More

    ಸಂವಿಧಾನ ಪೀಠಿಕೆ ಓದಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು

    ಕೊಪ್ಪಳ: ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ಭಾನುವಾರ ಸಂವಿಧಾನ ಪೀಠಿಕೆ ಓದುವ ಮೂಲಕ 41 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಇತರರಿಗೆ ಮಾದರಿಯಾದರು.

    ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರತಿ ವರ್ಷ ಸಾಮೂಹಿಕ ವಿವಾಹ ನೆರವೇರಿಸುತ್ತಿದೆ. ಈ ವರ್ಷ ಮಂತ್ರ ಘೋಷವಿಲ್ಲದೆ ಸಂವಿಧಾನ ಪೀಠಿಕೆ ಓದಿಸುವ ಮೂಲಕ ವಿಶೇಷವಾಗಿ ಮದುವೆ ನೆರವೇರಿಸಲಾಯಿತು. ಹಿರಿಯ ವಕೀಲ ಡಿ.ಎಂ.ಪೂಜಾರ್ ಸಂವಿಧಾನ ಪೀಠಿಕೆ ಬೋಧಿಸಿದರು.

    ಸಿಪಿಐ ವಿಶ್ವನಾಥ ಹಿರೇಗೌಡರ, ಸಾಮೂಹಿಕ ಮದುವೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದ ಗುಳದಳ್ಳಿಯ ಹಿರಿಯರು ಮತ್ತು ಯುವಕರ ಕಾರ್ಯವನ್ನು ಕೊಂಡಾಡಿದರು.

    ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಮಾತನಾಡಿ, ಕಳೆದ 25 ವರ್ಷಗಳಿಂದ ಸಾಮೂಹಿಕ ಮದುವೆ ಮಾಡಲಾಗುತ್ತಿದೆ. ಇದರಿಂದ ಬಡಜನರ ಜೀವನಕ್ಕೆ ದಾರಿದೀಪವಾಗಿದೆ ಎಂದರು. ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಉದ್ಯಮಿ ವೆಂಕಟೇಶ್ ಬಾರಕೇರ ಮಾತನಾಡಿದರು. ಹೆಬ್ಬಾಳದ ಶಿವಾಚಾರ್ಯ ಸ್ವಾಮೀಜಿ ಹಾಗೂ ಹಂಪಿಯ ಮಾತಂಗ ಪರ್ವತದ ಶ್ರೀ ಪೂರ್ಣನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲಾತಂಡದ ಸುಂಕಪ್ಪ, ಫಕೀರಪ್ಪ ಮಾಸ್ತರ, ಶರಣಪ್ಪ ಓಜನಹಳ್ಳಿ ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು.

    ಮುಖಂಡರಾದ ಗವಿಸಿದ್ದಪ್ಪ ಕರಡಿ, ಮಂಜುನಾಥ ಹಂದ್ರಾಳ, ಶಂಭುಲಿಂಗನಗೌಡ ಹಲಗೇರಿ, ಈರಪ್ಪ ಕುಡಗುಂಟಿ, ನಾಗರಾಜ್ ತಲ್ಲೂರ್, ಗಿರೀಶ್ ಹಿರೇಮಠ, ಯಮನಪ್ಪ ಕುಕನೂರು, ಗುಡದಪ್ಪ ದೊಡ್ಡಮನಿ, ಸಂಜೀವಪ್ಪ ಮೇಟಿ, ರಮೇಶ ಹೊಳೆಯಾಚೆ, ಮಲ್ಲಿಕಾರ್ಜುನ ಪೂಜಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts