More

    30ರಿಂದ ಡಿ.5ರವರೆಗೆ ಸಕಾಲ ಸಪ್ತಾಹ : 98 ಇಲಾಖೆಗಳ 1,025 ಸೇವೆ

    ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಎಲ್ಲ ಸಕಾಲ ಸೇವೆ ನೀಡುವ ಕಚೇರಿಗಳಲ್ಲಿ ನ.30ರಿಂದ ಡಿ.5ರವರೆಗೆ ಸಕಾಲ ಸಪ್ತಾಹ ಆಚರಣೆ ಮಾಡುವಂತೆ ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತ ಜೆ. ಮಂಜುನಾಥ್ ಆದೇಶಿಸಿದ್ದಾರೆ.

    ಸಕಾಲ ಸೇವೆ ಅಡಿಯಲ್ಲಿ ಕಂದಾಯ ಇಲಾಖೆ, ಕಾಮಗಾರಿ ಇಲಾಖೆ, ಆರೋಗ್ಯ ಇಲಾಖೆ, ಯೋಜನೆ ಇಲಾಖೆ ಹಾಗೂ ಆರಣ್ಯ ಇಲಾಖೆಗಳಲ್ಲಿ ನ.30ರಿಂದ ಡಿ.5ರವರೆಗೆ ಖಾತಾ ವರ್ಗಾವಣೆ, ನೋಂದಣಿ, ವಿಭಜನೆ, ಒಗ್ಗೂಡುವಿಕೆ, ಕಟ್ಟಡ ಪರವಾನಗಿ, ವಾಣಿಜ್ಯ ಪರವಾನಗಿ, ಜನನ, ಮರಣ ಪತ್ರ, ಗುತ್ತಿಗೆದಾರರ ನೋಂದಣಿ, ನವೀಕರಣ, ಮರಗಳ ವ್ಯವಸ್ಥಿತ ನಿರ್ವಹಣೆ ಹಾಗೂ ರಸ್ತೆ ಅಗೆಯುವ ಅನುಮತಿಯಂತಹ ಸೇವೆಗಳನ್ನು ಶೀಘ್ರ ಇತ್ಯರ್ಥ ಮಾಡುವಂತೆ ಸೂಚಿಸಲಾಗಿದೆ.

    ಸಕಾಲದಡಿ ಹೊಸದಾಗಿ ಸ್ವೀಕರಿಸುವ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ಸಾರ್ವಜನಿಕರಲ್ಲಿ ಸಕಾಲ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಸಪ್ತಾಹದ ಅಂತ್ಯದಲ್ಲಿ ವಿಲೇವಾರಿಯಾದ ಅರ್ಜಿಗಳ ಕುರಿತು ಸಕಾಲ ಮಿಷನ್‌ಗೆ ವರದಿ ನೀಡಬೇಕು. ಸಾರ್ವಜನಿಕರು 98 ಇಲಾಖೆಗಳ 1,025 ಸೇವೆಗಳನ್ನು ಸಕಾಲದಡಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 080-44554455ಗೆ ಸಂಪರ್ಕಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts