More

    ಸಮಾಜ ಸುಧಾರಣೆಗೆ ಶ್ರಮಿಸಿದ ಸಂತ ಸೇವಾಲಾಲ್

    ಕುಡಾ ಅಧ್ಯಕ್ಷ ಮಹಾಂತೇಶ ಪಾಟೀಲ್ ಅಭಿಮತ | ಜಿಲ್ಲಾಡಳಿತದಿಂದ ಜಯಂತಿ ಆಚರಣೆ

    ಕೊಪ್ಪಳ: ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಸಂತರಲ್ಲಿ ಸೇವಾಲಾಲ್ ಒಬ್ಬರು ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಹೇಳಿದರು.

    ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ನಮ್ಮದು ಸಾಧು, ಸಂತರು, ಶರಣರ ನಾಡು. ಅವರೆಲ್ಲ ಕೇವಲ ಆಯಾ ಸಮುದಾಯಕ್ಕೆ ಸೀಮಿತರಲ್ಲ. ಮನುಕುಲದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ನಮ್ಮ ಸಾಂಸ್ಕೃತಿಕ ಆಸ್ತಿ. ಅಂಥವರಲ್ಲಿ ಸಂತ ಸೇವಾಲಾಲ್ ಒಬ್ಬರೆಂಬುದು ಹೆಮ್ಮೆಯ ವಿಷಯ. ಇವರ ಬಗ್ಗೆ ನಾವೆಲ್ಲ ಅರಿತುಕೊಳ್ಳಲೆಂದು ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ. ಮಹನೀಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದರು.

    ತಾಂಡಾ ಅಭಿವೃದ್ಧಿ ನಿಗಮದ ನಾಮ ನಿರ್ದೇಶಿತ ಸದಸ್ಯ ಭರತ್ ನಾಯ್ಕ ಮಾತನಾಡಿ, ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲೂಕಿನ ಸುರಗುಂಡಾದಲ್ಲಿ ಫೆ.15, 1739 ರಲ್ಲಿ ಭೀಮಾ ನಾಯ್ಕ ಮತ್ತು ಧರ್ಮಿಣಿ ದಂಪತಿಗೆ ಸೇವಾಲಾಲರು ಜನಿಸಿದರು. ನಂತರ ಸಮಾಜ ಸುಧಾರಣೆ, ಸಂಘಟನೆಗೆ ಶ್ರಮಿಸಿದರು. ಬಂಜಾರ ಭಾಷೆಯು ಭಾರತೀಯ ಭಾಷೆಗಳಲ್ಲಿ ವಿಶಿಷ್ಠ ಸ್ಥಾನ ಹೊಂದಿದೆ ಎಂದರು.

    ಸಮುದಾಯದ ಧರ್ಮಗುರುಗಳಾದ ಗೋಸ್ವಾಮಿಜಿ, ಪ್ರಕಾಶ ಮಹರಾಜ್, ರಾಜೇಂದ್ರ ಪ್ರಸಾದ ಹಾಗೂ ಮುರಾಹರಿ ಸ್ವಾಮಿಜಿ ರವರು ಸಾನ್ನಿಧ್ಯ ವಹಿಸಿದ್ದರು. ತಹಸಿಲ್ದಾರ್ ಜೆ.ಬಿ.ಮಜ್ಗಿ, ಗಣ್ಯರಾದ ಸರೋಜಾ ಬಾಕಳೆ, ಕೃಷ್ಣ ದಲಬಂಜನ್, ಹನುಮಂತಪ್ಪ ಇಂದರಗಿ, ಉದಯ್ ಸಿಂಗ್, ಉದಯ್ ಕಲಾಲ್, ಯಂಕಣ್ಣ ಯಾದವ್, ರಾಜು ಬಾಕಳೆ, ಸಮುದಾಯದ ಮುಖಂಡರಾದ ಲಕ್ಷ್ಮಣ ನಾಯ್ಕ, ಪಂಪಣ್ಣ ಪೂಜಾರ, ಚಂದ್ರಕಾಂತ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts