More

    26ಕ್ಕೆ ಸೈನಾ ಬಯೋಪಿಕ್; ಟ್ರೋಲ್ ಆಯ್ತು ಚಿತ್ರದ ಫಸ್ಟ್ ಲುಕ್

    ‘ನನ್ನ ಮುಂದೆ ಯಾರೇ ಇರಲಿ.. ನನ್ನದು ಹೊಡೆಯುವುದೊಂದೆ ಕೆಲಸ..’- ಹೀಗೊಂದು ಡೈಲಾಗ್ ಮೂಲಕವೇ ‘ಸೈನಾ’ ಚಿತ್ರದ ಟೀಸರ್ ಮುಗಿಯುತ್ತದೆ. ಮಂಗಳವಾರ ಬಿಡುಗಡೆ ಆಗಿರುವ 30 ಸೆಕೆಂಡ್​ನ ಕಿರು ಟೀಸರ್ ಮತ್ತು ಫಸ್ಟ್ ಲುಕ್​ನಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಿಸಿದೆ. ಅದರಂತೆ ಇದೇ ತಿಂಗಳ 26ಕ್ಕೆ ‘ಸೈನಾ’ ಚಿತ್ರ ರಿಲೀಸ್ ಆಗುವುದು ಅಧಿಕೃತವಾಗಿದೆ. ಟೀಸರ್ ಮತ್ತು ಲುಕ್ ಜತೆಗೆ ಆಗಮಿಸಿದ ‘ಸೈನಾ’ ಸಿನಿಮಾ ಟ್ರೋಲಿಗರಿಗೂ ಆಹಾರವಾಗಿದೆ!

    ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಜೀವನ ಆಧರಿತ ಈ ಸಿನಿಮಾದಲ್ಲಿ ‘ಸೈನಾ’ ಪಾತ್ರವನ್ನು ನಟಿ ಪರಿಣೀತಿ ಚೋಪ್ರಾ ಮಾಡಿದ್ದಾರೆ. ಇದೀಗ ಬಿಡುಗಡೆಯಾದ ಮೊದಲ ಲುಕ್​ನಲ್ಲಿ ಪರಿಣೀತಿ, ಬ್ಯಾಡ್ಮಿಂಟನ್ ಬದಲು ಟೆನ್ನಿಸ್ ಆಡುತ್ತಿದ್ದಾರಾ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ‘ಫಸ್ಟ್ ಲುಕ್​ನಲ್ಲಿ ಸರ್ವಿಸ್ ಮಾಡುವುದನ್ನು ನೋಡಿದ್ರೆ, ಇದು ಸೈನಾ ಬಯೋಪಿಕ್ಕಾ ಅಥವಾ ಸಾನಿಯಾ ಮಿರ್ಜಾ ಜೀವನ ಕಥೆನಾ? ಎಂದು ಚಿತ್ರತಂಡದ ಕಾಲೆಳೆದಿದ್ದಾರೆ.

    ಈ ಹಿಂದೆ ‘ತಾರೇ ಜಮೀನ್ ಪರ್’ ಮತ್ತು ‘ಸ್ಟಾನ್ಲಿ ಕೀ ಡಬ್ಬಾ’ ಚಿತ್ರ ನಿರ್ದೇಶನ ಮಾಡಿದ್ದ ಅಮೂಲ್ ಗುಪ್ತೆ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಟಿ ಸೀರಿಸ್ ಬ್ಯಾನರ್​ನಲ್ಲಿ ಚಿತ್ರ ಮೂಡಿಬಂದಿದೆ. ಇತ್ತೀಚೆಗಷ್ಟೇ ಪರಿಣೀತಿ ನಟನೆಯ ‘ದಿ ಗರ್ಲ್ ಆನ್ ದಿ ಟ್ರೇನ್’ ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ತೆರೆಕಂಡು ಮೆಚ್ಚುಗೆ ಪಡೆಯುತ್ತಿದೆ. ಈಗ ‘ಸೈನಾ’ ಮೂಲಕ ಆಗಮಿಸಲು ತಯಾರಿ ನಡೆಸಿದ್ದಾರೆ -ಏಜೆನ್ಸೀಸ್

    ಅವಳಿಗೆ ಈಗ ತಾನು ಹೆಂಗಸಂತಲೇ ಅನಿಸುತ್ತಿಲ್ಲವಂತೆ!; ಉಲ್ಟಾ ಹೊಡೆಯಿತು ಸೌಂದರ್ಯಚಿಕಿತ್ಸೆ…

    ಇದಿನ್ನೂ ಟ್ರೇಲರ್​​, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ರಿಲೀಸ್​!? ಈ ಭಾಗದ ಸಚಿವರ ಸಿಡಿ ರಿಲೀಸ್​ ಆಗೋ ಸಾಧ್ಯತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts