More

    ಕರಾವಳಿಯ ಮಹಿಷ; ಯುಗಾದಿ ಹಬ್ಬಕ್ಕೆ ಹೊಸ ಪೋಸ್ಟರ್ ರಿಲೀಸ್

    ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ 40ನೇ ಸಿನಿಮಾ ‘ಕರಾವಳಿ’. ಇದಕ್ಕೆ ‘ಕರಾವಳಿ ಕಂಬಳ’ ಎಂಬ ಅಡಿಬರಹವಿದ್ದು, ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್-ಕಟ್ ಹೇಳುವ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದು ಕರಾವಳಿ ಭಾಗದ ಕಥೆ. ಮಾನವ ಮತ್ತು ಪ್ರಾಣಿ ನಡುವೆ ನಡೆಯುವ ಸಂಘರ್ಷದ ಕಥೆ. ಈಗಾಗಲೇ ಚಿತ್ರದ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದ್ದು ಪ್ರಜ್ವಲ್ ದೇವರಾಜ್ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ಈಗ ಯುಗಾದಿ ಹಬ್ಬದ ಶುಭಸಂದರ್ಭದಲ್ಲಿ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಹಿಂದೆ ಟೀಸರ್‌ನಲ್ಲೂ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗದ ಮಹಿಷಾಸುರನನ್ನು ತೋರಿಸಲಾಗಿತ್ತು. ಈಗ ಮಹಿಷಾಸುರನ ಲುಕ್‌ನಲ್ಲಿ ಯಕ್ಷಗಾನದ ವೇಷ ಧರಿಸಿ ಪ್ರಜ್ವಲ್ ದೇವರಾಜ್ ಮಿಂಚಿದ್ದು, ಪೋಸ್ಟರ್‌ನಲ್ಲಿ ಕಾಣಬಹುದು. ಯಕ್ಷಗಾನ ಭಾಗವತರಾದ ಪಲ್ಲವ ಗಾಣಿಗ ಲುಕ್ ಡಿಸೈನ್ ಮಾಡಿ ಪ್ರಜ್ವಲ್ ದೇವರಾಜ್‌ಗೆ ಬಣ್ಣ ಹಚ್ಚಿದ್ದಾರೆ. ಈ ಮೇಕಪ್‌ಗಾಗಿ ಅರ್ಧ ದಿನ ತೆಗೆದುಕೊಂಡಿದ್ದಾರೆ.

    ಇನ್ನು ಪ್ರಜ್ವಲ್‌ಗೆ ಜೋಡಿಯಾಗಿ ‘ಬೆಂಕಿ’ ಹಾಗೂ ‘ರೈಡರ್’ ಚಿತ್ರಗಳಲ್ಲಿ ನಟಿಸಿರುವ ಸಂಪದಾ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ಚಿತ್ರಕ್ಕಿದೆ. ಪ್ರಜ್ವಲ್, ಸಂಪದಾ ಜತೆ ಮಿತ್ರ, ಶ್ರೀಧರ್, ಜಿ.ಜಿ. ನಿರಂಜನ್ ಮುಖ್ಯ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದ್ದು, ಎರಡನೇ ಹಂತ ಸದ್ಯದಲ್ಲೇ ಶುರುವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts