More

    ಬಾಳಂಭಟ್ಟರ ಸಾಹಿತ್ಯ ಕೊಡುಗೆ ಅನನ್ಯ

    ಇಟಗಿ: ಗಂದಿಗವಾಡ ಗ್ರಾಮದ ಜಾನಪದ ಕವಿ ಬಾಳಂಭಟ್ಟರು ಕನ್ನಡಕ್ಕೆ ಬಯಲಾಟ ಸೇರಿ ಹಲವು ಅಮೂಲ್ಯ ಕೃತಿಗಳನ್ನು ನೀಡಿದ್ದು ಅವರನ್ನು ಸ್ಮರಿಸುವ ಮೂಲಕ ತಾಲೂಕಾ ಸಮ್ಮೇಳನ ಕನ್ನಡದ ಕವಿವರ್ಯರಿಗೆ ಗೌರವ ಸಲ್ಲಿಸಿದಂತಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಶಿವಾನಂದ ಮೂಲಿಮನಿ ಹೇಳಿದರು. ಸಮೀಪದ ಗಂದಿಗವಾಡ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಖಾನಾಪುರ ತಾಲೂಕು 9ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನೇಕ ಸಾಹಿತಿಗಳು ತಮ್ಮ ಕನ್ನಡದ ಕಾಯಕದ ಮೂಲಕ ಸಾಹಿತ್ಯ ಜ್ಯೋತಿಯನ್ನು ಹೊತ್ತಿಸಿದ್ದು, ಅಕ್ಷರ ಪರಂಪರೆ ಮುಂದುವರಿಸುವಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರವಹಿಸಿವೆ ಎಂದರು. ಡಾ.ಎಚ್.ಬಿ. ಕೋಲಕಾರ ಆಶಯ ನುಡಿಗಳನ್ನಾಡಿದರು.

    ಸಮಸ್ಯೆಗಳಿಗೆ ಕನ್ನಡಿ ಹಿಡಿದ ಕವಿಗೋಷ್ಠಿ: ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ ಹಿರಿ-ಕಿರಿಯ ಕವಿಗಳು ಪ್ರಸಕ್ತ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯ್ನ ಮಾಡಿದರು. ನಿವೃತ್ತ ಶಿಕ್ಷಕ ಶಂಕರ ಗಣಾಚಾರಿ, ಸಾಹಿತಿ ಶಬಾನಾ ಅಣ್ಣಿಗೇರಿ ಆರ್.ಬಿ.ಹುಣಸಿಕಟ್ಟಿ, ಕಿರಣ ಗಣಾಚಾರಿ, ಭಿಷ್ಟಪ್ಪ ಬನೋಶಿ, ಸದಾಶಿವ ಭಜಂತ್ರಿ, ಗಿರಿಜಾ ಬಿಳಮರಿ, ವಿಜಯ ಪೂಜಾರ, ಶಶಿಕಲಾ ಮಾವಿನಕೊಪ್ಪ, ಉಮಾ ಅಂಗಡಿ, ಜಗದೀಶ್ವರ ಪೂಜಾರ, ಬಸವರಾಜ ಗುಡಗೇರಿ ಕವನ ವಾಚಿಸಿದರು.

    ಸಮಾರೋಪದಲ್ಲಿ ಐದು ನಿರ್ಣಯ ಮಂಡನೆ: ಸಮ್ಮೇಳನದ ಸಮಾರೋಪದಲ್ಲಿ ಕಸಾಪ ತಾಲೂಕಾಧ್ಯಕ್ಷ ಬಸವಪ್ರಭು ಹಿರೇಮಠ 5 ನಿರ್ಣಯ ಮಂಡಿಸಿದರು. ಸ್ಥಗಿತಗೊಂಡ ಕದಂಬೋತ್ಸವ ಮರು ಆರಂಭಿಸಬೇಕು, ಮಹದಾಯಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು, ಸಾಹಿತ್ಯ ಸಮ್ಮೇಳನ ನಡೆಸಲು ಸರ್ಕಾರ ಅನುದಾನ ಬಿಡುಗಡೆಗೊಳಿಸಬೇಕು, ಮರಾಠಿ ಅಂಗನವಾಡಿಗಳಲ್ಲಿ ಕನ್ನಡ ಶಿಶು ಗೀತೆಗಳನ್ನು ಕಲಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
    ಸ್ವಾಗತ ಸಮಿತಿ ಅಧ್ಯಕ್ಷ ದೇಸಾಯಿ ಗಾಳಿ, ಕಾರ್ಯದರ್ಶಿ ವೀರಯ್ಯ ಹಿರೇಮಠ, ಪ್ರಕಾಶ ಹುಂಡೆಕರ, ಸಂಜೀವ ಹಚ್ಚಂಬಲಿ, ಪಿಡಿಒ ಬಾಲರಾಜ ಭಜಂತ್ರಿ ಮಂಜು, ಶೆಟ್ಟನ್ನವರ, ಶಿವಪುತ್ರ ತಳವಾರ ಹಾಗೂ ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts