲ್ಲಿ ನಟಿ ಸಮಂತಾ ಎಲ್ಲರ ಗಮನ ಸೆಳೆದರು. ಜತೆಗೆ, ಕಾರಿನ ಸನ್‌ರೂಫ್ ಮೂಲಕ ಕಾರ್ಯಕ್ರಮಕ್ಕೆ ಹೋಗುವಾಗ ದಾರಿಯಲ್ಲಿ ನಟಿ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕೈ ಬೀಸಿದರು.
    ನಟಿ ಮೇಲಿನ ಪ್ರೀತಿಯನ್ನು ತೋರಿಸಲು ಅಭಿಮಾನಿಯೊಬ್ಬರು ಕೈಯಿಂದ ಮಾಡಿದ ಸ್ಕೆಚ್ ಅನ್ನು ಸಹ ನೀಡಿದ್ದುರು. ಸಮಂತಾ ಶೀಘ್ರದಲ್ಲೇ ಗುಣಶೇಖರ್​ರ ಶಾಕುಂತಲಂನಲ್ಲಿ ಕಾಣಿಸಿಕೊಳ್ಳಲಿದ್ದು, ದೇವ್ ಮೋಹನ್ ಮತ್ತು ಅಲ್ಲು ಅರ್ಹ ಸಮಂತಾ ಜೆತೆ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯ, ನಲ್ಗೊಂಡದಲ್ಲಿನ ತಮ್ಮ ಫೋಟೋಗಳನ್ನು ಹಂಚಿಕೊಂಡ ಸಮಂತಾ, ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳು ತಿಳಿಸಿದ್ದಾರೆ. ನಟಿ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೇವಲ 2 ಗಂಟೆಗೆ 1 ಮಿಲಿಯನ್ ಲೈಕ್ಸ್ ಹರಿದು ಬಂದಿವೆ

    ಸಾವಿರಾರು ಅಭಿಮಾನಿಗಳನ್ನು ಆಂಧ್ರದಲ್ಲಿ ಕಂಡು ದಿಲ್ ಖುಷ್ ಆದ ಸಮಂತಾ! ಫೋಟೋಗಳು ವೈರಲ್... ಸಾವಿರಾರು ಅಭಿಮಾನಿಗಳನ್ನು ಆಂಧ್ರದಲ್ಲಿ ಕಂಡು ದಿಲ್ ಖುಷ್ ಆದ ಸಮಂತಾ! ಫೋಟೋಗಳು ವೈರಲ್... ಸಾವಿರಾರು ಅಭಿಮಾನಿಗಳನ್ನು ಆಂಧ್ರದಲ್ಲಿ ಕಂಡು ದಿಲ್ ಖುಷ್ ಆದ ಸಮಂತಾ! ಫೋಟೋಗಳು ವೈರಲ್... ಸಾವಿರಾರು ಅಭಿಮಾನಿಗಳನ್ನು ಆಂಧ್ರದಲ್ಲಿ ಕಂಡು ದಿಲ್ ಖುಷ್ ಆದ ಸಮಂತಾ! ಫೋಟೋಗಳು ವೈರಲ್...

    ‘ಭೀಮ್ಲಾ ನಾಯಕ್’ನಲ್ಲಿ ಸುದೀಪ್ ನಟಿಸದಿರುವುದು ಒಳ್ಳೇದಾಯ್ತು ಎಂದ ಅಭಿಮಾನಿಗಳು! ಕಾರಣ?

    ಟ್ವಿಟರ್​ನಲ್ಲಿ ನಟ ಹೃತಿಕ್ ರೋಷನ್ ಅವರದ್ದೇ ಹವಾ! ವಿಡಿಯೋ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts