More

    ಮಣ್ಣು ಉಳಿಸಿ ಅಭಿಯಾನ ಆರಂಭ: 100 ದಿನ ಸದ್ಗುರು ಬೈಕ್​ ಯಾನ, 27 ರಾಷ್ಟ್ರಗಳಲ್ಲಿ 30 ಸಾವಿರ ಕಿ.ಮೀ. ಪ್ರಯಾಣ

    ಲಂಡನ್: ಯೋಗಿ ಮತ್ತು ದಾರ್ಶನಿಕ ಸದ್ಗುರು ಕೈಗೊಂಡಿರುವ “ಮಣ್ಣು ಉಳಿಸಿ” 100 ದಿನಗಳ ಬೈಕ್ ರ‍್ಯಾಲಿಗೆ ಇಂದು ಲಂಡನ್‌ನ ಪ್ರಖ್ಯಾತ ಟ್ರಾಫಲ್ಗರ್ ಸ್ಕ್ವೇರ್‌ನಲ್ಲಿ ಚಾಲನೆ ನೀಡಲಾಯಿತು. ಮಣ್ಣಿನ ಅವನತಿ ನಿಲ್ಲಿಸುವ ತುರ್ತು ಪ್ರಯತ್ನದಲ್ಲಿ ಮಣ್ಣನ್ನು ಉಳಿಸಲು ಕಾನ್ಷಿಯಸ್ ಪ್ಲ್ಯಾನೆಟ್ ಅಭಿಯಾನವನ್ನು ಸದ್ಗುರು ಅನಾವರಣಗೊಳಿಸಿದ್ದಾರೆ.

    ಯುಕೆ, ಯುರೋಪ್, ಮಧ್ಯಪ್ರಾಚ್ಯ ಮತ್ತು ಭಾರತದ ಮೂಲಕ ಹಾದುಹೋಗುವ 30,000 ಕಿಲೋಮೀಟರ್‌ಗಳ ಏಕಾಂಗಿ ಮೋಟಾರ್‌ ಸೈಕಲ್ ಪ್ರಯಾಣವನ್ನು ಪ್ರಾರಂಭಿಸುವ ಸದ್ಗುರು ಮುಂದಿನ ಕೆಲವು ತಿಂಗಳಲ್ಲಿ 27 ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಮಣ್ಣನ್ನು ಉಳಿಸಲು ಸಂಘಟಿತ ಕ್ರಮದ ತುರ್ತು ಅಗತ್ಯ ಒತ್ತಿಹೇಳಲು ಪ್ರಪಂಚದ ಪ್ರಮುಖ ನಾಯಕರು, ಮಾಧ್ಯಮಗಳು ಮತ್ತು ಪ್ರಪಂಚದಾದ್ಯಂತದ ಪ್ರಮುಖ ತಜ್ಞರೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ.

    ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (UNCCD) ಪ್ರಕಾರ, 2050ರ ವೇಳೆಗೆ ಭೂಮಿಯ ಶೇ. 90ಕ್ಕಿಂತ ಹೆಚ್ಚು ಮಣ್ಣು ಅವನತಿಗೊಳ್ಳಬಹುದು. ಇದು ಆಹಾರ ಮತ್ತು ನೀರಿನ ಕೊರತೆ, ಬರ ಮತ್ತು ಕ್ಷಾಮಗಳು, ಪ್ರತಿಕೂಲ ಹವಾಮಾನ ಬದಲಾವಣೆಗಳು, ಸಾಮೂಹಿಕ ವಲಸೆಗಳು ಮತ್ತು ಜೀವಜಾತಿಗಳ ಅಭೂತಪೂರ್ವ ಅಳಿವು ಸೇರಿ ಪ್ರಪಂಚದಾದ್ಯಂತ ದುರಂತದ ಬಿಕ್ಕಟ್ಟುಗಳಿಗೆ ಕಾರಣವಾಗಬಹುದು. ಈ ‘ಮಣ್ಣಿನ ಅಳಿವು’ ಇದೀಗ ನಾಗರಿಕತೆಗೆ ಗಂಭೀರ ಸವಾಲಾಗಿದೆ. ಏಕೆಂದರೆ ನಮ್ಮ ಪ್ರಪಂಚವು ತ್ವರಿತವಾದ ಮಣ್ಣಿನ ಅವನತಿಯಿಂದಾಗಿ ಆಹಾರವನ್ನು ಬೆಳೆಯುವ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ.

    ಮಣ್ಣು ಉಳಿಸಿ ಅಭಿಯಾನ ಆರಂಭ: 100 ದಿನ ಸದ್ಗುರು ಬೈಕ್​ ಯಾನ, 27 ರಾಷ್ಟ್ರಗಳಲ್ಲಿ 30 ಸಾವಿರ ಕಿ.ಮೀ. ಪ್ರಯಾಣ

    “ಮಣ್ಣು ಉಳಿಸಿ” ಅಭಿಯಾನವು ರಾಷ್ಟ್ರಗಳಾದ್ಯಂತ ನಾಗರಿಕರ ಬೆಂಬಲವನ್ನು ಸಕ್ರಿಯಗೊಳಿಸಲು ಮತ್ತು ಪ್ರದರ್ಶಿಸಲು ಪ್ರಯತ್ನಿಸುತ್ತದೆ ಮತ್ತು ಮಣ್ಣನ್ನು ಪುನರುಜ್ಜೀವನಗೊಳಿಸಲು ಮತ್ತು ಇನ್ನಷ್ಟು ಅವನತಿ ತಡೆಯಲು ನೀತಿ-ಚಾಲಿತ ಕ್ರಮವನ್ನು ಪ್ರಾರಂಭಿಸಲು ಸರ್ಕಾರಗಳಿಗೆ ಪ್ರೋತ್ಸಾಹ ನೀಡುತ್ತದೆ. ಇದನ್ನು ಸಕ್ರಿಯಗೊಳಿಸಲು, ಅಭಿಯಾನವು 350 ಕೋಟಿ ಜನರನ್ನು ತಲುಪುವ ಗುರಿ ಹೊಂದಿದೆ, ಇದು ಪ್ರಪಂಚದ ಮತದಾರರಲ್ಲಿ ಶೆ. 60ರಷ್ಟು.

    ಕಳೆದ ವಾರದಲ್ಲಿ, ಆರು ಕೆರಿಬಿಯನ್ ರಾಷ್ಟ್ರಗಳು ಮಣ್ಣು ಉಳಿಸಿ ಅಭಿಯಾನಕ್ಕೆ ಭಾವೋದ್ರಿಕ್ತ ಬದ್ಧತೆಯ ಅಭಿವ್ಯಕ್ತಿಯಾಗಿ ಕಾನ್ಷಿಯಸ್ ಪ್ಲಾನೆಟ್‌ನೊಂದಿಗೆ ಒಡಂಬಡಿಕೆಯ ಪತ್ರಗಳಿಗೆ ಸಹಿ ಹಾಕುವ ಐತಿಹಾಸಿಕ ಮೊದಲ ಹೆಜ್ಜೆಯನ್ನು ತೆಗೆದುಕೊಂಡಿವೆ.

    ಖ್ಯಾತ ಸಂರಕ್ಷಣಾವಾದಿ ಡಾ. ಜೇನ್ ಗುಡಾಲ್, ಪೂಜ್ಯ ದಲೈ ಲಾಮಾ ಮತ್ತು ವಿಶ್ವ ಆರ್ಥಿಕ ವೇದಿಕೆ (WEF) ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಅವರಂತಹ ಜಾಗತಿಕ ನಾಯಕರು ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಮಾರ್ಕ್ ಬೆನಿಯೋಫ್ (ಸೇಲ್ಸ್‌ಫೋರ್ಸ್), ದೀಪಕ್ ಚೋಪ್ರಾ, ಟೋನಿ ರಾಬಿನ್ಸ್, ಮ್ಯಾಥ್ಯೂ ಹೇಡನ್, ಕ್ರಿಸ್ ಗೇಲ್, ಜೂಹಿ ಚಾವ್ಲಾ ಮತ್ತು ಸಂಜೀವ್ ಸನ್ಯಾಲ್‌ರಂತಹ ಹಲವಾರು ಪ್ರಸಿದ್ಧ ಕಲಾವಿದರು, ಕ್ರೀಡಾ ವ್ಯಕ್ತಿಗಳು, ಕಾರ್ಪೊರೇಟ್ ಮುಖ್ಯಸ್ಥರು ಮತ್ತು ವಿವಿಧ ಕ್ಷೇತ್ರಗಳ ಪರಿಣತರು ಈ ಚಳುವಳಿಯನ್ನು ಬೆಂಬಲಿಸಿದ್ದಾರೆ.

    ಮಧ್ಯರಾತ್ರಿಯಲ್ಲಿ ಓಡೋ ಹುಡುಗ.. ಪರೀಕ್ಷೆಗೂ ಮೊದಲೇ ಸೇನಾಧಿಕಾರಿಯ ಮನಗೆದ್ದ..!

    ಭಗ್ನ ಪ್ರೇಯಸಿ ಉಪನ್ಯಾಸಕಿ; ಪ್ರಿಯಕರನ ಮದುವೆ ದಿನವೇ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts