More

    ಸೇಲಂ ಅಂತರ್ಜಾತಿ ಮದುವೆ ಪ್ರಕರಣ: ಕಿಡ್ನಾಪ್ ಆಗಿದ್ದ ಯುವತಿ ಮಾತು ಕೇಳಿ ಪೊಲೀಸರಿಗೆ ಮಾತ್ರವಲ್ಲ ಪತಿಗೂ ಶಾಕ್​!

    ಸೇಲಂ: ದಲಿತ ಯುವಕನೊಂದಿಗೆ ಅಂತರ್ಜಾತಿ ವಿವಾಹವಾಗಿ ಅಪರಹರಣಕ್ಕೊಳಗಾಗಿದ್ದ ಯುವತಿ ವಾರಗಳ ಬಳಿಕ ಕೊನೆಗೂ ಪತ್ತೆಯಾಗಿದ್ದು, ತಾನೂ ಪಾಲಕರ ಬಳಿಯಲ್ಲೇ ಉಳಿಯುತ್ತೇನೆಂದು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಶನಿವಾರ ಮಹಿಳಾ ಠಾಣೆಗೆ ತನ್ನ ಸಂಬಂಧಿಕರೊಂದಿಗೆ ಆಗಮಿಸಿದ ಜೆ. ಎಲಮತಿ ತನ್ನ ಪಾಲಕರ ಬಳಿಯಲ್ಲೇ ಉಳಿಯುತ್ತೇನೆ. ನಾನು ಸೆಲ್ವನ್​ ಜತೆ ಹೋಗುವುದಿಲ್ಲ ಎಂದು ಹೇಳಿದ್ದಾಗಿ ಕೊಳತೂರು ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಸಿ. ಚಕ್ರಪಾಣಿ ತಿಳಿಸಿದ್ದಾರೆ.

    ಬಳಿಕ ಕುಟುಂಬದ ಒತ್ತಡ ಇರಬಹುದೆಂಬ ಶಂಕೆಯಿಂದ ಎಲಮತಿಯನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದೆವು. ಸಾಕಷ್ಟು ಪ್ರಶ್ನಿಸಿದೆವು. ನಾವು ಇನ್ನೇನು ಮಾಡಲು ಸಾಧ್ಯ? ಅವಳು ಲಿಖಿತ ರೂಪದಲ್ಲಿ ಬರೆದುಕೊಡಲು ಸಿದ್ಧಳಾಗಿದ್ದಳು. ಅಲ್ಲದೆ, ಆಕೆಯ ಮನಸು ಬದಾಲವಣೆಗೆ ಕಾರಣ ನೀಡಿದ ಎಲಮತಿ, ನನ್ನ ಆಯ್ಕೆಯಿಂದ ನನ್ನ ಕುಟುಂಬಕ್ಕೆ ತುಂಬಾ ನೋವುಂಟಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡೆ ಎಂದು ತಿಳಿಸಿದಳು. ನಾವು ಅವಳನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ಇನ್ಸ್​ಪೆಕ್ಟರ್​ ಚಕ್ರಪಾಣಿ ತಿಳಿಸಿದರು.

    ಘಟನೆ ಹಿನ್ನೆಲೆ ಏನು?
    ನವದಂಪತಿ ಪಿ. ಸೆಲ್ವನ್​(25) ಮತ್ತು ಜೆ. ಎಲಮತಿ(23) ಈರೋಡ್​ ಜಿಲ್ಲೆಯ ಭವಾನಿ ಬಳಿಯ ಗ್ರಾಮದವರು. ಮಾರ್ಚ್​ 9ರಂದು ಸಪ್ತಪದಿ ತುಳಿದಿದ್ದರು. ಡ್ರಾವಿಡರ್​ ವಿದುಥಲೈ ಕಜಗಂ(ಡಿವಿಕೆ) ಸಂಘಟನೆಯ ಸದಸ್ಯ ಕವೈ ಈಶ್ವರನ್ ಮುಂದೆ ನಿಂತು ಸೇಲಂ ಜಿಲ್ಲೆಯ ಕೊಳತೂರ್​ ಬ್ಲಾಕ್​ನ ಕವಲಂದಿಯೂರ್​ನಲ್ಲಿ ಅಂತರ್ಜಾತಿ ವಿವಾಹ ಮಾಡಿಸಿದ್ದರು.

    ಮಗಳ ಅಂತರ್ಜಾತಿ ವಿವಾಹದ ಬಗ್ಗೆ ತಿಳಿದ ತಂದೆ ಸೋಮವಾರ ರಾತ್ರಿ ಸುಮಾರು 50 ಮಂದಿಯೊಂದಿಗೆ ಶಸ್ತ್ರಾಸ್ತ್ರಗಳೊಂದಿಗೆ ಬಲವಂತವಾಗಿ ಕವೈ ಈಶ್ವರನ್​ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಬಳಿಕ ನವದಂಪತಿ ತಂಗಿದ್ದ ಸ್ಥಳಕ್ಕೆ ತೆರಳಿ ಈಶ್ವರನ್​ ಸಮೇತ ಮೂವರನ್ನು ಜನನಿಬಿಡ ಪ್ರದೇಶಕ್ಕೆ ಹೊತ್ತೊಯ್ದಿದ್ದರು. ಈ ವೇಳೆ ಈಶ್ವರನ್​ ಮತ್ತು ವಿವಾಹಿತ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ವಿವಾಹಿತೆ ಮಾತ್ರ ಅಂದಿನಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಸೆಲ್ವನ್ ತನ್ನ​ ಪತ್ನಿಯನ್ನು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದ. ಅದರ ಆಧಾರದ ಮೇಲೆ ಪೊಲೀಸರು ಎಲಮತಿ ತಂದೆ ಹಾಗೂ ಸಂಬಂಧಿಕರು ಸೇರಿದಂತೆ 18 ಮಂದಿಯನ್ನು ಬಂಧಿಸಿದ್ದಾರೆ.

    ಜಾಲತಾಣದಲ್ಲಿ ಆಕ್ರೋಶ
    ಇದರ ನಡುವೆ ಅಪಹರಣ ಪ್ರಕರಣ ದಾಖಲಾಗಿ ನಾಲ್ಕು ದಿನ ಕಳೆದಿದ್ದರೂ ಎಲಮತಿಯನ್ನು ಪತ್ತೆ ಹಚ್ಚಲು ಪೊಲೀಸರು ವಿಫಲವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರಿಗೆ ಪ್ರಶ್ನೆಗಳು ಸುರಿಮಳೆ ಎದುರಾಗಿತ್ತು. ಎಲಮತಿ ಎಲ್ಲಿ((#WhereIsElamathi) ಎಂಬ ಹ್ಯಾಶ್​ಟ್ಯಾಗ್​ ತಮಿಳುನಾಡಿನಲ್ಲಿ ಟ್ರೆಂಡಿಂಗ್​ ಆಗಿತ್ತು. ಎಲಮತಿ ಫೋಟೋ ಸಮೇತ ಪೊಲೀಸರನ್ನು ಪ್ರಶ್ನಿಸುತ್ತಾ ಟೀಕಿಸುತ್ತಿದ್ದರು. (ಏಜೆನ್ಸೀಸ್​)

    ಅಂತರ್ಜಾತಿ ದಂಪತಿ ಅಪಹರಿಸಿ ಹಲ್ಲೆ: ತಪ್ಪಿಸಿಕೊಂಡ ವಿವಾಹಿತನಿಂದ ಪತ್ನಿ ನಾಪತ್ತೆ ದೂರು

    ಅಂತರ್ಜಾತಿ ಮದುವೆಯಾದ ಬೆನ್ನಲ್ಲೇ ಕಿಡ್ನಾಪ್ ಆಗಿರುವ ಯುವತಿಯನ್ನು ಪತ್ತೆ ಹಚ್ಚದ ಪೊಲೀಸರ ವಿರುದ್ಧ ನೆಟ್ಟಿಗರ ಆಕ್ರೋಶ!​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts