More

    ಪ್ರತಿಯೊಬ್ಬರೂ ಸೇವಾಲಾಲ್ ಆದರ್ಶ ಅಳವಡಿಸಿಕೊಳ್ಳಿ

    ಬಸವಕಲ್ಯಾಣ: ಭವ್ಯ ಇತಿಹಾಸದ ಬಂಜಾರಾ ಸಮಾಜದ ಸಂಸ್ಕೃತಿ, ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎಂದು ಮಹಾರಾಷ್ಟ್ರ ಪೌರಾದೇವಿ ಧರ್ಮ ಪೀಠೇಶ್ವರ ಜಗದ್ಗುರು, ಧರ್ಮಗುರು ಶ್ರೀ ಬಾಬುಸಿಂಗ್ ಮಹಾರಾಜ ನುಡಿದರು.

    ಸಂತ ಶ್ರೀ ಸೇವಾಲಾಲ್ ಮಹಾರಾಜ ಜಯಂತ್ಯುತ್ಸವ ನಿಮಿತ್ತ ತಾಲೂಕು ಬಂಜಾರಾ ಸಮಾಜದಿಂದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಂತ ಶ್ರೀ ಸೇವಾಲಾಲ್ ಮಹಾರಾಜ ತೋರಿಸಿದ ಮಾರ್ಗದಲ್ಲಿ ಎಲ್ಲರೂ ನಡೆಯುವುದರ ಜತೆಗೆ ಚರಿತ್ರೆ ಓದಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ದೇಶಕ್ಕೆ ಋಷಿ-ಮುನಿ, ಸಂತ-ಮಹಾಂತರ ಕೊಡುಗೆ ಅಪಾರ. ಜನಕಲ್ಯಾಣ, ಶ್ರೇಯೋಭಿವೃದ್ಧಿಯೇ ಸಂತ-ಮಹಾತ್ಮರ ಆಶಯವಾಗಿದೆ. ಸಂತ ಶ್ರೀ ಸೇವಾಲಾಲ್ ಮಹಾರಾಜ ಸಮಾಜಕ್ಕೆ ಬೆಳಕು ತೋರಿದ್ದಾರೆ. ಜನರಲ್ಲಿ ಜ್ಞಾನ, ಧ್ಯಾನ, ಶಿಕಣ, ಭಾವ ಭಕ್ತಿ ಜಾಗೃತಗೊಳಿಸಿದ ಮಹಾಪುರುಷರು ಎಂದು ಬಣ್ಣಿಸಿದರು.

    ಬಂಜಾರಾ ತಾಂಡಾದ ಶ್ರೀ ಲೋಕೇಶ ಮಹಾರಾಜ ಸಾನ್ನಿಧ್ಯ, ಶ್ರೀ ದುರ್ಯೋಧನ ಮಹಾರಾಜ, ದೇವಿನಗರ ತಾಂಡಾದ ಶ್ರೀ ಅನೀಲ ಮಹಾರಾಜ, ಮೈಸಲಗಾ ತಾಂಡಾದ ಶ್ರೀ ಶಂಕರ ಆಯಿ, ಹತ್ಯಾಳ ತಾಂಡಾದ ಶ್ರೀ ವಿಲಾಸ ಮಹಾರಾಜ ಸಮ್ಮುಖ ವಹಿಸಿದ್ದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಸಂತ ಶ್ರೀ ಸೇವಾಲಾಲ್ ಮಹಾರಾಜ ಜಯಂತಿ ಸರ್ಕಾರದಿಂದ ಆಚರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೧೮ರಲ್ಲಿ ಘೋಷಿಸಿ ಸೇವಾಲಾಲರ ಜನ್ಮಸ್ಥಳ ಸೊರಗೊಂಡನಕೊಪ್ಪ ಅಭಿವೃದ್ಧಿಪಡಿಸಿದ್ದಾರೆ ಎಂದರು.

    ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಹ್ಲಾದ ರಾಠೋಡ್, ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಬಾಬು ಹೊನ್ನಾನಾಯಕ, ವಾಣಿಜ್ಯ ತೆರಿಗೆ ಆಯುಕ್ತ ಶಾಂತಕುಮಾರ ರಾಠೋಡ್, ಪ್ರಮುಖರಾದ ಧನಸಿಂಗ್ ರಾಠೋಡ್, ಧನರಾಜ ಚವ್ಹಾಣ್, ದಿಲೀಪ ಶಿಂಧೆ, ಯುವರಾಜ ಭೆಂಡೆ, ರಾಮ ಜಾಧವ್, ಶೀತಲ್ ಶಿಂಧೆ, ಪಿಂಟು ಕಾಂಬಳೆ, ಡಾ.ಸಂತೋಷ ಹೊನ್ನಾನಾಯಕ, ದಿನೇಶ ರಾಠೋಡ್, ಸುನೀಲ ಜಾಧವ್, ಅಮಿತ್ ಚವ್ಹಾಣ್, ಅಭಿಷೇಕ ರಾಠೋಡ್ ಇತರರಿದ್ದರು. ಕಿಶನ್ ಚವ್ಹಾಣ್, ಬಳಿರಾಮ ಜಾಧವ್ ನಿರೂಪಣೆ ಮಾಡಿದರು.
    ಅಂಬೇಡ್ಕರ್ ವೃತ್ತದಿಂದ ಮುಖ್ಯ ರಸ್ತೆ ಮಾರ್ಗವಾಗಿ ಬಸವ ವೃತ್ತದ ಮೂಲಕ ಬಿಕೆಡಿಬಿ ಕಲ್ಯಾಣ ಮಂಟಪವರೆಗೆ ಬಂಜಾರಾ ಸಮುದಾಯದ ಸಾಂಸ್ಕೃತಿಕ ವೈಭವದೊಂದಿಗೆ ಮೆರವಣಿಗೆ ಜರುಗಿತು. ಪಾರಂಪರಿಕ ನೃತ್ಯ ಹಾಗೂ ಸೌಂಡ್ ಸಿಸ್ಟಮ್ ಎದುರು ಯುವಕರ ನೃತ್ಯ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts