More

    ಸಾಹಿತ್ಯದಿಂದ ಭಾವೈಕ್ಯ ಮೂಡಿಸಿದ ಶ್ರೀ ರಾಮದಾಸ

    ರಾಯಚೂರು: ಇಸ್ಲಾಂ ಧರ್ಮದ ಉಪಪಂಗಡ ಪಿಂಜಾರ್ ಸಮುದಾಯಕ್ಕೆ ಸೇರಿದ ಶ್ರೀ ರಾಮದಾಸರು ಭಾವೈಕ್ಯದ ಸಾಕಾರ ಮೂರ್ತಿಯಾಗಿದ್ದರು. ಮೂಲ ಹೆಸರು ಬಡೇಸಾಹೇಬ್ ಆಗಿದ್ದು, ಶ್ರೀರಾಮ ಅಂಕಿತದಿಂದ ಹಲವಾರು ಹರಿದಾಸ ಸಾಹಿತ್ಯ ರಚನೆ ಮಾಡಿದ್ದಾರೆ ಎಂದು ದಾಸ ಸಾಹಿತ್ಯದ ವಿದ್ವಾಂಸೆ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಹೇಳಿದರು.

    ಇದನ್ನೂ ಓದಿ: ಬಾಳಂಭಟ್ಟರ ಸಾಹಿತ್ಯ ಕೊಡುಗೆ ಅನನ್ಯ

    ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ರಾಮದಾಸರ 82ನೇ ಆರಾಧನಾ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ಶ್ರೀ ರಾಮದಾಸರು ರಾಮಾಂಕಿತದಿಂದ ರಚಿಸಿದ ಕೃತಿಗಳಲ್ಲಿ ಜನಪದ ಶೈಲಿಯ ಸಂಕೀರ್ತನೆಗಳು, ತತ್ವಪದಗಳು, ಸಾಮಾಜಿಕ ಮೌಲ್ಯವನ್ನು ಬಿಂಬಿಸುವ ಸಂಕೀರ್ತನೆಗಳಿವೆ. ಸಾಹಿತ್ಯದ ಮೂಲಕ ಸಮಾಜದಲ್ಲಿ ಭಾವೈಕ್ಯ ಮೂಡಿಸಲು ಶ್ರಮಿಸಿದ್ದರು ಎಂದರು.

    ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳೀಧರ ಕುಲಕರ್ಣಿ ಮಾತನಾಡಿ, ರಾಮದಾಸರು ಪಿಂಜಾರ್ ಸಮುದಾಯದಲ್ಲಿ ಜನಿಸಿ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಜೀವನವೇ ವಿಸ್ಮಯದಿಂದ ಕೂಡಿದೆ.

    ಬಡತನದಲ್ಲಿ ಮೂರನೇ ತರಗತಿವರೆಗೆ ಓದಿ, ಸಂಸಾರದಿಂದ ವಿಮಖರಾಗಿ ಅಧ್ಯಾತ್ಮದ ಕಡೆ ವಾಲಿ ರಾಮಧೂತ, ಅವಧೂತರ ಸೇವೆ ಮಾಡಿ ಅಪರೋಕ್ಷ ಜ್ಞಾನ ಪಡೆದಿದ್ದರು. ರಾಮದಾಸರ ಕೃತಿಗಳಲ್ಲಿ ಸಾಮಾಜಿಕ ಕಳಕಳಿ, ಕೆಟ್ಟ ವ್ಯಸನಗಳ ದುಷ್ಪರಿಣಾಮಗಳನ್ನು ಅರ್ಥಪೂರ್ಣವಾಗಿ ತಿಳಿ ಹೇಳಿದ್ದಾರೆ ಎಂದರು.

    ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರು, ಪ್ರಮುಖರಾದ ಕೃಷ್ಣಮೂರ್ತಿ ಹುಣಸಗಿ, ಸತ್ಯನಾರಾಯಣ ಮಸ್ಕಿ, ಸುರೇಶ್ ಕಲ್ಲೂರು, ಕೊಪ್ರೇಶ್ ದೇಸಾಯಿ, ಹನುಮೇಶ್ ರಾವ್ ಸರಾಫ್, ಪ್ರಕಾಶ್ ಅಲಗೂರು, ಕೊಪ್ರೇಶ್ ಸೋದೆಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts