More

    ಸಕಾಲ ಸೇವೆ ನಿರಂತರವಿರಲಿ ; ಸಕಾಲ ಮಿಷನ್ ಆಡಳಿತಾಧಿಕಾರಿ ಸೀಮಾನಾಯ್ಕ ಸಲಹೆ

    ತುಮಕೂರು : ಸಕಾಲ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುವ ಜತೆಗೆ ಸಕಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಜನರನ್ನು ಪ್ರೇರೇಪಿಸಬೇಕು ಎಂದು ಸಕಾಲ ಮಿಷನ್ ಆಡಳಿತಾಧಿಕಾರಿ ಸೀಮಾನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಕಾಲ ಸಪ್ತಾಹದ ಹಿನ್ನೆಲೆಯಲ್ಲಿ ಬುಧವಾರ ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ತಹಸೀಲ್ದಾರ್ ಕಚೇರಿಗೆ ಬೇಟಿ ನೀಡಿ ಸಕಾಲ ಸೇವೆಗಳ ಕುರಿತು ಪರಿಶೀಲಿಸಿ ಸೂಚನೆ ನೀಡಿದರು. ನ.30ರಿಂದ ಡಿ.5ರವರೆಗೆ ಸಕಾಲ ಸಪ್ತಾಹ ಹಮ್ಮಿಕೊಂಡಿದ್ದು, ಸಪ್ತಾಹದಲ್ಲಿ ಸಕಾಲ ಸೇವೆಗಳ ಸದ್ಬಳಕೆ ಕುರಿತಂತೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ. ಕೇವಲ ಸಪ್ತಾಹದಲ್ಲಿ ಸಕಾಲ ಸೇವೆಗಳನ್ನು ನೀಡಲು ಆದ್ಯತೆ ನೀಡಿದರೆ ಸಾಲದು. ಇದು ನಿರಂತರವಾಗಿರಬೇಕು ಎಂದರು.

    ಸಕಾಲದ ಬಗ್ಗೆ ನಾಡಕಚೇರಿಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಜಾಥಾ ನಡೆಸಬೇಕು. ನಾಡ ಕಚೇರಿಗಳ ಮುಂದೆ ಹೆಲ್ಪ್‌ಡೆಸ್ಕ್‌ಗಳನ್ನು ಸ್ಥಾಪಿಸಬೇಕು. ಸಾರ್ವಜನಿಕರಿಂದ ಫೀಡ್‌ಬ್ಯಾಕ್ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ತುಮಕೂರು ಮಹಾನಗರ ಪಾಲಿಕೆ, ಗುಬ್ಬಿ, ತಿಪಟೂರು ಸೇರಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲ ಸಪ್ತಾಹದಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ಶುಭಾ ಸಭೆಗೆ ತಿಳಿಸಿದರು.

    ತುಮಕೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಸಾರಿಗೆ ಇಲಾಖೆಗಳ ಸಕಾಲ ಪ್ರಗತಿ ಪರಿಶೀಲನೆ ನಡೆಸಲಾಯಿತು. ಪಾಲಿಕೆ ಆಯುಕ್ತೆ ರೇಣುಕಾ, ತಹಸೀಲ್ದಾರ್ ಮೋಹನ್, ಸಕಾಲ ಜಿಲ್ಲಾ ಕನ್ಸೆಲ್ಟೆಂಟ್ ರಿಜ್ವಿ ಸೇರಿ ನಗರಾಭಿವೃದ್ಧಿ, ಆಹಾರ ಇಲಾಖೆ, ಕಂದಾಯ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಜಿಲ್ಲೆಯು ಸಕಾಲ ಸೇವೆಗಳನ್ನು ಸಾರ್ವಜನಿಕರಿಗೆ ನೀಡುವಲ್ಲಿ ಉತ್ತಮ ಸ್ಥಾನ ಗಳಿಸಿದೆ. ನಿಗದಿತ ಸಮಯದಲ್ಲಿ ಸಕಾಲದಡಿ ಅರ್ಜಿಗಳನ್ನು ವಿಲೇವಾರಿ ವಾಡುತ್ತಿರುವುದು ಅಂಕಿಅಂಶಗಳಿಂದ ತಿಳಿದಿದೆ. ಜಿಲ್ಲೆಯ ಕೆಲ ಇಲಾಖೆಗಳಲ್ಲಿ ತಾಂತ್ರಿಕ ತೊಂದರೆಯಿಂದ ಕೆಲವೊಂದು ಸೇವೆ ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದಿರುವುದರ ಬಗ್ಗೆ ವಾಹಿತಿ ಪಡೆದಿದ್ದೇನೆ. ತಾಂತ್ರಿಕ ತೊಂದರೆ ಪರಿಹರಿಸಲಾಗುವುದು.
    ಸೀಮಾನಾಯ್ಕ ಸಕಾಲ ಮಿಷನ್ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts