More

    ಮೌಢ್ಯತೆ ನಿರ್ಮೂಲನೆಗೆ ಶ್ರಮಿಸಿದ ಸೇವಾಲಾಲರು

    ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
    ಸಮಾನತೆಯ ಬದುಕಿಗೆ ಮಹತ್ವ ಕೊಟ್ಟು, ಬಂಜಾರ ಸಮುದಾಯದ ಉನ್ನತಿಗಾಗಿ ಹೋರಾಡಿದ ಮಹಾನ್ ಸಂತ ಸೇವಾಲಾಲರು ಎಂದು ತಹಸೀಲ್ದಾರ್ ವಿಭಾವಿದ್ಯಾ ರಾಠೋಡ್ ಹೇಳಿದರು.
    ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿದರು. ಸಮುದಾಯವನ್ನು ಒಗ್ಗೂಡಿಸಲು ಸ್ವಾರ್ಥರಹಿತ ಹೋರಾಟದ ಮೂಲಕ ಜೀವನವನ್ನೇ ಜನಹಿತಕ್ಕಾಗಿ ಮುಡಿ ಪಾಗಿಟ್ಟ ಸೇವಾಲಾಲರು, ಬಂಜಾರ ಸಮಾಜದ ಪವಾಡ ಪುರುಷ. ಸಮಾಜದಲ್ಲಿನ ಮೌಢ್ಯತೆ ನಿರ್ಮೂಲನೆಗೆ ಶ್ರಮಿಸಿದ ಸಂತ ಎಂದು ಬಣ್ಣಿಸಿದರು.
    ಮುಖಂಡ ಶಿವಶಂಕರ್ ಮಾತನಾಡಿ, ಸೇವಾಲಾಲರು ಕಾಡಿನಲ್ಲಿ ಹಸು ಮೇಯಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಕಲ್ಲುಬಂಡೆಗಳನ್ನು ನಗಾರಿಯನ್ನಾಗಿಸಿಕೊಂಡು ತಾಳೆಗರಿಯನ್ನು ತಾಳವಾಗಿಸಿ ಹಾಡು ಕಟ್ಟುತ್ತಿದ್ದರು. ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದರು. ಮನುಷ್ಯನಿಗೆ ಮಾತ್ರವಲ್ಲ, ಜೀವಜಂತುಗಳಿಗೆ ಒಳ್ಳೆಯದಾಗಲಿ ಎಂಬ ಸಂದೇಶ ಸಾರಿದ್ದರು ಎಂದರು.
    ಬಂಜಾರ ಸಮುದಾಯಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಹರಪ್ಪ ನಾಗರಿಕತೆ ಹೋಲುವ ನಾಗರಿಕತೆ ಬಂಜಾರ ಸಮುದಾಯದ್ದು. ಸೇವಾಲಾಲರು ಭಜನೆಯ ಮೂಲಕ ಸಮಾಜದಲ್ಲಿದ್ದ ತೊಡಕು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಭೇಟಿ ನೀಡಿದ ಪ್ರದೇಶಗಳು ಇಂದಿಗೂ ಪ್ರಸಿದ್ಧಿ ಪಡೆದಿವೆ. ಪವಾಡ ಪುರುಷರಾಗಿ, ಮಾರ್ಗದರ್ಶಕರಾಗಿ, ಚಿಂತಕರಾಗಿ, ಗುರುವಾಗಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
    ಗ್ರಾಮ ಪಂಚಾಯತಿ ಸದಸ್ಯ ಸಿದ್ದೇನಾಯ್ಕ ಮಾತನಾಡಿ, ಬಂಜಾರ ಸಮುದಾಯ ಇಂದಿಗೂ ಆರ್ಥಿಕವಾಗಿ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ. ಸಮಾಜ ಮುಂದೆ ಬರಬೇಕಾದರೆ ಎಲ್ಲ ರಂಗಗಳಲ್ಲಿಯೂ ಪ್ರಾತಿನಿಧ್ಯ ಸಿಗುವಂತಾಗಬೇಕು ಎಂದರು.
    ತಾಲೂಕಿನ ಗುಂಡಮಗೆರೆ ಕ್ರಾಸ್ ಬಳಿ ಸಂತ ಸೇವಾಲಾಲ್ ಜಯತಿಯನ್ನು ಅದ್ದೂರಿಯಾಗಿ ಆಚರಿಸುವ ಜತೆಗೆ ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ, ಶಾಸಕ ಪ್ರಕಾಶ್ ರಾಠೋಡ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts