More

    152 ಕಾಲೇಜುಗಳ 247 ಸಿಬ್ಬಂದಿಗೆ 1 ತಿಂಗಳ ವೇತನ ವಿಳಂಬ; ಅನುದಾನ ಇದ್ದರೂ ವೇತನ ನೀಡದ ಅಧಿಕಾರಿಗಳು

    ಬೆಂಗಳೂರು: ‘ದೇವರು ಕೊಟ್ಟರೂ, ಪೂಜಾರಿ ಕೊಡಲ್ಲ’ ಎಂಬಂತಾಗಿದೆ ಇಲ್ಲಿನ ಬಟವಾಡೆ ಅಧಿಕಾರಿಗಳ ದರ್ಪ. ಸಿಬ್ಬಂದಿ ವೇತನಕ್ಕಾಗಿ ಅನುದಾನ ನೀಡಿದರೂ, ಅದನ್ನು ಬಳಕೆ ಮಾಡಿಕೊಳ್ಳದ ಅಧಿಕಾರಿಗಳು 247 ಸಿಬ್ಬಂದಿಗೆ ಒಂದು ತಿಂಗಳ ವೇತನ ವಿಳಂಬ ಮಾಡಿದ್ದಾರೆ.
    ರಾಜ್ಯದಲ್ಲಿರುವ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 152 ಕಾಲೇಜುಗಳು 247 ಸಿಬ್ಬಂದಿಗೆ ವೇತನ ನೀಡಲು ಅನುದಾನವನ್ನು ಬಳಕೆ ಮಾಡಿಕೊಳ್ಳದೇ ಇರುವುದು ದುರಂತದ ವಿಷಯವಾಗಿದೆ.

    2020-21ನೇ ಸಾಲಿನಲ್ಲಿ ಮಾರ್ಚ್ ಅವಧಿಯ ವೇತನ ಹೊರತು ಪಡಿಸಿ ಯಾವುದೇ ವೇತನ ಬಾಕಿಯನ್ನು ಉಳಿಸಿಕೊಳ್ಳುವಂತಿಲ್ಲ. ಆದರೆ, ರಾಜ್ಯದಲ್ಲಿರುವ 152 ಕಾಲೇಜುಗಳು ಲಭ್ಯವಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳದೆ, ವೇತನ ನೀಡಲು ವಿಳಂಬ ಮಾಡಿವೆ. ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಬಟವಾಡೆ ಅಧಿಕಾರಿಗಳಿಗೆ ವೇತನ ಅನುದಾನ ಪಡೆದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ 

    ವೇತನದ ಅನುದಾನ ಸೆಳೆಯಲು ಖಜಾನೆ-2ರಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದರೂ ವೇತನ ಕ್ಲೇಮು ಮಾಡಲು ಅನಗತ್ಯ ವಿಳಂಬ ಮಾಡಿದ್ದಾರೆ. ಒಂದು ವೇಳೆ ಅನುದಾನ ಇಲಾಖೆಗೆ ವಾಪಸ್ ಹೋದಲ್ಲಿ, ವೇತನ ಬಿಡುಗಡೆ ಬಗ್ಗೆ ಸಿಬ್ಬಂದಿ ದೂರು ನೀಡಿದಲ್ಲಿ ಬಟವಾಡೆ ಅಧಿಕಾರಿಗಳನ್ನೇ ನೇರ ಹೊಣೆಗಾರರಾಗಿ ಮಾಡುವುದಾಗಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಎಲ್ಲ 152 ಕಾಲೇಜುಗಳಿಗೆ ಸೂಚನೆ ನೀಡಿದ್ದಾರೆ.

    ‘ನಾವು ಭದ್ರಾವತಿಯ ಕಬ್ಬಿಣದಂತೆ, ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ..’; ಶಿವಮೊಗ್ಗದಲ್ಲಿ ಸಂಗಮೇಶ್ವರ್ ಆಕ್ರೋಶ

    ‘ಸೋಫಿಯಾ’ ಥರನೇ ಇದ್ದಾಳೆ, 47 ಭಾಷೆ ಮಾತಾಡ್ತಾಳೆ; ಇವಳ ಸೃಷ್ಟಿಕರ್ತ ಇವರೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts