More

    ಡಾ.ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹ ಪ್ರವೇಶ …

    ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾ. ವಿಷ್ಣುವರ್ಧನ್​ ಅವರ ಜಯನಗರದ ಮನೆಯನ್ನು ಮರುನಿರ್ಮಾಣ ಮಾಡಲಾಗಿದ್ದು, ಇಂದು ಗೃಹಪ್ರವೇಶ ಯಶಸ್ವಿಯಾಗಿ ಮುಗಿದಿದೆ.

    ಜಯನಗರದ ನಾಲ್ಕನೇ ಟಿ ಬ್ಲಾಕ್​ನಲ್ಲಿ ವಿಷ್ಣುವರ್ಧನ್​ 70ರ ದಶಕದ ಕೊನೆಯಲ್ಲೇ ಮನೆ ಕಟ್ಟಿಸಿದ್ದರು. ಆ ಮನೆಯಲ್ಲಿ ಹಲವು ವರ್ಷಗಳ ಕಾಲ ವಾಸ ಮಾಡಿದ ಅವರಿಗೆ, ಅದನ್ನು ನವೀಕರಿಸಬೇಕು ಎಂಬ ಆಸೆ ಇತ್ತಂತೆ. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಅವರು ನಿಧನರಾಗಿ 13 ವರ್ಷಗಳ ನಂತರ ಆ ಮನೆ ಮರುನಿರ್ಮಾಣವಾಗಿದ್ದು, ಮನೆಗೆ ‘ವಲ್ಮೀಕ’ ಎಂಬ ಹೆಸರನ್ನು ಇಡಲಾಗಿದೆ.

    ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ… ಈ ಬಗ್ಗೆ ಯಾವುದೇ ದೂರು ಬಂದಿಲ್ಲ!

    ಈ ಮನೆಯ ನಿರ್ಮಾಣ ಶುರುವಾಗಿ ಮೂರು ವರ್ಷಗಳೇ ಆಗಿತ್ತು. ಆದರೆ, ಕರೊನಾ ಮತ್ತು ಮತ್ತಿತ್ತರ ಕಾರಣಗಳಿಂದಾಗಿ ಮನೆ ನಿರ್ಮಾಣ ವಿಳಂಬವಾಯ್ತು. ಈಗ ಮನೆಯ ನಿರ್ಮಾಣ ಮುಕ್ತಾಯವಾಗಿದ್ದು, ಇಂದು ಗೃಹಪ್ರವೇಶ ಸಮಾರಂಭ ನಡೆದಿದೆ.

    ಡಾ.ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹ ಪ್ರವೇಶ …

    ಈ ಹೊಸ ಮನೆಯ ಗೇಟ್​ಗೆ ಕಬ್ಬಿಣದ ಸಿಂಹದ ಮೂರ್ತಿಯನ್ನು ಅಂಟಿಸಲಾಗಿದೆ. ಮೊದಲು ಎರಡಂತಸ್ತಿದ್ದ ಮನೆಯ ಜಾಗದಲ್ಲಿ ನಾಲ್ಕಂತಸ್ತಿನ ಆಧುನಿಕ ಮನೆ ತಲೆ ಎತ್ತಿ ನಿಂತಿದೆ. ಮುಂಚೆ ಇದ್ದ ಸಣ್ಣ ಉದ್ಯಾನವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇನ್ನು, ಹಳೆಯ ಮನೆ ಇದ್ದ ಜಾಗದಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗಿದೆ. 100/100 ಚದುರಡಿ ವಿಸ್ತೀರ್ಣ ಇರುವ ಈ ಮನೆಯ ಕೆಳಭಾಗವದಲ್ಲಿ ವಿಶಾಲವಾದ ಕಾರ್​ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಮನೆ ಮುಂದೆ ಕೃಷ್ಣನ ಮೂರ್ತಿ ಇದೆ. ಈ ಮೂರ್ತಿಯನ್ನು ಸ್ವತಃ ವಿಷ್ಣುವರ್ಧನ್​ ಅವರೇ ಅಲ್ಲಿ ಸ್ಥಾಪನೆ ಮಾಡಿದ್ದರು. ಅದನ್ನು ಹಾಗೆಯೆ ಅಲ್ಲಿಯೆ ಇರಸಿ ಕಲ್ಲಿನ ಮಂಟಪ ಮಾಡಲಾಗಿದೆ. ವಿಷ್ಣುವರ್ಧನ್ ರಿಗೆ ಕೃಷ್ಣ ಎಂದರೆ ತುಂಬಾ ಪ್ರೀತಿ. ಮೊದಲನೆಯ ಮಹಡಿಯಲ್ಲಿ ವಿಷ್ಣುವರ್ಧನ್​ ಅವರ ದೊಡ್ಡ ಫೋಟೋ ಇದೆ. ಎರಡನೆಯ ಮಹಡಿಯಲ್ಲಿ ದೇವರ ಕೋಣೆ ಮತ್ತು ಅಡುಗೆ ಮನೆ ಇದೆ. ಮೂರನೇ ಅಂತಸ್ತಿನಲ್ಲಿ ಮಲಗುವ ಕೋಣೆಗಳಿವೆ.

    ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು ‘ಡವ್ ಮಾಸ್ಟರ್’ ಚಿತ್ರದ ಟ್ರೈಲರ್​

    ಈ ಮನೆಯ ಗೃಹಪ್ರವೇಶ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮನೆ ವೀಕ್ಷಿಸಿ ಮಾತನಾಡಿದ ಮುಖ್ಯಮಂತ್ರಿಗಳು, ‘ವಿಷ್ಣುವರ್ಧನ್ ಒಬ್ಬ ಮೇರು ನಟರಾಗಿದ್ದರು. ಭಾರತಿ ವಿಷ್ಣುವರ್ಧನ್ ತುಂಬಾ ಕಷ್ಟಪಟ್ಟು ಮನೆ ನಿರ್ಮಾಣ ಮಾಡಿದ್ದಾರೆ. ಮನೆ ತುಂಬಾ ಚೆನ್ನಾಗಿ ನಿರ್ಮಿಸಲಾಗಿದೆ‌. ಮೈಸೂರಿನಲ್ಲಿ ವಿಷ್ಣು ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತಿದ್ದು, ಸದ್ಯದಲ್ಲೇ ಕೆಲಸಗಳು ಮುಗಯಲಿವೆ. ವಿಷ್ಣುವರ್ಧನ್​ ಅವರ ಘನತೆ ಮತ್ತು ವ್ಯಕ್ತಿತ್ವಕ್ಕೆ ತಕ್ಕಂತೆ ಮ್ಯೂಸಿಯಂ ಮತ್ತು ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ.

    ಸಮಾರಂಭದಲ್ಲಿ ಸುಮಲತಾ ಅಂಬರೀಶ್​, ಜಗ್ಗೇಶ್​, ರಮೇಶ್​ ಭಟ್​, ರವಿಶಂಕರ್​ ಗೌಡ, ರಾಜೇಂದ್ರ ಸಿಂಗ್​ ಬಾಬು, ಜೈಜಗದೀಶ್​, ವಿಜಯಲಕ್ಷ್ಮೀ ಸಿಂಗ್​, ಗಿರಿಜಾ ಲೋಕೇಶ್​, ಎಂ.ಎನ್​. ಲಕ್ಷ್ಮೀದೇವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts