More

    ರೌಡಿ ಬೇಬಿ ಬಿಲಿಯನ್ ವೀವ್ಸ್​ ಸಂಭ್ರಮಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳ ಆಕ್ರೋಶ..!

    ಚೆನ್ನೈ: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಧನುಷ್​ ಮತ್ತು ಸಾಯಿಪಲ್ಲವಿ ಅಭಿನಯದ ‘ಮಾರಿ 2’ ಚಿತ್ರವು ಬಾಕ್ಸ್​ ಆಫೀಸ್​​ನಲ್ಲಿ ಅಷ್ಟೇನೂ ದೊಡ್ಡ ಯಶಸ್ಸು ಕಾಣದಿದ್ದರೂ, ಚಿತ್ರದ ‘ರೌಡಿ ಬೇಬಿ’ ಹಾಡು ಸೂಪರ್​ ಹಿಟ್​ ಆಗಿರುವುದಲ್ಲದೆ, ಹೊಸ ದಾಖಲೆ ಬರೆದಿದೆ.

    ‘ರೌಡಿ ಬೇಬಿ’ ಹಾಡು ಯೂಟ್ಯೂಬ್​ನಲ್ಲಿ ಒಂದು ಬಿಲಿಯನ್​ಗೂ ಹೆಚ್ಚು ವೀಕ್ಷಣೆಗೆ ಒಳಪಡುವುದರ ಜತೆಗೆ ಅತೀ ಹೆಚ್ಚು ವೀಕ್ಷಣೆಗೊಳಗಾದ ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಾಡನ್ನು ಧನುಷ್​ ಮತ್ತು ಧೀ ಹಾಡಿದ್ದಾರೆ. ಈ ಖುಷಿ ವಿಚಾರವನ್ನು ಚಿತ್ರತಂಡ ಸಂಭ್ರಮಿಸಿದ್ದು, ಅದಕ್ಕಾಗಿ ಧನುಷ್​ ಅವರ ವಿಶೇಷ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದೆ. ವಂಡರ್​ಬಾರ್​ ಫಿಲ್ಮ್ಸ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟರ್​ ಅಪ್​ಲೋಡ್​ ಮಾಡಿದ್ದು, ರೌಡಿ ಬೇಬಿ ಸಂಭ್ರಮದ ಸಿಡಿಪಿ ಎಂದು ಬರೆದುಕೊಂಡಿದೆ.

    ಧನುಷ್​ ಅವರ ಹೊಸ ಸಿಡಿಪಿ ಅವರ ಅಭಿಮಾನಿಗಳಿಗೆ ಖಷಿ ನೀಡಿದರೆ, ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಅಸಮಾಧಾನಗೊಂಡಿದ್ದಾರೆ. ರೌಡಿ ಬೇಬಿ ಯಶಸ್ಸಿನಲ್ಲಿ ಸಾಯಿ ಪಲ್ಲವಿ ಪಾತ್ರವೂ ಪ್ರಮುಖವಾಗಿದೆ. ಅವರ ಅಮೋಘ ಡ್ಯಾನ್ಸ್​ ಎಲ್ಲರ ಮನಗೆದ್ದಿದೆ. ಮುಖ್ಯವಾಗಿ ಹೇಳಿಬೇಕೆಂದರೆ ರೌಡಿ ಬೇಬಿ ಹೆಸರು ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ಸರ್​ ನೇಮ್​ ಸಹ ಆಗಿದೆ. ಆದರೆ, ಪೋಸ್ಟರ್​ನಲ್ಲಿ ಅವರ ಫೋಟೋ ಇಲ್ಲದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಇದು ಅಂತಿಂಥ ಬೇಟೆಯಲ್ಲ! ದ್ವಿಚಕ್ರ ವಾಹನದಲ್ಲಿತ್ತು ಬರೋಬ್ಬರಿ 3 ಕೋಟಿ ಮೌಲದ್ಯ ಚಿನ್ನಾಭರಣ

    ಧನುಷ್​ ಇರುವ ಬಗ್ಗೆ ಆಕ್ಷೇಪವಿಲ್ಲ. ಆದರೆ, ಸಾಯಿ ಪಲ್ಲವಿ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ. ಹಾಡು ಅಷ್ಟೊಂದು ಯಶಸ್ಸು ಸಾಧಿಸುವುದರ ಹಿಂದೆ ಸಾಯಿ ಪಲ್ಲವಿ ಶ್ರಮವು ಇದೆ. ಅವರ ನೃತ್ಯದಿಂದಲೇ ಹಾಡು ಅಷ್ಟೊಂದು ಪ್ರಸಿದ್ಧಿ ಪಡೆದಿದೆ. ಹೀಗಾಗಿ ಪೋಸ್ಟರ್​ನಲ್ಲಿ ಸಾಯಿ ಪಲ್ಲವಿ ಫೋಟೋ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

    2015ರಲ್ಲಿ ತೆರೆಕಂಡ ಮಾರಿ ಚಿತ್ರ ಯಶಸ್ಸು ಗಳಿಸಿದ ಬಳಿ ಅದರ ಮುಂದುವರಿದ ಸರಣಿ ಮಾರಿ 2 ಅನ್ನು ಬಾಲಾಜಿ ಮೋಹನ್​ ನಿರ್ದೇಶಿಸಿದರು. ಚಿತ್ರವನ್ನು ಧನುಷ್​ ತಮ್ಮ ಬ್ಯಾನರ್​ ವಂಡರ್​ಬಾರ್​ ಫಿಲ್ಮ್ಸ್​ ಅಡಿಯಲ್ಲಿ ನಿರ್ಮಾಣ ಮಾಡಿದರು. ಚಿತ್ರದಲ್ಲಿ ತೊವಿನೋ ಥಾಮಸ್​, ಕೃಷ್ಣ ಕುಲಶೇಖರನ್​, ವರಲಕ್ಷ್ಮಿ ಸರತ್​ಕುಮಾರ್​, ವಿದ್ಯಾ ಪ್ರದೀಪ್​ ಸೇರಿದಂತೆ ಮುಂತಾದವರು ಬಹು ದೊಡ್ಡ ತಾರಾ ಬಳಗವಿದೆ. (ಏಜೆನ್ಸೀಸ್​)

    ಒಂದು ಬಿಲಿಯನ್​ ಹಿಟ್ಸ್​ ಪಡೆದು ಹೊಸ ದಾಖಲೆ ಬರೆದ ‘ರೌಡಿ ಬೇಬಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts