More

    ಜಿಲ್ಲೆಯಲ್ಲಿ ಮೇ 5ರಿಂದ ಪ್ರತಿಬಂಧಕಾಜ್ಞೆ ಜಾರಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಧಾರವಾಡ ಲೋಕಸಭಾ ಮತೇತ್ರದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ ಮತದಾನವು ಸುಗಮ ಮತ್ತು ಮುಕ್ತವಾಗಿ ನಡೆಸಲು ಮೇ 5ರ ಸಂಜೆ 6 ಗಂಟೆಯಿಂದ ಮೇ 8ರ ಸಂಜೆ 6ರವರೆಗೆ ಸಿಆರ್​ಪಿಸಿ 1973ರ ಕಲಂ 144 ಮತ್ತು ಕರ್ನಾಟಕ ಪೊಲೀಸ್​ ಕಾಯ್ದೆ 1963ರ ಕಲಂ 35ರಡಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.
    ನವಲಗುಂದ, ಕುಂದಗೋಳ, ಧಾರವಾಡ (71), ಹು&ಧಾ ಪೂರ್ವ, ಹು&ಧಾ ಸೆಂಟ್ರಲ್​, ಹು&ಧಾ ಪಶ್ಚಿಮ, ಕಲಟಗಿ ವಿಧಾನಸಭಾ ಮತೇತ್ರಗಳಲ್ಲಿ ಆದೇಶ ಜಾರಿಯಲ್ಲಿರಲಿದೆ. ಮತದಾನ ದಿನದಂದು ಅಹಿತಕರ ಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಮತ್ತು ಮತದಾನದ ಪ್ರಾವಿತ್ರ್ಯತೆ ಕಾಪಾಡಲು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್​ ಇಲಾಖೆ ಹಾಗೂ ಎಲ್ಲ ಸಹಾಯಕ ಚುನಾವಣಾಧಿಕಾರಿ, ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
    ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು. ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿ, ಪೊಲೀಸ್​ ಅಧಿಕಾರಿಗಳಿಗೆ, ಚುನಾವಣಾ ಕಾರ್ಯನಿರತ ಸಿಬ್ಬಂದಿ, ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts