More

    ಈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಪ್ರಭಾಸ್ ನಟನೆಯ ‘ಸಲಾರ್’ ಟ್ರೇಲರ್​​!​​

    ಬೆಂಗಳೂರು: ಟಾಲಿವುಡ್​​ ಸ್ಟಾರ್​ ನಟ, ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಲಾರ್ ಚಿತ್ರದ ಟೀಸರ್​​ ಇಂದು ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟೀಸರ್​ ಬೆನ್ನಲ್ಲೇ ಟ್ರೇಲರ್ ಯಾವಾಗ? ಎಂಬ ಅಭಿಮಾನಿಗಳ ಕಾತುರದ ಪ್ರಶ್ನೆಗೆ ಇದೀಗ ಸುಳಿವು ಲಭಿಸಿದೆ.

    ಇದನ್ನೂ ಓದಿ: 18ನೇ ಬಾರಿಗೆ ಮದುವೆಯಾಗಲು ಸಿದ್ಧನಾದ ಖ್ಯಾತ ನಟ; ಜೀವನದ ದೊಡ್ಡ ರಹಸ್ಯ ಬಿಚ್ಚಿಟ್ಟ ಸ್ಟಾರ್​ ಹೀರೋ

    ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದು, ಟೀಸರ್​ ನೋಡಿದ ಪ್ರೇಕ್ಷಕರು ಚಿತ್ರತಂಡಕ್ಕೆ ಅಭಿನಂದನೆ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯದ ವರದಿಯ ಅನುಸಾರ, ಚಿತ್ರದ ಟೀಸರ್ ಈಗಾಗಲೇ 42 ಮಿಲಿಯನ್ ವೀಕ್ಷಣೆ ಮತ್ತು 1.3 ಮಿಲಿಯನ್ ಲೈಕ್‌ಗಳನ್ನು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಪಡೆದುಕೊಂಡಿದೆ.

    ಟೀಸರ್ ನೋಡಿ ಸಂತಸ ಪಟ್ಟ ಸಿನಿಪ್ರೇಕ್ಷಕರು ಟ್ರೇಲರ್ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯೊಂದನ್ನು ಚಿತ್ರತಂಡದ ಮುಂದಿಟ್ಟಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ತಯಾರಕರು ಸಿನಿಮಾದ ಟ್ರೇಲರ್ ಅನ್ನು ಇದೇ ಆಗಸ್ಟ್ 2023ರ ಕೊನೆ ವಾರದಲ್ಲಿ ಬಿಡುಗಡೆಗೊಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

    ಇದನ್ನೂ ಓದಿ: ಕೊಡಗು ಜಿಲ್ಲಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆ: ಶಾಲಾ ಕಾಲೇಜುಗಳಿಗೆ ರಜೆ

    ಸಲಾರ್ ಚಿತ್ರದಲ್ಲಿ ಡಾರ್ಲಿಂಗ್​​ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಸರಣ್ ಶಕ್ತಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಸಲಾರ್​​ ಸೆಪ್ಟೆಂಬರ್ 28, 2023 ರಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts