More

    ೨೪ಗಂಟೆಯಲ್ಲಿ ೩೫.೭೯ ಮಿ.ಮೀ. ಮಳೆ

    ಮಡಿಕೇರಿ: ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ಮಳೆ ೩೫.೭೯ ಮಿ.ಮೀ. ಮಳೆಯಾಗಿದೆ.


    ಕಳೆದ ವರ್ಷ ಇದೇ ದಿನ ೨.೬೨ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ಮಳೆ ೨೮೩.೮೬ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೩೮.೬೨ ಮಿ.ಮೀ ಮಳೆಯಾಗಿತ್ತು.


    ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೭.೯೮ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೫೨.೧೦ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೮೬.೭೯ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೪.೩೦ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧೭.೬೦ ಮಿ.ಮೀ. ಮಳೆಯಾಗಿದೆ.


    ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೯.೪೦, ನಾಪೋಕ್ಲು ೩೧.೨೦, ಸಂಪಾಜೆ ೨೧.೫೦, ಭಾಗಮಂಡಲ ೯.೮೦, ವಿರಾಜಪೇಟೆ ಕಸಬಾ ೫೪.೨೦, ಅಮ್ಮತ್ತಿ ೫೦, ಹುದಿಕೇರಿ ೬೬, ಶ್ರೀಮಂಗಲ ೭೮, ಪೊನ್ನಂಪೇಟೆ ೮೩, ಬಾಳೆಲೆ ೧೨೦.೧೫, ಸೋಮವಾರಪೇಟೆ ಕಸಬಾ ೧೧.೬೦, ಶಾಂತಳ್ಳಿ ೪.೨೦, ಕೊಡ್ಲಿಪೇಟೆ ೧.೪೦, ಕುಶಾಲನಗರ ೨೫.೪೦, ಸುಂಟಿಕೊಪ್ಪ ೧೦.೨೦ ಮಿ.ಮೀ.ಮಳೆಯಾಗಿದೆ.


    ಹಾರಂಗಿ ಜಲಾಶಯದ ನೀರಿನ ಗರಿಷ್ಠ ಮಟ್ಟ ೨,೮೫೯ ಅಡಿಗಳಿದ್ದು, ಗುರುವಾರ ೨೮೨೩.೫೮ ಅಡಿ ನೀರು ಸಂಗ್ರಹವಾಗಿದೆ. ನೀರಿನ ಒಳಹರಿವು ೩೮೭ ಕ್ಯೂಸೆಕ್ ಇದ್ದರೆ, ಹೊರ ಹರಿವು ನದಿಗೆ ೨೦೦ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts