More

    ಅನನ್ಯ ಭಕ್ತಿಯಿಂದ ಆತ್ಮೋದ್ಧಾರ ಸಾಧ್ಯ

    ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಆಂಜನೇಯಸ್ವಾಮಿ ರಥೋತ್ಸವ ನಿಮಿತ್ತ ಎದುರು ಬಸವಣ್ಣ ಪ್ರತಿಮೆಯ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ ಜರುಗಿತು.

    ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನಮಠದ ವಿಶ್ವಾರಾಧ್ಯ ಶಿವಾಚಾರ್ಯರು ಪ್ರಾಣಪ್ರತಿಷ್ಠಾಪನೆ ನೆರವೇರಿಸಿ, ಇಷ್ಟ ದೇವರಲ್ಲಿ ಅಚಲ ನಂಬಿಕೆ, ವಿಶ್ವಾಸ, ಅನನ್ಯ ಭಕ್ತಿಯನ್ನು ಇರಿಸಿಕೊಂಡಲ್ಲಿ ಆತ್ಮೋದ್ಧಾರ ಸಾಧ್ಯ. ಧರ್ಮದ ಆಚಾರ-ವಿಚಾರಗಳಿಂದ ಯಾರೂ ವಿಮುಖರಾಗಬಾರದು ಎಂದರು.

    ಇದನ್ನು ಓದಿ:ಲಿಂಗ ತಾರತಮ್ಯ ತೊಡೆದು ಹಾಕಿದ್ದ ಬಸವಣ್ಣ

    ಕಂಪ್ಲಿಯ ಗಣೇಶ ದೇವಸ್ಥಾನದ ಅರ್ಚಕ ಜಡೆಯ್ಯಸ್ವಾಮಿ ವೃಂದ ಪೌರೋಹಿತ್ಯದಲ್ಲಿ ನವಗ್ರಹ ಹೋಮ ಸೇರಿ ನಾನಾ ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಿದವು.

    ಪ್ರಮುಖರಾದ ಶರಣಯ್ಯಸ್ವಾಮಿ ಒಡೆಯರ್, ಜಿ.ಮರೇಗೌಡ, ದೇವರಮನೆ ಹನುಮಂತಪ್ಪ, ಕುರಿ ಗಾದಿಲಿಂಗಪ್ಪ, ಗೌಡ್ರು ಅಂಜಿನಪ್ಪ, ಗೊರವರ ಆನಂದಪ್ಪ, ಪೋಸ್ಟ್ ಮಲ್ಲಯ್ಯ, ಗೊಲ್ಲರ ಹನುಮಯ್ಯ, ಗೌಡ್ರು ಸಿದ್ದಪ್ಪ, ಗ್ರಾಪಂ ಅಧ್ಯಕ್ಷೆ ಪೂಜಾರಿ ಈರಮ್ಮ ರಮೇಶ ಇತರರಿದ್ದರು.
    ರಥೋತ್ಸವ: ದೇವಲಾಪುರ ಗ್ರಾಮದಲ್ಲಿ ಆಂಜನೇಯಸ್ವಾಮಿ ರಥೋತ್ಸವ ಏ.9ರಂದು ಜರುಗಲಿದೆ. ಏ.7ರಂದು ಗಂಗೆ ಪೂಜೆ, ಕಳಸ ಮೆರವಣಿಗೆ, ಹೊಸ ರಥ ಪೂಜೆ, ಏ.8ರಂದು ಗಣಪತಿ ಹೋಮ ಜರುಗಲಿದೆ. ರಥದ ಕಳಸಕ್ಕೆ ಉತ್ತತ್ತಿ ಮಾತ್ರ ಸಮರ್ಪಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಿಸಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts