More

    31 ವರ್ಷಗಳ ನಂತರ ಮತ್ತೊಮ್ಮೆ ಜತೆಯಾಗಿ ನಟಿಸಲಿದ್ದಾರೆ ಸಲ್ಮಾನ್​ – ರೇವತಿ

    ಮುಂಬೈ: ಸಲ್ಮಾನ್​ ಖಾನ್​ ಮತ್ತು ರೇವತಿ ಇದುವರೆಗೂ ನಟಿಸಿದ್ದು ಒಂದೇ ಒಂದು ಚಿತ್ರದಲ್ಲಿ. 1991ರಲ್ಲಿ ಬಿಡುಗಡೆಯಾದ ‘ಲವ್​’ ಚಿತ್ರದಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ‘ಸಾಥಿಯಾ ಥೂನೆ ಕ್ಯಾ ಕಿಯಾ’ ಎಂಬ ಹಾಡು ಬಹಳ ಜನಪ್ರಿಯವಾಗಿತ್ತು.

    ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ… ಈ ಬಗ್ಗೆ ಯಾವುದೇ ದೂರು ಬಂದಿಲ್ಲ!

    ಈಗ್ಯಾಕೆ ಈ ವಿಷಯ ಎಂದರೆ ಸಲ್ಮಾನ್​ ಮತ್ತು ರೇವತಿ, ಈಗ 31 ವರ್ಷಗಳ ನಂತರ ಜತೆಯಾಗಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಜೋಡಿ ಇಷ್ಟು ವರ್ಷಗಳಲ್ಲಿ ಜತೆಯಾಗಿ ನಟಿಸದಿದ್ದರೂ, 2004ರಲ್ಲಿ ಬಿಡುಗಡೆಯಾದ ‘ಫಿರ್​ ಮಿಲೇಂಗೆ’ ಎಂಬ ಚಿತ್ರದಲ್ಲಿ ಸಲ್ಮಾನ್​ ಅವರನ್ನು ನಿರ್ರ್ದೇಶಿಸಿದ್ದರು. ಈಗ ‘ಟೈಗರ್​ 3’ ಚಿತ್ರದಲ್ಲಿ ಸಲ್ಮಾನ್​ ಮತ್ತು ರೇವತಿ ಜತೆಯಾಗಿ ನಟಿಸುತ್ತಿದ್ದಾರೆ.

    ಈ ವಿಷಯವನ್ನು ಖುದ್ದು ಸಲ್ಮಾನ್​ ಘೋಷಿಸಿದ್ದಾರೆ. ಇತ್ತೀಚೆಗೆ ‘ಬಿಗ್​ ಬಾಸ್​’ನ ‘ವೀಕೆಂಡ್​ ಕಾ ವಾರ್​’ ಕಾರ್ಯಕ್ರಮಕ್ಕೆ ಕಾಜೋಲ್​ ಮತ್ತು ರೇವತಿ ಅತಿಥಿಗಳಾಗಿ ಬಂದಿದ್ದರು. ಕಾಜೋಲ್​ ಮತ್ತು ವಿಶಾಲ್​ ಜೇಟ್ವಾ ಅಭಿನಯದ ‘ಸಲಾಂ ವೆಂಕಿ’ ಚಿತ್ರವನ್ನು ರೇವತಿ ನಿರ್ದೇಶನ ಮಾಡಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ಅವರಿಬ್ಬರೂ ‘ಬಿಗ್​ ಬಾಸ್​’ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಸಮಯದಲ್ಲಿ ಸಲ್ಮಾನ್​ ತಾನು ರೇವತಿ ಜತೆಗೆ ‘ಟೈಗರ್​ 3’ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚು ವಿಷಯಗಳನ್ನು ಬಹಿರಂಗಗೊಳಿಸುವುದಕ್ಕೆ ಹೋಗಿಲ್ಲ.

    ಇದನ್ನೂ ಓದಿ: ‘ಅಶ್ವತ್ಥಾಮ’ನಾಗುತ್ತಾರಾ ಸುದೀಪ್​? ಕೆಆರ್​ಜಿ ಸ್ಟುಡಿಯೋಸ್​ನಿಂದ ಚಿತ್ರ ನಿರ್ಮಾಣ?

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಟೈಗರ್​ 3’ ಚಿತ್ರವು 2023ರ ಈದ್​ ಸಂದರ್ಭದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದ್ದು, ಚಿತ್ರವು 2023ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಬರೀ ಹಿಂದಿಯಷ್ಟೇ ಅಲ್ಲ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.

    ಡಾ.ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹ ಪ್ರವೇಶ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts